ರಾಮನಗರ:ಬಿಜೆಪಿ ಸರ್ಕಾರ ನಿರಂತರವಾಗಿ ದ್ವೇಷದ ರಾಜಕಾರಣ ಮಾಡುತ್ತಿದೆ. ಇದು ಯಾರಿಗೂ ಶೋಭೆ ತರುವಂತದ್ದಲ್ಲ, ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಬಿಜೆಪಿ ಸರ್ಕಾರ ಹಾಗೂ ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಅನುದಾನ ಕಡಿತದ ಬಗ್ಗೆ ರಾಜ್ಯಪಾಲರ ಭಾಷಣದ ವೇಳೆ ಪ್ರಸ್ತಾಪ ಮಾಡುತ್ತೇನೆ: ಹೆಚ್ಡಿಕೆ - ಅನುದಾನ ಕಡಿತ
ಸರ್ಕಾರದ ದ್ವೇಷ ರಾಜಕಾರಣದ ಬಗ್ಗೆ ರಾಜ್ಯಪಾಲರ ಭಾಷಣದ ವೇಳೆ ಪ್ರಸ್ತಾಪ ಮಾಡುತ್ತೇನೆ. ಜೊತೆಗೆ ನನ್ನ ಅವಧಿಯಲ್ಲಿ ಕೊಟ್ಟಿರುವ ಎಲ್ಲಾ ಅನುದಾನಗಳನ್ನ ಸ್ಥಗಿತ ಮಾಡಲಾಗಿದೆ. ವಿಧಾನಸಭೆಯ ಕಲಾಪದಲ್ಲಿಯೇ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಗುಡುಗಿದ್ದಾರೆ.
![ಅನುದಾನ ಕಡಿತದ ಬಗ್ಗೆ ರಾಜ್ಯಪಾಲರ ಭಾಷಣದ ವೇಳೆ ಪ್ರಸ್ತಾಪ ಮಾಡುತ್ತೇನೆ: ಹೆಚ್ಡಿಕೆ i-will-address-the-governors-speech-on-grant-cuts-hdk](https://etvbharatimages.akamaized.net/etvbharat/prod-images/768-512-6096593-thumbnail-3x2-hdk.jpg)
ತಾಲೂಕಿನ ಕೈಲಾಂಚ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು, ಸರ್ಕಾರದ ದ್ವೇಷ ರಾಜಕಾರಣದ ಬಗ್ಗೆ ರಾಜ್ಯಪಾಲರ ಭಾಷಣದ ವೇಳೆ ಪ್ರಸ್ತಾಪ ಮಾಡುತ್ತೇನೆ. ಜೊತೆಗೆ ನನ್ನ ಅವಧಿಯಲ್ಲಿ ಕೊಟ್ಟಿರುವ ಎಲ್ಲಾ ಅನುದಾನಗಳನ್ನ ಸ್ಥಗಿತ ಮಾಡಲಾಗಿದೆ. ವಿಧಾನಸಭೆಯ ಕಲಾಪದಲ್ಲಿಯೇ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು. ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜೆಡಿಎಸ್ ಪಕ್ಷ ಸದಾ ಹೋರಾಟಗಳನ್ನ ಮಾಡಿದೆ, ಈಗಲೂ ಸಹ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರ ನೇತೃತ್ವದಲ್ಲಿ ಮುಂದುವರೆಸುತ್ತೇವೆ ಎಂದು ಹೇಳಿದರು.
ಅನುದಾನಗಳ ಕಡಿತದ ಬಗ್ಗೆ ಇಲಾಖೆಯ ಸಚಿವರು, ಅಧಿಕಾರಿಗಳು ಸ್ಪಂದಿಸಿದ್ದಾರೆ. ಆದರೆ ಸಿಎಂ ಬಳಿ ಫೈಲ್ಗಳಿವೆ, ಅವರು ಅಂತಿಮವಾಗಿ ತೀರ್ಮಾನ ಮಾಡಬೇಕು. ಬಿಎಸ್ವೈ ಯಾವಾಗ ಕಡತಗಳಿಗೆ ಸಹಿ ಹಾಕ್ತಾರೋ ಎಂದು ಕಾಯ್ತಿದ್ದೇನೆ. 2008 ರಲ್ಲೂ ಬಿಜೆಪಿ ಸರ್ಕಾರದಿಂದ ನಮಗೆ ಹೀಗೆ ತೊಂದರೆಯಾಗಿತ್ತು. ಈಗಲೂ ಅದೇ ರೀತಿ ಆಗಿದೆ, ಮುಂದೆ ಯಾವ ರೀತಿ ಮಾಡ್ತಾರೆ ಅಂತ ಕಾದು ನೋಡೋಣ ಎಂದು ಹೆಚ್ಡಿಕೆ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ರು.