ಕರ್ನಾಟಕ

karnataka

ETV Bharat / state

ದೇವಸ್ಥಾನಗಳಲ್ಲಿ ನಗಾರಿ ಬಾರಿಸಿ, ಮಸೀದಿಗೆ ತೆರಳಿ ಪ್ರಾರ್ಥಿಸಿ.. ಪಾದಯಾತ್ರೆಗೂ ಮೊದಲು ದೇವರ ಮೊರೆ ಹೋದ ಡಿಕೆಶಿ..

ಪ್ರಧಾನಿ ಹೇಳಿದ ಹಾಗೇ ಚಪ್ಪಾಳೆ ತಟ್ಟಿದ್ದೇವೆ, ಜಾಗಟೆ ಬಾರಿಸಿದ್ದೇವೆ, ದೀಪ ಹಚ್ಚಿದ್ದೇವೆ. ನಾವು ಮಾಡಿದ್ರೆ ತಪ್ಪು, ಇವರು ಏನು ಬೇಕಾದ್ರೂ ಮಾಡಬಹುದಾ?. ಹಾಗಾದ್ರೆ, ವಿಧಾನಸೌಧದಲ್ಲಿ ಸಭೆ ಯಾಕೆ ಮಾಡಿದ್ರು ಎಂದು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು ಡಿಕೆಶಿ..

ಡಿಕೆಶಿ ಟೆಂಪಲ್​ ರನ್​​
ಡಿಕೆಶಿ ಟೆಂಪಲ್​ ರನ್​​

By

Published : Jan 8, 2022, 3:34 PM IST

ರಾಮನಗರ :ಪಾದಯಾತ್ರೆ ಮಾಡುವ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುಟುಂಬ ಸಮೇತರಾಗಿ‌ ತಮ್ಮ ಸ್ವಕ್ಷೇತ್ರ ಕನಕಪುರದಲ್ಲಿರುವ ಮನೆ ದೇವರು ಸೇರಿ, ಪ್ರಮುಖ ದೇವಾಲಯ ಹಾಗೂ ಜಾಮಿಯಾ ಮಸೀದಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಮೊದಲಿಗೆ ಅವರ ಮನೆ ದೇವರು ಕೆಂಕೇರಮ್ಮ ಹಾಗೂ ಸಾತನೂರು ಬಳಿ ಇರುವ ಕಬ್ಬಾಳಮ್ಮ ದೇವಸ್ಥಾನಕ್ಕೆ ಪತ್ನಿ ಸಮೇತರಾಗಿ ಬಂದು ವಿಶೇಷ ಪೂಜೆ ನೆರವೇರಿಸಿದರು. ಹಾಗೆಯೇ ಕಬ್ಬಾಳಮ್ಮ ದೇವರಿಗೆ ಪತ್ನಿ ಉಷಾ ಶಿವಕುಮಾರ್ ಜೊತೆಗೆ 9 ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು.

ಕಬ್ಬಾಳಮ್ಮ ದೇವಸ್ಥಾನದಲ್ಲಿ ನಗಾರಿ ಹೊಡೆಯುವ ಮೂಲಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಹಾಗೆಯೇ, ನಗರದಲ್ಲಿರುವ ಜಾಮೀಯಾ ಮಸೀದಿಗೆ ಮುಸ್ಲಿಂ ಬಾಂಧವರಂತೆ ತಲೆಗೆ ಟೋಪಿ ಹಾಕಿಕೊಂಡು ನಮಾಜ್ ಕೂಡ ಮಾಡಿದರು.

ಕುಟುಂಬ ಸಮೇತರಾಗಿ ಡಿಕೆಶಿ ವಿವಿಧ ದೇವಸ್ಥಾನಗಳಲ್ಲಿ ಪೂಜೆ..​​

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಮಂತ್ರಿಗಳಿಗೆ ನಾವು ಗೌರವ ಕೊಡುತ್ತೇವೆ. ಆದರೆ, ಅವರು ಸರಿಯಾಗಿ ನಡೆದುಕೊಳ್ಳಬೇಕು. ನಮಗೆ ವೈಯಕ್ತಿಕವಾಗಿ ಅವರ ಬಗ್ಗೆ ಬೇಸರವಿಲ್ಲ. ಈಗ ನಮ್ಮ ಹುಡುಗರು ವಿಜಯಪುರ ಹಾಗೂ ಇತರೆ ಕಡೆಯಿಂದ ವಿಡಿಯೋ ಕಳುಸುತ್ತಿದ್ದಾರೆ. ಅಲ್ಲಿಯೂ ಕೂಡ ನಮ್ಮ ಕಾರ್ಯಕರ್ತರ ವಿರುದ್ಧ ಕೇಸ್ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ರಾಮನಗರದಲ್ಲಿ ಯಾವ ಕೊರೊನಾ ಕೇಸ್ ಇಲ್ಲ. ಇಲ್ಲಿ ಯಾಕೆ ನಿರ್ಬಂಧ ಹಾಕ್ತಾರೆ ಗೊತ್ತಿಲ್ಲ. ಒಬ್ಬ ಗೃಹ ಸಚಿವರಾಗಿ ರೇಪ್ ಮಾಡಿದರೂ ಕಾಂಗ್ರೆಸ್‌ನವರು ಅಂತಾರೆ. ನಾನು ರೇಪ್ ಮಾಡಿದ್ನಾ, ಸಿದ್ದರಾಮಯ್ಯ ಮಾಡಿದ್ರಾ. ನಾವು ಅವರಿಗೆ ಶಿರಭಾಗಿ ನಮಸ್ಕರಿಸುತ್ತೇನೆ. ಆದರೆ, ಅವರು ಸಹ ಕಾನೂನು ರೀತಿ ನಡೆದುಕೊಳ್ಳಬೇಕು ಎಂದರು.

ಪ್ರಧಾನಿ ಹೇಳಿದ ಹಾಗೇ ಚಪ್ಪಾಳೆ ತಟ್ಟಿದ್ದೇವೆ, ಜಾಗಟೆ ಬಾರಿಸಿದ್ದೇವೆ, ದೀಪ ಹಚ್ಚಿದ್ದೇವೆ. ನಾವು ಮಾಡಿದ್ರೆ ತಪ್ಪು, ಇವರು ಏನು ಬೇಕಾದ್ರೂ ಮಾಡಬಹುದಾ?. ಹಾಗಾದ್ರೆ, ವಿಧಾನಸೌಧದಲ್ಲಿ ಸಭೆ ಯಾಕೆ ಮಾಡಿದ್ರು ಎಂದು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.

ABOUT THE AUTHOR

...view details