ರಾಮನಗರ:ನಿತ್ಯಾನಂದ ಸ್ವಾಮೀಜಿ ಮತ್ತೆ ಸುದ್ದಿಯಲ್ಲಿದ್ದಾರೆ. ಸ್ವಯಂಘೋಷಿತ ಕೈಲಾಸ ದೇಶದ ಸಂಸ್ಥಾಪಕ ಹಾಗೂ ಬಿಡದಿ ಧ್ಯಾನಪೀಠದ ಮುಖ್ಯಸ್ಥ ನಿತ್ಯಾನಂದ ಸ್ವಾಮೀಜಿ ಸದ್ಯ ಸಮಾಧಿ ಸ್ಥಿತಿ ತಲುಪಿದ್ದಾರೆ. ನಿರಂತರ ಧ್ಯಾನದಲ್ಲಿ ನಿರತರಾಗಿದ್ದಾರೆ ಎಂದೆಲ್ಲ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ನಿತ್ಯಾನಂದನ ಕೈಲಾಸ ಪೀಠದ್ದು ಎನ್ನಲಾದ ಫೇಸ್ಬುಕ್ ಪೇಜ್ನಲ್ಲಿ ಪ್ರತಿಕ್ರಿಯಿಸಿ ಪೋಸ್ಟ್ ಹಾಕಲಾಗಿದೆ. ಅದರಲ್ಲಿ ನಿತ್ಯಾನಂದರ ಸಂದೇಶಗಳನ್ನು ಬರೆಯಲಾಗಿದ್ದು, ನಿತ್ಯಾನಂದ ಕೈ ಬರಹ ಎನ್ನಲಾದ ಫೋಟೋ ಕೂಡ ಇದೆ. ನಾನು ಸದ್ಯ ಸಮಾಧಿ ಸ್ಥಿತಿ ತಲುಪಿದ್ದು, ಮತ್ತೆ 2026ರ ವೇಳೆಗೆ ಲೌಕಿಕ ಜಗತ್ತಿನ ಚಟುವಟಿಕೆಗಳಿಗೆ ಹಿಂತಿರುಗುತ್ತೇನೆ ಎಂದು ಬರೆಯಲಾಗಿದೆ.