ರಾಮನಗರ: ಜಿಲ್ಲಾಡಳಿತದ ವತಿಯಿಂದ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಆವರಣದಲ್ಲಿ ಪ್ರಥಮ ಬಾರಿಗೆ ಜೇನು ಮೇಳವನ್ನ ಆಯೋಜನೆ ಮಾಡಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ರೈತರು ಆಗಮಿಸಿ ತಾವು ಸಾಕಿದ್ದ ಜೇನು ಪ್ರದರ್ಶನ ಮಾಡಿದರು.
ರಾಮನಗರದಲ್ಲಿ ಜೇನು ಮೇಳ: ತುಪ್ಪ ಖರೀದಿಸಿ ಖುಷಿ ಪಟ್ಟ ಜನ - ರಾಮನಗರದಲ್ಲಿ ಜೇನು ಮೇಳ ಆಯೋಜನೆ ಸುದ್ದಿ
ರಾಮನಗರದಲ್ಲಿ ಜಿಲ್ಲಾಡಳಿತದ ವತಿಯಿಂದ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಆವರಣದಲ್ಲಿ ಪ್ರಥಮ ಬಾರಿಗೆ ಜೇನು ಮೇಳವನ್ನ ಆಯೋಜನೆ ಮಾಡಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ರೈತರು ಆಗಮಿಸಿ ತಾವು ಸಾಕಿದ್ದ ಜೇನು ಪ್ರದರ್ಶನ ಮಾಡಿದರು.

ರಾಮನಗರದಲ್ಲಿ ಜೇನು ಮೇಳ ಆಯೋಜನೆ
ರಾಮನಗರದಲ್ಲಿ ಜೇನು ಮೇಳ ಆಯೋಜನೆ
ತೋಟಗಾರಿಕೆ ಇಲಾಖೆಯವರು ರೈತರಿಗಾಗಿ ಸ್ಟಾಲ್‌ಗಳನ್ನ ನಿರ್ಮಿಸಿದ್ದರು. ರಾಜ್ಯ ಸರ್ಕಾರ ಹಸು ಸಾಕಾಣೆ, ಕುರಿ ಸಾಕಾಣೆ ಜೊತೆಗೆ ಜೇನು ಸಾಕಾಣೆಗೂ ಅನುದಾನ ಕೊಡುತ್ತಿದೆ. ಮುಂದಿನ ದಿನಗಳಲ್ಲಿ ಜೇನು ಸಾಕಾಣೆಗೆ ರೈತರು ಆಸಕ್ತಿ ತೋರಿಸಬೇಕು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿ ಗುಣವಂತ್ ಹೇಳಿದರು.
ಜೇನು ಮೇಳದಲ್ಲಿ ಬಳ್ಳಾರಿ, ಮೈಸೂರು ಸೇರಿದಂತೆ ಹಲವು ಭಾಗಗಳಿಂದ ಜೇನು ಹುಳುಗಳನ್ನ ತಂದು ರೈತರು ಪ್ರದರ್ಶನಕ್ಕೆ ಇಟ್ಟಿದ್ದರು. ಮೇಳದಲ್ಲಿ ಜೇನು ತುಪ್ಪ ಮಾರಾಟ ಸಹ ಮಾಡಲಾಯಿತು.