ಕರ್ನಾಟಕ

karnataka

ETV Bharat / state

ಹೆಚ್​ಡಿಡಿ, ಹೆಚ್​ಡಿಕೆ ವಿರುದ್ಧ ಮಾತನಾಡಿದವರ ಗತಿ ಏನಾಗಿದೆ ಗೊತ್ತಿದೆಯಲ್ಲ.. ರಾಜಣ್ಣಗೆ ಅನಿತಾ ಕುಮಾರಸ್ವಾಮಿ ವಾರ್ನಿಂಗ್​ - Condemnation for derogatory statement against former Prime Minister Deve Gowda

ಹೆಚ್​ ಡಿ ದೇವೇಗೌಡರ ಬಗ್ಗೆ ಅವಹೇಳನಕಾರಿ ಹೇಳಿಕೆ-ಬಹಿರಂಗವಾಗಿ ಕ್ಷಮೆಯಾಚಿಸಿ- ಕೆ ಎನ್​ ರಾಜಣ್ಣಗೆ ಶಾಸಕಿ ಅನಿತಾ ಕುಮಾರಸ್ವಾಮಿ ಆಗ್ರಹ

kn-rajannas-derogatory-statement-condemned-by-minister-anitha-kumarswami
ರಾಜಣ್ಣ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು : ಶಾಸಕಿ ಅನಿತಾ ಕುಮಾರಸ್ವಾಮಿ

By

Published : Jul 2, 2022, 6:53 PM IST

ರಾಮನಗರ : ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ನಾಚಿಕೆ ಆಗಬೇಕು. ನನ್ನ ಮಾವನವರ ವಿರುದ್ಧ ಅವಹೇಳನಕಾರಿ‌ ಹೇಳಿಕೆ ನೀಡಿರುವುದು ಖಂಡನೀಯ. ಈ ಕೂಡಲೇ ಅವರು ಸಾರ್ವಜನಿಕವಾಗಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಶಾಸಕಿ ಅನಿತಾಕುಮಾರಸ್ವಾಮಿ ಗುಡುಗಿದ್ದಾರೆ.

ರಾಮನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಣ್ಣ ಅವಿವೇಕತನದ ಪ್ರದರ್ಶನ ಮಾಡಿದ್ದಾರೆ. ರಾಜಣ್ಣರ ಆಕ್ಷೇಪಾರ್ಹ ಹೇಳಿಕೆಯನ್ನು ಖಂಡಿಸುತ್ತೇನೆ. ಇಂತಹ ಹೇಳಿಕೆ ಯಾರಿಗೂ ಶೋಭೆತರುವಂತದ್ದಲ್ಲ. ದೇವೇಗೌಡರು, ಕುಮಾರಸ್ವಾಮಿ ವಿರುದ್ಧ ಮಾತನಾಡಿದವರೆಲ್ಲ ಏನೇನ್ ಆಗಿದ್ದಾರೆ ಗೊತ್ತಿದೆಯಲ್ಲ. ಅವರಿಗೂ ಕೂಡ ಇದೇ ಗತಿ ಆಗುತ್ತದೆ. ಕ್ಷಮೆಯಾಚನೆ ಮಾಡದೇ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ. ಈ ಬಗ್ಗೆ ರಾಜಣ್ಣ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ರಾಜಣ್ಣ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು : ಶಾಸಕಿ ಅನಿತಾ ಕುಮಾರಸ್ವಾಮಿ

ಕಾಂಗ್ರೆಸ್ ನಾಯಕರು ಇನ್ನೂ ಇಂತವರನ್ನು ಪಕ್ಷದಲ್ಲಿ ಇಟ್ಟುಕೊಂಡಿದ್ದಾರೆ. ನಾವೆಂದಿಗೂ ಅವರ ಹೇಳಿಕೆಯನ್ನು ಕ್ಷಮಿಸುವುದಿಲ್ಲ. ಅವರ ನೀಚ ಬುದ್ಧಿಯಿಂದಲೇ ಮಧುಗಿರಿ ‌ಜನತೆ ಅವರನ್ನು ಸೋಲಿಸಿದ್ದಾರೆ. ಇನ್ನೂ ಅವರಿಗೆ ಬುದ್ಧಿ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಓದಿ :ಪೌರ ಕಾರ್ಮಿಕರ ಬೇಡಿಕೆ ಈಡೇರಿಕೆ.. ಭರವಸೆ ಸಾಲದು, ಅಧಿಕೃತ ಆದೇಶ ಹೊರಡಿಸಿ ಎಂದ ಸಿದ್ದರಾಮಯ್ಯ

ABOUT THE AUTHOR

...view details