ರಾಮನಗರ:ವೋಟರ್ ಐಡಿ ಅಕ್ರಮದಲ್ಲಿ ಒಬ್ಬ ಕಿಂಗ್‌ಪಿನ್ ಬಂಧಿಸಿದರೆ ಸಾಲದು. ಅಕ್ರಮದ ಹಿಂದೆ ಯಾರಿದ್ದಾರೆ, ಯಾವ ರಾಜಕಾರಣಿಗಳು ಇದ್ದಾರೆ ಎಂಬುದು ಬಯಲಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದರು.
ಕನಕಪುರ ತಾಲೂಕಿನ ಬಿಳಿದಾಳೆ ಗ್ರಾಮದ ಜಡೆಲಿಂಗೇಶ್ವರ ಸ್ವಾಮಿ ದೇಗುಲದ ನೂತನ ವಿಗ್ರಹಗಳ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ವೋಟರ್ ಐಡಿ ಹಗರಣದಲ್ಲಿ ಬಿಜೆಪಿಯವರು ಹಣ್ಣು ತಿಂದವರನ್ನು ಬಿಟ್ಟು ಸಿಪ್ಪೆ ತಿಂದವರನ್ನು ಹಿಡಿದು ತೋರಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.