ರಾಮನಗರ: ದಲಿತ ವ್ಯಕ್ತಿಗೆ ಸಿಎಂ ಆಗುವ ಅವಕಾಶ ಸಿಕ್ಕಿದ್ದರೂ ಕಾಂಗ್ರೆಸ್ ಅವಕಾಶ ಮಾಡಿಕೊಡಲಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ದಲಿತ ಸಿಎಂ ಬಗ್ಗೆ ದನಿ ಎತ್ತಿದ ಹೆಚ್ಡಿಕೆ.. ಕಾಂಗ್ರೆಸ್ ವಿರುದ್ಧ ಮುಂದುವರಿದ ವಾಕ್ ಪ್ರಹಾರ! - ಮಲ್ಲಿಕಾರ್ಜುನ ಖರ್ಗೆ
ಇತ್ತೀಚಿನ ದಿನಗಳಲ್ಲಿ ದಲಿತ ಸಿಎಂ ಯಾಕಾಗಬಾರದು, ಈವರೆಗೆ ಯಾಕೆ ಆಗಿಲ್ಲ ಅನ್ನೋ ಅಂಶಗಳು ಮುನ್ನೆಲೆಗೆ ಬಂದಿವೆ. ಇದೇ ವಿಚಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ದನಿಗೂಡಿಸಿದ್ದಾರೆ.
ಹೆಚ್ಡಿಕೆ
ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಗೆ ಅವಕಾಶ ಸಿಕ್ಕಾಗಲೇ ಅವರು ದಲಿತರನ್ನ ಮುಖ್ಯಮಂತ್ರಿ ಮಾಡಲಿಲ್ಲ. 2008 ರಲ್ಲಿ ನಾನೇ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿದ್ದೆ. ನಾನು ಬೇಷರತ್ ಬೆಂಬಲ ಕೊಡುತ್ತೇನೆ ಎಂದರೂ ಕಾಂಗ್ರೆಸ್ನವರು ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿಲ್ಲ. ಅಭಿವೃದ್ಧಿ ಬಗ್ಗೆ ಚರ್ಚೆ ಮಾಡದೇ ಕಾಂಗ್ರೆಸ್ನಲ್ಲಿ ವಲಸಿಗರು, ಮೂಲ ಕಾಂಗ್ರೆಸಿಗರು ಎಂಬ ಚರ್ಚೆ ನಡೆಯುತ್ತಿದೆ ಎಂದು ದೂರಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಸಿಎಂ ನಿರ್ಧಾರ ಮಾಡುವುದಕ್ಕೆ ಬಿಜೆಪಿಯವರು ಯಾರು? : ಪ್ರಿಯಾಂಕ್ ಖರ್ಗೆ ಪ್ರಶ್ನೆ
Last Updated : Jun 29, 2021, 4:06 PM IST