ರಾಮನಗರ: ಕಿರಿಕ್ ಮಾಡಿಕೊಂಡು ಸಾರ್ವಜನಿಕರಿಂದ ಗೂಸಾ ತಿನ್ನುತ್ತಿರುವ ಹುಚ್ಚ ವೆಂಕಟ್ ರಾಮನಗರದಲ್ಲಿ ಪ್ರತ್ಯಕ್ಷವಾಗಿದ್ದಾರೆ.
ರಾಮನಗರದಲ್ಲಿ ಹುಚ್ಚ ವೆಂಕಟ್... ಕೆಲ ಯುವಕರಿಗೆ ಅವಾಜ್ - huccha venkat news
ಮಂಡ್ಯ ಕಡೆಯಿಂದ ಕಾರಿನಲ್ಲಿ ಬಂದ ವೆಂಕಟ್ ರಾಮದೇವರ ಬೆಟ್ಟದ ಕಡೆ ಹೋಗಿದ್ದರು. ಈ ವೇಳೆ ಯುವಕರು ದೇವಾಲಯಕ್ಕೆ ಹೋಗಿದ್ರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಕೆಲ ಯುವಕರಿಗೆ ಹುಚ್ಚ ವೆಂಕಟ್ ಅವಾಜ್ ಹಾಕಿದ್ದಾರೆ ಎನ್ನಲಾಗಿದೆ.
ಹುಚ್ಚ ವೆಂಕಟ್
ಮಂಡ್ಯ ಕಡೆಯಿಂದ ಕಾರಿನಲ್ಲಿ ಬಂದ ವೆಂಕಟ್ ರಾಮದೇವರ ಬೆಟ್ಟದ ಕಡೆ ಹೋಗಿದ್ದರು. ಈ ವೇಳೆ ಯುವಕರು ದೇವಾಲಯಕ್ಕೆ ಹೋಗಿದ್ರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಕೆಲ ಯುವಕರಿಗೆ ಹುಚ್ಚ ವೆಂಕಟ್ ಅವಾಜ್ ಹಾಕಿದ್ದಾರೆ ಎನ್ನಲಾಗಿದೆ.
ಇನ್ನೂ ಕೆಲವರಿಗೆ ಊಟ ಆಯ್ತಾ ಎಂದು ಕೇಳಿದ ವೆಂಕಟ್, ನಾನೇ ದೇವರು. ನಾನೇಕೆ ದೇವಸ್ಥಾನಕ್ಕೆ ಹೋಗಬೇಕು. ಎಂದೆಲ್ಲಾ ಪ್ರಶ್ನೆ ಹಾಕುತ್ತಾ ತನ್ನ ಮಾಮೂಲಿ ವರಸೆ ತೋರಿಸಿದ್ದಾರಂತೆ. ಈ ವೇಳೆ ಕೆಲವರು ಹುಚ್ಚ ವೆಂಕಟ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ನಂತರ ವೆಂಕಟ್ ಕಾರಿನಲ್ಲಿ ಬೆಂಗಳೂರು ಕಡೆಗೆ ಹೊರಟಿದ್ದಾರೆಂದು ತಿಳಿದುಬಂದಿದೆ.