ರಾಮನಗರ :ಎಸ್ ಟಿ ಸೋಮಶೇಖರ್ ಅವರು ನಮಗೆ ವಿಶೇಷ. ನಾವಿಬ್ಬರು ಹಳೆಯ ಸ್ನೇಹಿತರು. ಹಿಂದೆ ನಾವಿಬ್ಬರು ಒಂದೇ ಪಕ್ಷದಲ್ಲಿದ್ದೆವು. ಅವರು ಹಿಂದೆ ನಮ್ಮ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದರು. ವೈಯಕ್ತಿಕ ಸಂಬಂಧವೇ ಬೇರೆ, ರಾಜಕೀಯ ಸಂಬಂಧವೇ ಬೇರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ತಿಳಿಸಿದ್ದಾರೆ.
ರಾಮನಗರ ಜಿಲ್ಲೆ ಕುಂಬಳಗೂಡಿನಲ್ಲಿ ನೂತನ ಪೊಲೀಸ್ ಠಾಣೆಗೆ ಚಾಲನೆ ನೀಡಿ, ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ವಿಚಾರ ಕುರಿತು ಮಾತನಾಡಿದ ಅವರು. ಕುಂಬಳಗೂಡು ಎಸ್ ಟಿ ಸೋಮಶೇಖರ್ ಅವರ ಕ್ಷೇತ್ರವಾಗಿದ್ದರಿಂದ ಅವರು ನಮ್ಮೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಅವರಿಗೆ ಅನುದಾನ ಸೇರಿದಂತೆ ಎಲ್ಲ ಸೌಲಭ್ಯ ನೀಡುವುದು ಸರ್ಕಾರದ ಕೆಲಸ. ಯಾರಿಗೆ ಹೇಗೆ ಬೇಕೊ ಹಾಗೆ ಆರೋಪ ಮಾಡಿಕೊಳ್ಳಲಿ. ಮುನಿರತ್ನ ಅವರು ಕೇಳಿದರೆ ಅವರಿಗೂ ಅನುದಾನ ಕೊಡುತ್ತೇವೆ ಎಂದರು.
ಅದರಲ್ಲೂ ಎಸ್ ಟಿ ಸೋಮಶೇಖರ್ ಅವರು ನಮಗೆ ವಿಶೇಷ. ನಾವಿಬ್ಬರು ಸ್ನೇಹಿತರು, ಹಿಂದೆ ಒಂದೇ ಪಕ್ಷದಲ್ಲಿದ್ದೆವು. ಅವರು ಪಕ್ಷಕ್ಕೆ ಬಂದರೆ ನಿಮಗೆ ಹೇಳಿಯೇ ಪಕ್ಷದ ಶಾಲು ಹಾಕುತ್ತೇವೆ. ಹಾಗೆಯೇ ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಪದಗ್ರಹಣ ವಿಚಾರ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ನಮ್ಮದೇ ಪಕ್ಷ ಅಧಿಕಾರದಲ್ಲಿದೆ. ನಮ್ಮ ಸಿಎಂ ಇದ್ದಾರೆ. ನಾನು ಯಾರ ಬಗ್ಗೆಯೂ ಮಾತನಾಡಲ್ಲ. ಬಿಜೆಪಿಗೆ ಆನೆ ಬಲ ಬಂದಿದೆಯೋ, ಒಂಟೆಬಲ ಬಂದಿದೆಯೋ ನಮಗೆ ಗೊತ್ತಿಲ್ಲ. ನಾವ್ಯಾಕೆ ಬೇರೆ ಪಕ್ಷದ ಅಧ್ಯಕ್ಷರ ಬಗ್ಗೆ ಮಾತನಾಡೋದು. ಮೊದಲು ವಿಜಯೇಂದ್ರ ಅವರು ಅಧಿಕಾರ ನಿಭಾಯಿಸಲಿ. ಆ ಮೇಲೆ ವಿಶ್ಲೇಷಣೆ ಮಾಡೋಣ ಎಂದು ಹೇಳಿದರು.