ಕರ್ನಾಟಕ

karnataka

ETV Bharat / state

ಕನಕಪುರದಲ್ಲಿ 56 ಕೋಟಿ ವೆಚ್ಚದಲ್ಲಿ ಹೈಟೆಕ್ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಿಸಿದ ಇನ್ಫೋಸಿಸ್ - Infosys Foundation to help build 130-bed hospital

ರಾಮನಗರ ಜಿಲ್ಲೆಯ ಕನಕಪುರ ಪಟ್ಟಣದಲ್ಲಿ ಇನ್ಫೋಸಿಸ್ ಪ್ರತಿಷ್ಟಾಪನಾ ಅನುದಾನದಲ್ಲಿ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಲಾಗುತ್ತಿದೆ. ಸುಮಾರು 56 ಕೋಟಿ ರೂ ವೆಚ್ಚದಲ್ಲಿ ಸುಮಾರು 130 ಬೆಡ್​ಗಳ ಹೈಟೆಕ್ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ

ಕನಕಪುರದಲ್ಲಿ 56 ಕೋಟಿ ವೆಚ್ಚದಲ್ಲಿ ಹೈಟೆಕ್ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಿಸಿದ ಇನ್ಫೋಸಿಸ್
ಕನಕಪುರದಲ್ಲಿ 56 ಕೋಟಿ ವೆಚ್ಚದಲ್ಲಿ ಹೈಟೆಕ್ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಿಸಿದ ಇನ್ಫೋಸಿಸ್

By

Published : Nov 13, 2021, 6:23 AM IST

Updated : Nov 13, 2021, 6:44 AM IST

ರಾಮನಗರ: ತುಂಬಿದ ಕೊಡ ತುಳುಕುವುದಿಲ್ಲ ಎನ್ನುವ ಮಾತಿಗೆ ಆದರ್ಶವಾಗಿರುವ ಇನ್ಫೋಸಿಸ್ ಪ್ರತಿಷ್ಠಾನ ಸಂಸ್ಥೆಯ ಸಂಸ್ಥಾಪಕರಾದ ನಾರಾಯಣಮೂರ್ತಿ ಅವರ ಧರ್ಮಪತ್ನಿ ಸುಧಾಮೂರ್ತಿ ಅವರು ಮತ್ತೊಂದು ಸಮಾಜಮುಖಿ ಕಾರ್ಯದ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾಮನಗರದಲ್ಲಿ ಮಹಿಳೆಯರು ಹಾಗೂ ಮಕ್ಕಳ ಮೇಲೆ ವಿಶೇಷ ಪ್ರೀತಿಯಿಂದ 56 ಕೋಟಿ ರೂ ಖರ್ಚು ಮಾಡಿ ಆಸ್ಪತ್ರೆಯೊಂದನ್ನು ತಮ್ಮಇನ್ಫೋಸಿಸ್ ಪ್ರತಿಷ್ಠಾಪನಾ ಅನುದಾನದಲ್ಲಿ ಕಟ್ಟಿಸುತ್ತಿದ್ದಾರೆ.

ರಾಮನಗರ ಜಿಲ್ಲೆಯ ಕನಕಪುರ ಪಟ್ಟಣದಲ್ಲಿ ಇನ್ಫೋಸಿಸ್ ಪ್ರತಿಷ್ಠಾಪನಾ ಅನುದಾನದಲ್ಲಿ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಲಾಗುತ್ತಿದೆ. ಸುಮಾರು 56 ಕೋಟಿ ರೂ ವೆಚ್ಚದಲ್ಲಿ ಸುಮಾರು 130 ಬೆಡ್​ಗಳ ಹೈಟೆಕ್ ಆಸ್ಪತ್ರೆಯನ್ನ ನಿರ್ಮಾಣ ಮಾಡಲಾಗುತ್ತಿದೆ. ಮಹಿಳೆಯರು ಹಾಗೂ ಮಕ್ಕಳ ಮೇಲೆ ಸುಧಾಮೂರ್ತಿ ಇಟ್ಟಿರುವ ಕಾಳಜಿಗೆ ಈ ಆಸ್ಪತ್ರೆ ಕಟ್ಟಿಸುತ್ತಿರುವುದೇ ಸಾಕ್ಷಿ ಎಂದರೆ ಅತಿಶಯೋಕ್ತಿಯಲ್ಲ.

