ಕರ್ನಾಟಕ

karnataka

ETV Bharat / state

ಹೆಂಡತಿಗೆ ಫೋನ್​ ಮೆಸೇಜ್​ ಮಾಡುತ್ತಾನೆ ಎಂದು ಗಂಡನಿಂದ ಯುವಕನ ಬರ್ಬರ ಹತ್ಯೆ - ವ್ಯಕ್ತಿ ಕೊಲೆ

ತನ್ನ ಹೆಂಡತಿ ಜೊತೆಗೆ ಅನೈತಿಕ‌ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ವ್ಯಕ್ತಿಯೊಬ್ಬ ಯುವಕನೋರ್ವನನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ‌ ಮಾಡಿರುವ ಘಟನೆ‌ ನಗರದ ಹೊರವಲಯದ ಚನ್ನಮಾನಹಳ್ಳಿಯಲ್ಲಿ ನಡೆದಿದೆ.

Ramanagara

By

Published : Aug 20, 2019, 2:00 AM IST

ರಾಮನಗರ : ತನ್ನಹೆಂಡತಿಗೆ ಮೆಸೇಜ್ ಮತ್ತು ಫೋನ್ ಮಾಡಿ ಮಾತನಾಡುತ್ತಿದ್ದ ಎಂಬ ಕಾರಣಕ್ಕೆ ಆಕ್ರೋಶಗೊಂಡ ಮಹಿಳೆಯ ಪತಿ ನಾಗನಾಯ್ಕ್​ ಎಂಬಾತ ಯುವಕ ಅಂಜನಾಪುರ ಮಹಾದೇವ(22) ಎಂಬಾತನನ್ನು ಬರ್ಬರವಾಗಿ ಹತ್ಯೆ ಗೈದಿದ್ದಾನೆ.

ಬಳಿಕ ಆರೋಪಿ ನಾಗನಾಯ್ಕ್​ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಮೃತ ಮಹಾದೇವನು, ನಾಗನಾಯ್ಕ್​ನ ಹೆಂಡತಿ ಜೊತೆಗೆ ಅನೈತಿಕ‌ ಸಂಬಂಧ ಹೊಂದಿದ್ದ ಎಂದು ಶಂಕಿಸಿ ಆರೋಪಿ ನಾಗನಾಯ್ಕ್ ಕೊಲೆ‌ ಮಾಡಿದ್ದಾನೆ‌ ಎನ್ನಲಾಗಿದೆ.

ಕೊಲೆಯಾದ ಮಹಾದೇವ ಮತ್ತು ನಾಗನಾಯ್ಕ್​ ಇಬ್ಬರೂ ಅಂಜನಾಪುರ ಗ್ರಾಮದವರಾಗಿದ್ದು, ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details