ಕರ್ನಾಟಕ

karnataka

ETV Bharat / state

ಗಣೇಶನ ನಿಮಜ್ಜನ ವೇಳೆ ಅವಘಡ, ಜನರೇಟರ್‌ಗೆ ಸಿಲುಕಿ ಯುವಕನ ಕೈ ತುಂಡು - ಅಮೃತ್ ಕೇಬಲ್

ಗಣಪತಿ ಮೂರ್ತಿ‌ ನಿಮಜ್ಜನ ವೇಳೆ ಜನರೇಟರ್​ಗೆ ಸಿಲುಕಿ ಯುವಕನೋರ್ವನ ಕೈ ತುಂಡಾಗಿರುವ ಘಟನೆ ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿ ನಡೆದಿದೆ.

ಗಣೇಶನ ನಿಮಜ್ಜನ ವೇಳೆ ಅವಘಡ; ಯುವಕನ ಕೈ ಕಟ್

By

Published : Sep 8, 2019, 3:36 PM IST

ರಾಮನಗರ:ಗಣಪತಿ ಮೂರ್ತಿ‌ ನಿಮಜ್ಜನ ವೇಳೆ ಜನರೇಟರ್​ಗೆ ಸಿಲುಕಿ ಯುವಕನೋರ್ವನ ಕೈ ತುಂಡಾಗಿರುವ ಘಟನೆ ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿ ನಡೆದಿದೆ.

ನಗರದ ಚಾಮುಂಡೇಶ್ವರಿ ಬಡಾವಣೆ ಅಮೃತ್ ಕೇಬಲ್ ಬಳಿ ಪ್ರತಿಷ್ಠಾಪಿಸಲಾಗಿದ್ದ ಮೂರ್ತಿಯನ್ನು ನಿಮಜ್ಜನ ಮಾಡುವ ವೇಳೆ ಜನರೇಟರ್​ಗೆ ಆಕಸ್ಮಿಕವಾಗಿ‌ ಕೈ ಸಿಕ್ಕಿಹಾಕಿಕೊಂಡಿದ್ದರಿಂದ ಮುಂಗೈ ತುಂಡಾಗಿದೆ.

ನರೇಂದ್ರ (24) ಕೈ ಕಳೆದುಕೊಂಡ ಯುವಕ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ರಾಂಗರಾಯರದೊಡ್ಡಿ ಕೆರೆ ಬಳಿ ಘಟನೆ ಸಂಭವಿಸಿದ್ದು, ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details