ರಾಮನಗರ: ಚನ್ನಪಟ್ಟಣದ ಹಿರಿಯ ಜೆಡಿಎಸ್ ಮುಖಂಡ ಸಿಂ.ಲಿಂ.ನಾಗರಾಜ್ ಅವರು ಹೃದಯಾಘಾತದಿಂದ ನಿಧನರಾಗಿದ್ದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ದೇವೇಗೌಡರ ಒಡನಾಡಿ, ಹಿರಿಯ ಜೆಡಿಎಸ್ ಮುಖಂಡ ಸಿಂ ಲಿಂ ನಾಗರಾಜ್ ನಿಧನ - jds leader sim lim nagaraj passed away
ಚನ್ನಪಟ್ಟಣದ ಹಿರಿಯ ಜೆಡಿಎಸ್ ಮುಖಂಡ ಸಿಂ ಲಿಂ ನಾಗರಾಜ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸಿಂ ಲಿಂ ನಾಗರಾಜ್
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಒಡನಾಡಿಯಾಗಿದ್ದ ನಾಗರಾಜ್ ಪಕ್ಷ ನಿಷ್ಠೆಗೆ ಹೆಸರುವಾಸಿಯಾಗಿದ್ದರು. 2011ರ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸಿ.ಪಿ. ಯೋಗೇಶ್ವರ್ ವಿರುದ್ಧ ಸ್ಪರ್ಧಿಸಿದ್ದರು. ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಇಂದು ಸಂಜೆ ಸಿಂಗರಾಜಿಪುರದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನೂ ಓದಿ:ಮೈಸೂರಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶ್ರೀಕಂಠಯ್ಯ ಇನ್ನಿಲ್ಲ..