ರಾಮನಗರ: ಕೊರೊನಾ ಭೀತಿಯಿಂದಾಗಿ ಲಾಕ್ಡೌನ್ ಮಾಡಿರುವ ಹಿನ್ನೆಲೆ ಜೆಡಿಎಸ್ ವತಿಯಿಂದ ಮಾಸ್ಕ್ ಜೊತೆಗೆ ಪ್ರತಿದಿನ ಐದು ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗಿದೆ.
ರಾಮನಗರ: 1 ಲಕ್ಷ ಮಾಸ್ಕ್ ವಿತರಿಸಿದ ಜೆಡಿಎಸ್ ಕಾರ್ಯಕರ್ತರು - 1 ಲಕ್ಷ ಮಾಸ್ಕ್ ವಿತರಣೆ
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ನಿರ್ದೇಶದ ಮೇರೆಗೆ 1 ಲಕ್ಷ ಮಾಸ್ಕ್ಗಳನ್ನು ಜೆಡಿಎಸ್ ಕಾರ್ಯಕರ್ತರು ವಿತರಣೆ ಮಾಡಿದರು.
![ರಾಮನಗರ: 1 ಲಕ್ಷ ಮಾಸ್ಕ್ ವಿತರಿಸಿದ ಜೆಡಿಎಸ್ ಕಾರ್ಯಕರ್ತರು JDS operatives distributed 1 lakh mask in Ramnagar](https://etvbharatimages.akamaized.net/etvbharat/prod-images/768-512-6714211-380-6714211-1586356284543.jpg)
1 ಲಕ್ಷ ಮಾಸ್ಕ್ ವಿತರಿಸಿದ ಜೆಡಿಎಸ್ ಕಾರ್ಯಕರ್ತರು
ನಗರದ ಕೀರ್ತನಾ ಹಾಲ್ ಬಳಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ನಿರ್ದೇಶದ ಮೇರೆಗೆ 1 ಲಕ್ಷ ಮಾಸ್ಕ್ಗಳನ್ನು ಜೆಡಿಎಸ್ ಕಾರ್ಯಕರ್ತರು ವಿತರಣೆ ಮಾಡಿದರು. ಪ್ರತಿದಿನ ನಿರಾಶ್ರಿತರು ಹಾಗೂ ಬಡವರಿಗೆ ಊಟದ ಪ್ಯಾಕೇಟ್ ವಿತರಣೆ ಮಾಡಲಾಗುತ್ತಿದೆ. ಬೆಳಗ್ಗೆ, ರಾತ್ರಿ 5 ಸಾವಿರ ಜನರಿಗೆ ಊಟದ ಪ್ಯಾಕೇಟ್ ನೀಡಲು ನಿರ್ಧರಿಸಲಾಗಿದೆ.