ಕರ್ನಾಟಕ

karnataka

ETV Bharat / state

ಮರ್ಯಾದೆಗೆ ಅಂಜಿ ಪತಿ-ಪತ್ನಿ ನೇಣಿಗೆ ಶರಣು! - ramanagara

ಮರ್ಯಾದೆಗೆ ಅಂಜಿ ಪತಿ-ಪತ್ನಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಸಾದರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮರ್ಯಾದೆಗೆ ಅಂಜಿ ಪತಿ-ಪತ್ನಿ ನೇಣಿಗೆ ಶರಣು

By

Published : Jun 11, 2019, 11:08 PM IST

ರಾಮನಗರ: ಮರ್ಯಾದೆಗೆ ಅಂಜಿ ಪತಿ-ಪತ್ನಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಸಾದರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ದಂಪತಿ ಸಾವಿಗೆ ತ್ಯಾಗರಾಜ್ ಎಂಬಾತ ಕಾರಣವೆಂದು ತ್ಯಾಗರಾಜನ‌ ಮನೆಗೆ ಗ್ರಾಮಸ್ಥರು ಬೆಂಕಿ ಹಚ್ಚಿದ್ದು, ಮನೆ, ಎರಡು ಕಾರು, ಒಂದು ಟ್ರ್ಯಾಕ್ಟರ್ ಬೆಂಕಿಗಾಹುತಿಯಾಗಿವೆ. ಐದು ದಿನಗಳ ಹಿಂದೆ ತ್ಯಾಗರಾಜನ ಜೊತೆ ಗ್ರಾಮದ ವ್ಯಕ್ತಿಯೊಬ್ಬನ​ ಪತ್ನಿ ಮನೆ ಬಿಟ್ಟು ಹೋಗಿ ಇಂದು ವಾಪಾಸ್​ ಬಂದಿದ್ದಾಳಂತೆ. ಇದೇ ವೇಳೆ ಆಕೆ ಜೊತೆ ಇರುವ ಕೆಲ ಪೋಟೋಗಳನ್ನ ಗಂಡನಿಗೆ ಕಳುಹಿಸಿದ್ದ ತ್ಯಾಗರಾಜ್ ವಿಕೃತಿ ಮೆರೆದಿದ್ದ ಎನ್ನಲಾಗಿದೆ.

ಮರ್ಯಾದೆಗೆ ಅಂಜಿ ಪತಿ-ಪತ್ನಿ ನೇಣಿಗೆ ಶರಣು
ಇದು ಇಡೀ ಗ್ರಾಮದಲ್ಲಿ ಮಹಿಳೆಯ ಬಗ್ಗೆ ಚರ್ಚೆಗೆ ಅನುವು ಮಾಡಿಕೊಟ್ಟಿತ್ತು. ಇದರಿಂದಾಗಿ ಬೇಸತ್ತು ಪತಿ‌ ಮತ್ತು ಪತ್ನಿ ಇಬ್ಬರೂ ನೇಣಿಗೆ ಶರಣಾಗಿದ್ದಾರೆ. ಇಬ್ಬರು ಒಂದೇ ಹಗ್ಗದಲ್ಲಿ ಒಂದೇ ತೊಲೆಗೆ ಕೊರಳೊಡ್ಡಿದ್ದಾರೆ. ಇದೇ ವೇಳೆ ಅರ್ಚಕನಾಗಿರುವ ತ್ಯಾಗರಾಜ್, ವಶೀಕರಣ ಮಾಡಿ ಮಹಿಳೆಯನ್ನು ಕರೆದೊಯ್ದಿದ್ದ ಎನ್ನುವ ಆರೋಪ ಕೇಳಿ ಬಂದಿದೆ. ಘಟನಾ ಸ್ಥಳಕ್ಕೆ ಅಕ್ಕೂರು ಠಾಣೆ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details