ರಾಮನಗರ:ಬಿಡದಿ ಪುರಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಜೆಡಿಎಸ್ ಸ್ಪಷ್ಟ ಬಹುಮತ ಪಡೆದಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.
ಪಟ್ಟಣ ಪಂಚಾಯಿತಿ ಚುನಾವಣೆ ಫಲಿತಾಂಶದ ಬಗ್ಗೆ ಹೆಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ರಾಮನಗರ ಜಿಲ್ಲೆ ಬಿಡದಿಯ ಕೇತುಗಾನಗಳ್ಳಿ ತೋಟದ ಮನೆಯಲ್ಲಿ ಮಾತನಾಡಿ ಅವರು, ನಾವು ಈ ಚುನಾವಣೆಯಲ್ಲಿ 18-20 ಸ್ಥಾನ ಗೆಲ್ಲುತ್ತೇವೆ ಎಂಬ ವಿಶ್ವಾಸವಿತ್ತು. ಇದೀಗ 14 ಸ್ಥಾನಗಳನ್ನು ಗೆದ್ದಿದ್ದೇವೆ ಎಂದರು.
ಬಾನಂದೂರು ವ್ಯಾಪ್ತಿಯ ಎರಡು ಸ್ಥಾನಗಳು ನಮ್ಮಿಂದಲೇ ಹೋಗಿವೆ. ಬಿಡದಿಯ ಮತದಾರರು ದುಡಿಮೆಗೆ ಮತದಾನ ಮಾಡಿದ್ದಾರೆ. ಬಿಡದಿಯಿಂದಲೇ ನನಗೆ ರಾಜಕೀಯ ಜನ್ಮ ಸಿಕ್ಕಿದ್ದು. ಅದು ಪುನರಾವರ್ತನೆಯಾಗಿದೆ. ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇದಲ್ಲದೇ ಮುಂದಿನ 2023ರ ಚುನಾವಣೆಯ ಹೋರಾಟಕ್ಕೆ ಮಾನಸಿಕ ಶಕ್ತಿ ತುಂಬಿದ್ದಾರೆ ಎಂದರು.
ಕಾಂಗ್ರೆಸ್ನವರು ಸಾಕಷ್ಟು ಆರೋಪ ಮಾಡಿದ್ದರು. ಜೆಡಿಎಸ್ ಪಕ್ಷವನ್ನು ಕೇತಿಗಾನಹಳ್ಳಿಯ ಹಳ್ಳಕ್ಕೆ ನೂಕುತ್ತೇವೆ ಎಂದು ಹೇಳಿದ್ದರು. ಹಲವು ಕ್ಷೇತ್ರದಲ್ಲಿ ಜನರು ಇದಕ್ಕೆ ತಕ್ಕೆ ಉತ್ತರ ಕೊಟ್ಟಿದ್ದಾರೆ. ಕೆಲವು ಕಡೆ ನಮ್ಮ ಪಕ್ಷದ ಬೆಂಬಲ ಸಿಗದೆ ಯಾವ ಪಕ್ಷ ಕೂಡ ಆಡಳಿತ ನಡೆಸಲು ಸಾಧ್ಯವಿಲ್ಲ. ಆರ್ಥಿಕವಾಗಿ ನಾವು ಯಾರಿಗೂ ಶಕ್ತಿ ತುಂಬಲು ಸಾಧ್ಯವಾಗಿಲ್ಲ. ಜನರೇ ಹೋರಾಟ ಮಾಡಿಕೊಂಡು ಚುನಾವಣೆ ಮಾಡಿದ್ದಾರೆ. ಮುಂದಿನ ಒಂದು ವರ್ಷ ಬಿಡುವು ತೆಗೆದುಕೊಳ್ಳದೇ ಜನರ ಬಳಿ ಹೋಗಿ ಪಕ್ಷ ಸಂಘಟಿಸುತ್ತೇನೆ ಎಂದರು.
