ರಾಮನಗರ:ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಯನ್ನು ಪತಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮಂಗಳ ಗೌರಿ(29) ಮೃತ ಮಹಿಳೆ. ಸತೀಶ್ ಕೊಲೆಗೈದ ಆರೋಪಿ. ಈ ದಂಪತಿ ಪ್ರತಿ ದಿನ ಜಗಳವಾಡುತ್ತಿದ್ದರಂತೆ. ಇತ್ತೀಚೆಗೆ ಇವರ ಜಗಳ ವಿಕೋಪಕ್ಕೆ ತಿರುಗಿ ಪತ್ನಿ ಮಂಗಳ ಗೌರಿ ಅಕ್ಕನ ಮನೆ ರಾಮನಗರ ತಾಲೂಕಿನ ಅರಳಿಮರದ ದೊಡ್ಡಿ ಗ್ರಾಮಕ್ಕೆ ಬಂದಿದ್ದಳಂತೆ. ನಿನ್ನೆ(ಶುಕ್ರವಾರ) ಕೆಲಸ ಮುಗಿಸಿಕೊಂಡು ಅಕ್ಕನ ಮನೆಗೆ ಹೋಗುವಾಗ ಸತೀಶ್ (ಪತಿ) ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗ್ತಿದೆ.