ರಾಮನಗರ:ಕೊಂಡ ಹಾಯುವಾಗ ಬಿದ್ದು ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ದೇವಿಯ ಕೊಂಡಕ್ಕೆ ಬಿದ್ದು ವ್ಯಕ್ತಿಗೆ ಗಂಭೀರ ಗಾಯ ಅಜ್ಜೇಗೌಡ (45) ಕೊಂಡಕ್ಕೆ ಬಿದ್ದ ವ್ಯಕ್ತಿ. ದೊಡ್ಡ ಆಲಹಳ್ಳಿ ಗ್ರಾಮದಲ್ಲಿ ಕೊಲ್ಲಾಪುರದಮ್ಮ ದೇವಿಯ ಕೊಂಡ ಮಹೋತ್ಸವ ನಡೆಸಲಾಯಿತು. ಈ ಸಂದರ್ಭದಲ್ಲಿ ಕೊಂಡ ಹಾಯಲು ಮುಂದಾದ ಅಜ್ಜೇಗೌಡ, ಮುಗ್ಗರಿಸಿ ಕೆಂಡದ ಮೇಲೆಯೇ ಬಿದ್ದಿದ್ದಾರೆ.
ಓದಿ:ನಾನು ಹಾಳಾಗಿದ್ದು ಸಿದ್ದರಾಮಯ್ಯನನ್ನು ಉದ್ಧಾರ ಮಾಡಲು ಹೋಗಿ: ಎಚ್.ವಿಶ್ವನಾಥ್ ಕಿಡಿ
ಪರಿಣಾಮ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗೆಂದು ಕನಕಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಲೂಕು ಆಡಳಿತ ಎಚ್ಚರಿಕೆ ವಹಿಸಬೇಕು:
ಕಳೆದ ವರ್ಷ ಕೂಡ ಕನಕಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಡೆದ ಕೊಂಡೋತ್ಸದಲ್ಲಿ ಇದೇ ರೀತಿಯ ಪ್ರಕರಣಗಳು ನಡೆದಿವೆ. ಜಾತ್ರಾ ಮಹೋತ್ಸವದ ವೇಳೆ ಹಲವು ಮುಂಜಾಗ್ರತಾ ಕ್ರಮ ವಹಿಸಿದರೂ ಇಂತಹ ಕಹಿ ಘಟನೆಗಳು ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಆಗದಂತೆ ಮತ್ತಷ್ಟು ಕಠಿಣ ನಿರ್ಧಾರಗಳು ಕೈಗೊಳ್ಳಬೇಕಿದೆ.