ರಾಮನಗರ: ಜಿಲ್ಲೆಯ ಕನಕಪುರ ಬಳಿಯ ಜಮೀನೊಂದರಲ್ಲಿ ತಾಂತ್ರಿಕ ಕಾರಣದಿಂದ ಹೆಲಿಕಾಪ್ಟರ್ ಒಂದು ತುರ್ತು ಭೂಸ್ಪರ್ಶ ಮಾಡಿದೆ. ಕನಕಪುರದ ಎಸ್ಬಿ ಕಲ್ಯಾಣ ಮಂಟಪ ಹಿಂಭಾಗದಲ್ಲಿನ ಖಾಲಿ ನಿವೇಶನದಲ್ಲಿ ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ತುರ್ತು ಸ್ಪರ್ಶ ಮಾಡಿದ್ದು ಬಳಿಕ ಹಾರಾಟ ನಡೆಸಿದೆ.
ರಾಮನಗರ ಸಮೀಪ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ!: ನೋಡಲು ಮುಗಿಬಿದ್ದ ಜನ - Ramnagar Helicopter emergency landing
ಕನಕಪುರ ನಗರದ ಹೊರವಲಯದ ಎಸ್ಬಿ ಕಲ್ಯಾಣ ಮಂಟಪದ ಹಿಂಭಾಗದಲ್ಲಿ ಹೆಲಿಕಾಪ್ಟರ್ ಒಂದು ತುರ್ತು ಭೂಸ್ಪರ್ಶ ಮಾಡಿದೆ. ತುರ್ತು ಭೂಸ್ಪರ್ಶವಾಗಿದ್ದ ಈ ಹೆಲಿಕಾಪ್ಟರ್ ಅನ್ನು ನೋಡಲು ಸ್ಥಳೀಯರು ಜಮಾವಣೆಗೊಂಡಿದ್ದರು.
Helicopter emergency landing in Ramnagar
ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
ಸಹಾಯಕ ಫೈಲೆಟ್ಗೆ ತರಬೇತಿ ನೀಡುವ ವೇಳೆ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಭೂ ಸ್ಪರ್ಶವಾಗಿದೆ. ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಹೆಲಿಕಾಪ್ಟರ್ ಹಾರಾಟ ಸ್ಥಗಿತಗೊಂಡಿತ್ತು. ತಮಿಳುನಾಡಿನಿಂದ ಬೆಂಗಳೂರು ಕಡೆ ಹೊರಟಿದ್ದ TZ 9002 ಹೆಲಿಕಾಪ್ಟರ್ ಅದಾಗಿತ್ತು ಎಂದು ತಿಳಿದು ಬಂದಿದೆ. ಹೆಲಿಕಾಪ್ಟರ್ನಲ್ಲಿ ಆಗಿದ್ದ ಲೋಪದೋಷ ಸರಿಪಡಿಸಿದ ಬಳಿಕ ಮತ್ತೆ ಬೆಂಗಳೂರು ಕಡೆ ಹಾರಾಟ ನಡೆಸಿತು. ತುರ್ತು ಭೂಸ್ಪರ್ಶವಾಗಿದ್ದ ಈ ಹೆಲಿಕಾಪ್ಟರ್ ಅನ್ನು ನೋಡಲು ಸ್ಥಳೀಯರು ಜಮಾನವಣೆಗೊಂಡಿದ್ದರು.