ರಾಮನಗರ: ಸಮಾಜವನ್ನು ಉತ್ತಮಪಡಿಸಬೇಕೆನ್ನುವ ಬದ್ಧತೆಯಿಂದ ಮೋಟರ್ ಸೈಕಲ್ ಹಾಗೂ ಸ್ಕೂಟರ್ಗಳ ವಿಶ್ವದ ಅತಿ ದೊಡ್ಡ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್, ಬೆಂಗಳೂರಿನಲ್ಲಿ ಕೋವಿಡ್ ಪೀಡಿತ 150 ಕುಟುಂಬಗಳನ್ನು ದತ್ತು ಪಡೆಯುವ ಮೂಲಕ ಆ ಕುಟುಂಬಗಳ ಹೊಣೆ ಹೊತ್ತುಕೊಂಡಿದೆ.
ಕೋವಿಡ್ ಕಾರಣದಿಂದ ತಂದೆ-ತಾಯಿ, ಪೋಷಕರನ್ನು ಕಳೆದುಕೊಂಡ ಮಕ್ಕಳನ್ನು ಮತ್ತು ಗಂಡನನ್ನು ಕಳೆದುಕೊಂಡ ಮಹಿಳೆಯರನ್ನು ಬೆಂಬಲಿಸುವ ಗುರಿಯನ್ನು ಈ ಸಂಸ್ಥೆ ಹೊಂದಿದೆ. ಒಡಿಶಾದ ವಾಣಿಜ್ಯ ಮತ್ತು ಕೈಗಾರಿಕೆಯಲ್ಲಿರುವ ಮಹಿಳಾ ಉದ್ಯಮಿಗಳ (ABWCI) ಸಂಘದ ಸಹಯೋಗದಲ್ಲಿ ಅಲ್ಲಿ 150 ಕುಟುಂಬಗಳನ್ನು ದತ್ತು ಪಡೆದುಕೊಂಡ ಬೆನ್ನಲ್ಲೇ ಹೀರೋ ಫಾರ್ ಹ್ಯುಮಾನಿಟಿ ಯೋಜನೆ ಅಡಿಯಲ್ಲಿ, ಬೆಂಗಳೂರಿನ 150 ಕುಟುಂಬಗಳನ್ನು ದತ್ತು ಪಡೆಯಲಾಗಿದೆ. ಈ ಯೋಜನೆಯ ಮೊದಲ ಹಂತದಲ್ಲಿ 35 ಕುಟುಂಬಗಳಿಗೆ ಬೆಂಗಳೂರಿನಲ್ಲಿ ಪರಿಹಾರದ ಪ್ಯಾಕೇಜ್ ವಿತರಿಸಲಾಯಿತು.