ಬಿಡದಿ ಪುರಸಭೆಯಲ್ಲಿ ವಿಜೇತ ಅಭ್ಯರ್ಥಿಗಳ ವಿವರ:
- 1ನೇ ವಾರ್ಡ್: ಕುಮಾರ್ (ಕಾಂಗ್ರೆಸ್)
- 2ನೇ ವಾರ್ಡ್: ಮನು ಸಿ.ಆರ್ (ಜೆಡಿಎಸ್)
- 3ನೇ ವಾರ್ಡ್: ಮಂಜುಳಾ (ಜೆಡಿಎಸ್)
- 4ನೇ ವಾರ್ಡ್: ರಮೇಶ್ (ಜೆಡಿಎಸ್)
- 5ನೇ ವಾರ್ಡ್: ಲಲಿತಾ ನರಸಿಂಹಯ್ಯ (ಜೆಡಿಎಸ್)
- 6ನೇ ವಾರ್ಡ್: ಹೊಂಬಯ್ಯ (ಕಾಂಗ್ರೆಸ್)
- 7ನೇ ವಾರ್ಡ್: ಸೋಮಶೇಖರ್ (ಜೆಡಿಎಸ್)
- 8ನೇ ವಾರ್ಡ್: ದೇವರಾಜು (ಜೆಡಿಎಸ್)
- 9ನೇ ವಾರ್ಡ್: ಲೋಹಿತ್ ಕುಮಾರ್ (ಜೆಡಿಎಸ್)
- 10ನೇ ವಾರ್ಡ್: ಆಯಿಷಾ (ಜೆಡಿಎಸ್)
- 11ನೇ ವಾರ್ಡ್: ಹರೀಪ್ರಸಾದ್ (ಜೆಡಿಎಸ್)
- 12ನೇ ವಾರ್ಡ್: ರಾಕೇಶ್ ಪಿ.ಸ್ವಾಮಿ (ಜೆಡಿಎಸ್)
- 13ನೇ ವಾರ್ಡ್: ಉಮೇಶ್ ಸಿ (ಕಾಂಗ್ರೆಸ್)
- 14ನೇ ವಾರ್ಡ್: ನವೀನ್ ಕುಮಾರ್ ಎಂ. (ಕಾಂಗ್ರೆಸ್)
- 15ನೇ ವಾರ್ಡ್: ಕೆ.ಸಿ.ಬಿಂದಿಯಾ (ಕಾಂಗ್ರೆಸ್)
- 16ನೇ ವಾರ್ಡ್: ಮಹಿಮಾ (ಕಾಂಗ್ರೆಸ್)
- 17ನೇ ವಾರ್ಡ್: ಕೆ.ಶ್ರೀನಿವಾಸ್ (ಕಾಂಗ್ರೆಸ್)
- 18ನೇ ವಾರ್ಡ್: ಸರಸ್ವತಮ್ಮ (ಜೆಡಿಎಸ್)
- 19ನೇ ವಾರ್ಡ್: ಪದ್ಮಾವತಿ (ಕಾಂಗ್ರೆಸ್)
- 20ನೇ ವಾರ್ಡ್: ಎಲ್ಲಮ್ಮ (ಜೆಡಿಎಸ್)
- 21ನೇ ವಾರ್ಡ್: ಬಿ.ರಾಮಚಂದ್ರಯ್ಯ (ಕಾಂಗ್ರೆಸ್)
- 22ನೇ ವಾರ್ಡ್: ಭಾನುಪ್ರಿಯ ಹೆಚ್.ಆರ್ (ಜೆಡಿಎಸ್)
- 23ನೇ ವಾರ್ಡ್: ನಾಗರಾಜು ಹೆಚ್. (ಜೆಡಿಎಸ್)
ಇದನ್ನೂ ಓದಿ:ರಾಯಚೂರು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು, ಬಿಜೆಪಿಗೆ ಮಸ್ಕಿ ಪುರಸಭೆ