ಕರ್ನಾಟಕ

karnataka

ETV Bharat / state

ಪರೀಕ್ಷೆ ರದ್ದು ಮಾಡದಿದ್ದಲ್ಲಿ ಉಗ್ರ ಚಳುವಳಿ; ವಾಟಾಳ್ ಎಚ್ಚರಿಕೆ

ಪರೀಕ್ಷೆ ಬೇಡ ಎಂದು ಅರ್ಧ ತಾಸು ಮನೆಯಲ್ಲೆ ಸತ್ಯಾಗ್ರಹ ಮಾಡಬೇಕೆಂದು ವಿದ್ಯಾರ್ಥಿಗಳಲ್ಲಿ ವಾಟಾಳ್ ಮನವಿ ಮಾಡಿದರು. ಒಂದು ವೇಳೆ ಪರೀಕ್ಷೆ ರದ್ದು ಮಾಡದಿದ್ದಲ್ಲಿ ಉಗ್ರ ಚಳುವಳಿ ಮಾಡಬೇಕಾಗುತ್ತದೆ ಎಂದು ಸಚಿವ ಸುರೇಶ್ ಕುಮಾರ್ ಅವರಿಗೆ ವಾಟಾಳ್ ನಾಗರಾಜ್ ಇದೇ ವೇಳೆ ಎಚ್ಚರಿಸಿದರು.

kannada-fighter-vaatal-nagaraj-talk
ವಾಟಾಳ್ ಎಚ್ಚರಿಕೆ

By

Published : May 28, 2021, 8:47 PM IST

ರಾಮನಗರ:ರಾಜ್ಯದಲ್ಲಿ ಪಿಯುಸಿ ಹಾಗೂ ಎಸ್​​ಎಸ್​​ಎಲ್​​ಸಿ ಪರೀಕ್ಷೆಗಳನ್ನ ರದ್ದು ಮಾಡಬೇಕು, ಪರೀಕ್ಷೆಗಳಿಲ್ಲದೆ ವಿದ್ಯಾರ್ಥಿಗಳನ್ನ ಪಾಸ್ ಮಾಡಬೇಕು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದರು.

ವಾಟಾಳ್ ಎಚ್ಚರಿಕೆ

ಓದಿ: ಕಟ್ಟಡ ಕುಸಿದು 6 ಮಂದಿ ಸಾವು ಪ್ರಕರಣ: ಪರಿಹಾರ ಕೋರಿಕೆ ಅರ್ಜಿ ಪರಿಗಣಿಸಿದ ಹೈಕೋರ್ಟ್

ರಾಮನಗರದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಜತೆಗೆ ಸಚಿವ ಸುರೇಶ್ ಕುಮಾರ್ ಆಟವಾಡಬಾರದು. 12 ತಿಂಗಳಲ್ಲಿ ಕೇವಲ 2 ತಿಂಗಳು ಆನ್​​ಲೈನ್ ಕ್ಲಾಸ್ ಮಾಡಿ‌ ಪರೀಕ್ಷೆ ಬರೆಯಿರಿ‌ ಅಂದ್ರೆ ಹೇಗೆ...?. ಜೂ.1 ರಂದು ರಾಜ್ಯ ಪಿಯುಸಿ ಹಾಗೂ ಎಸ್​​ಎಸ್​​ಎಲ್​ಸಿ ವಿದ್ಯಾರ್ಥಿಗಳು ಮನೆಯಲ್ಲಿ ಸತ್ಯಾಗ್ರಹ ಮಾಡಬೇಕು.

ಪರೀಕ್ಷೆ ಬೇಡ ಎಂದು ಅರ್ಧ ತಾಸು ಮನೆಯಲ್ಲೆ ಸತ್ಯಾಗ್ರಹ ಮಾಡಬೇಕೆಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು. ಒಂದು ವೇಳೆ ಪರೀಕ್ಷೆ ರದ್ದು ಮಾಡದಿದ್ದಲ್ಲಿ ಉಗ್ರ ಚಳುವಳಿ ಮಾಡಬೇಕಾಗುತ್ತದೆ ಎಂದು ಸಚಿವ ಸುರೇಶ್ ಕುಮಾರ್ ಅವರಿಗೆ ವಾಟಾಳ್ ನಾಗರಾಜ್ ಇದೇ ವೇಳೆ ಎಚ್ಚರಿಸಿದರು.

ABOUT THE AUTHOR

...view details