ರಾಮನಗರ: ಜಿಲ್ಲೆಯಲ್ಲಿ ಮತಾಂತರದ ಕೂಗು ಕೇಳಿಬರುತ್ತಿದೆ. ಕನಕಪುರ ಭಾಗದಲ್ಲಿ ಹೆಚ್ಚಾಗಿ ಕೇಳಿಬರುತ್ತಿದ್ದ ಆರೋಪಗಳು ಈಗ ಚನ್ನಪಟ್ಟಣ ಭಾಗಕ್ಕೂ ವ್ಯಾಪಿಸಿದೆ. ಅನಧಿಕೃತ ಪ್ರಾರ್ಥನಾ ಮಂದಿರ ನಿರ್ಮಾಣ ಮಾಡಿಕೊಂಡು ಮತಾಂತರಗೊಳಿಸುವ ಯತ್ನಗಳು ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಮತಾಂತರದ ಬಗ್ಗೆ ಮತ್ತೆ ಸದ್ದು- ಕೆಲ ಸಂಸ್ಥೆಗಳಿಂದ ಪ್ರಚೋದನೆ ಮಾಡಲಾಗ್ತಿದೆ ಎಂಬ ಕೂಗು ಹೊಸದಲ್ಲ. ರಾಮನಗರ ಜಿಲ್ಲೆಯಲ್ಲಿ ಇದು ಹೆಚ್ಚಾಗಿಯೇ ಇದೆ. ಇದೀಗ ಚನ್ನಪಟ್ಟಣ ಭಾಗಕ್ಕೂ ವ್ಯಾಪಿಸಿದೆ.
ಧ್ವನಿವರ್ಧಕ ಬಳಸಿಕೊಂಡು ಪ್ರಾರ್ಥನೆ: ಚನ್ನಪಟ್ಟಣ ತಾಲೂಕಿನ ಕನ್ನಮಂಗಲ ಗ್ರಾಮದ ಬಳಿ ಇರುವ ಫಾರ್ಮ್ ಹೌಸ್ ಒಂದರಲ್ಲಿ ಅನಧಿಕೃತವಾಗಿ ಪ್ರಾರ್ಥನಾ ಮಂದಿರ ನಿರ್ಮಿಸಿ ಪ್ರಾರ್ಥನೆ ಮಾಡುವ ಮುಖಾಂತರ ಮತಾಂತರಕ್ಕೆ ಪ್ರಚೋದನೆ ನೀಡಲಾಗುತ್ತಿದೆ. ಜೊತೆಗೆ ಹೆಚ್ಚಿನ ಶಬ್ದ ಉಂಟುಮಾಡುವ ಧ್ವನಿವರ್ಧಕ ಬಳಸಿಕೊಂಡು ಪ್ರಾರ್ಥನೆ ಮಾಡಲಾಗುತ್ತಾ ಇದೆ. ಇದರಿಂದ ಪಕ್ಕದ ಗ್ರಾಮಸ್ಥರಿಗೆ ಕಿರಿಕಿರಿ ಉಂಟಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.