ರಾಮನಗರ :ಕೊರೊನಾ ವೈರಸ್ ವಿರುದ್ಧ ಜೀವವನ್ನು ಪಣಕ್ಕಿಟ್ಟು ದುಡಿಯುತ್ತಿರುವ ಸಾವಿರಾರು ಕೊರೊನಾ ವಾರಿಯರ್ಸ್‌ಗಳಿಗಾಗಿ 1ಲಕ್ಷಕ್ಕೂ ಅಧಿಕ ಮಾಸ್ಕ್ಗಳನ್ನು ತಯಾರಿಸಿ, ಉಚಿತವಾಗಿ ವಿತರಿಸುವ ಮೂಲಕ ಕೊರೊನಾ ವಿರುದ್ಧದ ಹೋರಾಟಕ್ಕೆ ಕನಕಾಂಬರಿ ಮಹಿಳಾ ಒಕ್ಕೂಟ ಕೈ ಜೋಡಿಸಿದೆ.
ಕೊರೊನಾ ವಾರಿಯರ್ಸ್ ಬೆನ್ನಿಗೆ ನಿಂತ ಕನಕಾಂಬರಿ ಮಹಿಳಾ ಒಕ್ಕೂಟ.. - ಕನಕಾಂಬರಿ ಮಹಿಳಾ ಒಕ್ಕೂಟ
ಈ ಒಕ್ಕೂಟದ ಅಡಿಯಲ್ಲಿ 100ಕ್ಕೂ ಹೆಚ್ಚು ಗ್ರಾಮೀಣ ಭಾಗದ ಮಹಿಳೆಯರು ಕಾರ್ಯ ಪ್ರವೃತ್ತರಾಗಿದ್ದಾರೆ. ಪ್ರತಿ ಮಾಸ್ಕ್ ತಯಾರಿಗೆ 3ರೂ. ಪ್ರೋತ್ಸಾಹ ಧನ ನಿಗದಿಪಡಿಸಲಾಗಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕನಕಾಂಬರಿ ಮಹಿಳಾ ಒಕ್ಕೂಟ, ಕೋವಿಡ್-19 ರೋಗವನ್ನು ತಡೆಗಟ್ಟಲು ಬೇಕಿರುವ ಮಾಸ್ಕ್ಗಳನ್ನು ತಯಾರಿಸುತ್ತಿದೆ. ಈ ಒಕ್ಕೂಟದ ಅಡಿಯಲ್ಲಿ 100ಕ್ಕೂ ಹೆಚ್ಚು ಗ್ರಾಮೀಣ ಭಾಗದ ಮಹಿಳೆಯರು ಕಾರ್ಯ ಪ್ರವೃತ್ತರಾಗಿದ್ದಾರೆ. ಪ್ರತಿ ಮಾಸ್ಕ್ ತಯಾರಿಗೆ 3ರೂ. ಪ್ರೋತ್ಸಾಹ ಧನ ನಿಗದಿಪಡಿಸಲಾಗಿದೆ.
ಹೀಗೆ ಮನೆಗಳಲ್ಲಿ ತಯಾರಾದ 1 ಲಕ್ಷಕ್ಕೂ ಅಧಿಕ ಮಾಸ್ಕ್ಗಳನ್ನು ಸಂಗ್ರಹಿಸಿದ ಕನಕಾಂಬರಿ ಮಹಿಳಾ ಒಕ್ಕೂಟ, ಜಿಲ್ಲಾಡಳಿತಕ್ಕೆ ನೀಡುತ್ತಿದೆ. ಅಲ್ಲದೆ ತನ್ನ ಒಕ್ಕೂಟದ ಸದಸ್ಯರು, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗೆ ಉಚಿತವಾಗಿ ವಿತರಿಸಿ ಮಾನವೀಯತೆ ಮೆರೆದಿದೆ.