ರಾಮನಗರ :ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಶಾಸಕದ್ವಯರ ಹೊಡೆದಾಟ ಪ್ರಕರಣ ಸಂಬಂಧ ಇಂದು ಕಂಪ್ಲಿ ಗಣೇಶ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ನ್ಯಾಯಾಲಯದಲ್ಲಿ ಹಾಜರಾಗಿದ್ರು ಕಂಪ್ಲಿ ಗಣೇಶ್.. ಯಾಕೆ ಗೊತ್ತಾ? - ರಾಮನಗರ ಸುದ್ದಿ
ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಶಾಸಕದ್ವಯರ ಹೊಡೆದಾಟ ಪ್ರಕರಣ ಸಂಬಂಧ ಇಂದು ಕಂಪ್ಲಿ ಗಣೇಶ್ ನ್ಯಾಯಾಲಯದಲ್ಲಿ ಹಾಜರಾಗಿದ್ದರು.

ಶಾಸಕ ಕಂಪ್ಲಿ ಗಣೇಶ್
ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಜನವರಿ 19 ರಂದು ರಾತ್ರಿ ಶಾಸಕರು ವಾಸ್ತವ್ಯ ಹೂಡಿದ್ದ ವೇಳೆ ಬಳ್ಳಾರಿ ಶಾಸಕ ಆನಂದ್ ಸಿಂಗ್ ಮೇಲೆ ಶಾಸಕ ಕಂಪ್ಲಿ ಗಣೇಶ್ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ನ್ಯಾಯಾಲಯದಲ್ಲಿ ಹಾಜರಾಗಿದ್ರು ಕಂಪ್ಲಿ ಗಣೇಶ್
ವಿಚಾರಣೆಗಾಗಿ ಖುದ್ದು ಕಂಪ್ಲಿ ಶಾಸಕ ಗಣೇಶ್ ಹಾಜರಾಗಿದ್ದರು. ಹಿರಿಯ ವಕೀಲ ಆರ್ ಟಿ ಕೃಷ್ಣ ಮೃತರಾಗಿರುವ ಹಿನ್ನೆಲೆಯಲ್ಲಿ ವಕೀಲರು ಪಾಲ್ಗೊಳ್ಳದೇ ಕಲಾಪದಿಂದ ದೂರ ಉಳಿದಿದ್ದರು. ಈ ಹಿನ್ನೆಲೆಯಲ್ಲಿ ಸ್ವತಃ ಕಂಪ್ಲಿ ಗಣೇಶ್ ತಮ್ಮ ಪರ ವಕಾಲತ್ತು ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ ವಿಚಾರಣೆ ದಿನಾಂಕವನ್ನು ನವೆಂಬರ್ 14ಕ್ಕೆ ಮುಂದೂಡಿದೆ.
Last Updated : Oct 17, 2019, 11:26 PM IST