ಕರ್ನಾಟಕ

karnataka

ETV Bharat / state

ರಾಮನಗರದಲ್ಲಿ 18 ಭುಜಗಳ ಚಾಮುಂಡೇಶ್ವರಿ ಪಂಚಲೋಹದ ವಿಗ್ರಹ ಲೋಕಾರ್ಪಣೆಗೆ ಸಿದ್ಧತೆ

ರಾಮನಗರದ ಗೌಡಗೆರೆ ಗ್ರಾಮದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ 18 ಭುಜಗಳ ಪಂಚಲೋಹ ವಿಗ್ರಹವನ್ನು ಲೋಕಾರ್ಪಣೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ದೇಶದಲ್ಲೇ ಪ್ರಪ್ರಥಮ ಹಾಗೂ ಅತಿ ಪಂಚಲೋಹ ದೊಡ್ಡ ವಿಗ್ರಹ ಇದು ಎನ್ನಲಾಗುತ್ತಿದ್ದು, ಈ ಕುರಿತ ಒಂದು ವರದಿ ಇಲ್ಲಿದೆ.

historical-chamundi-statue-in-ramnagar
ರಾಮನಗರದಲ್ಲಿ 18 ಭುಜಗಳ ಚಾಮುಂಡೇಶ್ವರಿಯ ಪಂಚಲೋಹ ವಿಗ್ರಹ ಲೋಕಾರ್ಪಣೆಗೆ ಸಿದ್ಧತೆ

By

Published : Aug 3, 2021, 4:21 PM IST

ರಾಮನಗರ:ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಧಾರ್ಮಿಕ ಕ್ಷೇತ್ರವಾದ ಗೌಡಗೆರೆ ಗ್ರಾಮಲ್ಲಿ ಬೃಹತ್ ಚಾಮುಂಡೇಶ್ವರಿ ವಿಗ್ರಹ ಅನುಷ್ಠಾನಗೊಳ್ಳುತ್ತಿದೆ. ಬೊಂಬೆಗಳ ನಿರ್ಮಾಣ ಕಾರ್ಯದಲ್ಲಿ ಈಗಾಗಲೇ ವಿಶ್ವ ಪ್ರಸಿದ್ಧಿ ಪಡೆದಿರುವ ಬೊಂಬೆನಗರಿ ಚನ್ನಪಟ್ಟಣಕ್ಕೆ ಮತ್ತೊಂದು ಮಹತ್ತರ ಗರಿಯೊಂದು ಸೇರ್ಪಡೆಗೊಳ್ಳುತ್ತಿದೆ.

ಚಾಮುಂಡಿ ವಿಗ್ರಹದ ವಿವರ

ಗೌಡಗೆರೆ ಶ್ರೀಕ್ಷೇತ್ರದಲ್ಲಿ ನೆಲಮಟ್ಟದಿಂದ ಅರವತ್ತು ಅಡಿ ಎತ್ತರವಿರುವ, ಹದಿನೆಂಟು ಭುಜಗಳ ಶಂಖ ಚಕ್ರ, ಗದಾಹಸ್ತೆ, ಸರ್ಪ ಶಾರ್ದೂಲ, ಕಮಂಡಲ, ಅಂಕುಶ, ಖಡ್ಗ, ಪರಶು, ಧನಸ್ಸು ಹೀಗೆ ಇನ್ನೂ ಮೊದಲಾದ ಹದಿನೆಂಟು ಬಗೆಯ ಆಯುಧಗಳನ್ನು ತಮ್ನ ಕೈಗಳಲ್ಲಿ ಧರಿಸಿರುವ ಸೌಮ್ಯರೂಪಿಯಾಗಿ ನಿಂತಿರುವ ಭಂಗಿಯಲ್ಲಿ ನಾಡದೇವತೆ, ಜಗನ್ಮಾತೆ ತಾಯಿ ಚಾಮುಂಡೇಶ್ವರಿ ಅಮ್ಮನವರ ಸುವರ್ಣ ಲೇಪಿತ ಪಂಚಲೋಹ - ಕಬ್ಬಿಣ, ಹಿತ್ತಾಳೆ, ತಾಮ್ರ, ಚಿನ್ನ ಮತ್ತು ಬೆಳ್ಳಿ ಲೋಹಗಳಿಂದ ಮಾಡುತ್ತಿರುವ ವಿಗ್ರಹ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದೆ.

ಆಗಸ್ಟ್​​ 8ರಂದು ಲೋಕಾರ್ಪಣೆಗೆ ಸಿದ್ಧತೆ

ಪೂರ್ವ ನಿಗದಿಯಂತೆ ಇದೇ ಆಗಸ್ಟ್ 8ರಂದು ಈ ಬೃಹತ್ ವಿಗ್ರಹ ಲೋಕಾರ್ಪಣೆ ಆಗಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿಯ ಮುಖ್ಯಸ್ಥರೂ ಹಾಗೂ ಸಂಸ್ಥಾಪಕರಾದ ಗುರೂಜೀ ಮಲ್ಲೇಶ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಈ ಮಹತ್ಕಾರ್ಯಕ್ಕೆ ಭಕ್ತರು ಕೂಡಾ ತಮ್ಮ ಇಚ್ಚಾನುಸಾರ ಕೊಡುಗೆ ನೀಡಬಹುದಾಗಿದೆ.

ಚಾಮುಂಡಿ ವಿಗ್ರಹ

ದೇವಾಲಯಕ್ಕೆ ಇದೆ ನೂರಾರು ವರ್ಷಗಳ ಇತಿಹಾಸ

ಈ ಗೌಡಗೆರೆ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ದೇವಿಯ ಇಚ್ಚಾನುಸರಾವಾಗಿ ಇಲ್ಲೊಂದು ಬೃಹತ್ ಚಾಮುಂಡೇಶ್ವರಿ ತಾಯಿ ವಿಗ್ರಹ ಪ್ರತಿಷ್ಠಾಪನೆಗೊಳ್ಳುತ್ತಿದೆ. ಈ ದೇಗುಲಕ್ಕೆ ರಾಜ್ಯದಿಂದ ಅಲ್ಲದೇ ಹೊರ ದೇಶಗಳಿಂದಲೂ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಚಾಮುಂಡಿ ವಿಗ್ರಹ

ಮಕ್ಕಳಿಲ್ಲದವರು ಇಲ್ಲಿ ಬಂದು ತಾಯಿಯ ದರ್ಶನ ಪಡೆದರೆ ಸಾಕು ತಮ್ಮ ಇಷ್ಟಾರ್ಥಗಳು ಸಿದ್ಧಿ ಆಗುತ್ತದೆ ಎಂಬ ನಂಬಿಕೆ ಇದೆ. ಇದಲ್ಲದೇ ದೇಗುಲದಲ್ಲಿ ಬಸಪ್ಪ ಇದ್ದು, ಈ ಬಸಪ್ಪ ಕೂಡ ಬೇಡಿದ ವರ ನೀಡುತ್ತಾನೆಂಬ ಪ್ರತೀತಿ ಹಿಂದಿನಿಂದಲೂ ಇದೆ. .

ಇದನ್ನೂ ಓದಿ:ಆಸ್ತಿಗಾಗಿ ಮೈಸೂರು ಮಾಜಿ ದಿವಾನ್​ ಮೊಮ್ಮಗಳ ಕೊಲೆ ಕೇಸ್​: ಜೈಲು ಸೇರಿರುವ ಪತಿಯಿಂದ ಕ್ಷಮಾದಾನಕ್ಕಾಗಿ ಅರ್ಜಿ

ABOUT THE AUTHOR

...view details