ಕನಕಪುರದಲ್ಲಿ 56 ಕೋಟಿ ವೆಚ್ಚದಲ್ಲಿ ಹೈಟೆಕ್ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಿಸಿದ ಇನ್ಫೋಸಿಸ್

ಕನಕಪುರದಲ್ಲಿ ಮಹಿಳೆಯರು ಈ ಬಹಳ ವರ್ಷದಿಂದ ಇಲ್ಲೊಂದು ಸುಸಜ್ಜಿತ ಹೆರಿಗೆ ಆಸ್ಪತ್ರೆ ಕಟ್ಟುವಂತೆ ಕ್ಷೇತ್ರದ ಶಾಸಕರನ್ನ ಕೋರಿಕೊಂಡಿದ್ರು. ಅದರಂತೆ ಕನಕಪುರ ಕ್ಷೇತ್ರದ ಶಾಸಕ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರು ಇನ್ಫೋಸಿಸ್ ‌ಮುಖ್ಯಸ್ಥರಾದ ಸುಧಾಮೂರ್ತಿ ಕನಕಪುರದಲ್ಲಿ ಮಹಿಳೆಯರು ಹಾಗೂ ಮಕ್ಕಳಿಗಾಗಿ ಸುಸಜ್ಜಿತ ಆಸ್ಪತ್ರೆ ಕಟ್ಟಲು ಮನವಿ ಮಾಡಿಕೊಂಡರು.

ಮನವಿ ಸ್ಪಂದಿಸಿದ ಇವರು ಆಸ್ಪತ್ರೆ ಕಟ್ಟಲು ಒಪ್ಪಿಕೊಂಡರು. ಈಗ ಈ ಆಸ್ಪತ್ರೆ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಇನ್ನು ನಾಲ್ಕೈದು ತಿಂಗಳ ಒಳಗೆ ಆಸ್ಪತ್ರೆಗೆ ಪೂರ್ಣಗೊಳ್ಳಲಿದೆ. ಬಹಳಷ್ಟು ವರ್ಷಗಳಿಂದ ಮಹಿಳೆಯ ಬೇಡಿಕೆಯಾಗಿದ್ದ ಹೈಟೆಕ್ ಹೆರಿಗೆ ಆಸ್ಪತ್ರೆ ಶೀರ್ಘದಲ್ಲೇ ಲೋಕಾರ್ಪಣೆಗೊಳ್ಳುತ್ತಿದೆ. ಇದಲ್ಲದೆಯೆ ಕ್ಷೇತ್ರದಲ್ಲೇ ಹೈಟೆಕ್ ಆಸ್ಪತ್ರೆ ನಿರ್ಮಾಣ ಆಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಹೋಗುವುದನ್ನ ತಪ್ಪಿಸಬಹುದು. ಆಸ್ಪತ್ರೆ ನಿರ್ಮಾಣದಿಂದ ಕ್ಷೇತ್ರದ ಜನರು ಕೂಡ ಫುಲ್ ಖುಷಿಯಾಗಿದ್ದಾರೆ.

ಒಟ್ಟಾರೆ ಸುಧಾಮೂರ್ತಿ ಅವರ ನೂರಾರು ಸಾಮಾಜಿಕ ಕಳಕಳಿ ಸೇವೆಗಳ ನಡುವೆ ಅವರ ನಿಸ್ವಾರ್ಥ ಸೇವೆಗೆ ಎಲ್ಲರೂ ಅಭಿನಂದನೆ ಸಲ್ಲಿಸಲೇಬೇಕು.

ಇದನ್ನು ಓದಿ:ಕರುನಾಡ ಮಣ್ಣಿನ ತಾಯಿಯಂದಿರೂ ದಾಸ್ಯಮುಕ್ತಿಗಾಗಿ ಹೋರಾಡಿದ ಧೀರೋದಾತ್ತ ಪರಂಪರೆ

Last Updated : Nov 13, 2021, 6:44 AM IST

ABOUT THE AUTHOR

...view details