ಕರ್ನಾಟಕ

karnataka

ETV Bharat / state

ರಾಮನಗರದಲ್ಲಿ ಭಾರಿ ಮಳೆ: ದನದ ಕೊಟ್ಟಿಗೆ ಗೋಡೆ ಕುಸಿದು ನಿದ್ರೆಯಲ್ಲಿದ್ದ ಇಬ್ಬರು ಮಕ್ಕಳು ಸಾವು - ETV BHARAT

ರಾಮನಗರದಲ್ಲಿ ಸುರಿದ ಜೋರು ಮಳೆಗೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಮಾಗಡಿ ತಾಲೂಕಿನ ಸೋಲೂರು ಗ್ರಾಮದಲ್ಲಿ ದನದ ಕೊಟ್ಟಿಗೆ ಕುಸಿದು ದುರ್ಘಟನೆ ನಡೆಯಿತು.

Etv Bharat,ರಾಮನಗರದಲ್ಲಿ ಭಾರೀ ಮಳೆ
Etv Bharat,ರಾಮನಗರದಲ್ಲಿ ಭಾರೀ ಮಳೆ

By

Published : Aug 7, 2022, 11:09 AM IST

Updated : Aug 8, 2022, 7:36 AM IST

ರಾಮನಗರ:ಜಿಲ್ಲೆಯಾದ್ಯಂತ ಸುರಿದ ‌ಬಿರು ಮಳೆಯಿಂದಾಗಿ ದನದ ಕೊಟ್ಟಿಗೆಯ ಗೋಡೆ ಕುಸಿದು ಇಬ್ಬರು ಮಕ್ಕಳು ಮೃತಪಟ್ಟರು. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರು ಗ್ರಾಮದಲ್ಲಿ ಘಟನೆ ಜರುಗಿದೆ.

ಪರ್ಭಿನ್ (4), ಇಷಿಕಾ (3) ಮೃತ ಮಕ್ಕಳು. ನೇಪಾಳ ಮೂಲದ ಮೀನಾ, ಮೋನಿಷಾ ಗಾಯಗೊಂಡಿದ್ದಾರೆ. ಇವರು ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಒಂದೇ ಶೆಡ್​ನಲ್ಲಿ ಎರಡು ಕುಟುಂಬದವರು ವಾಸವಿದ್ದರು. ಶೆಡ್ ಪಕ್ಕದಲ್ಲಿದ್ದ ಗಂಗರಂಗಮ್ಮ ಎಂಬುವವರಿಗೆ ಸೇರಿದ ದನದ‌ ಕೊಟ್ಟಿಗೆ ಕುಸಿದಿದೆ. ಪರಿಣಾಮ ಶೆಡ್​ನಲ್ಲಿ ಮಲಗಿದ್ದ ಮಕ್ಕಳು ಮೃತಪಟ್ಟಿದ್ದಾರೆ. ಮೃತ ದೇಹಗಳನ್ನು ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

ರಾಮನಗರ ಸೇರಿ ರಾಜ್ಯದ ಹಲವೆಡೆ ಜಡಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕೆಲವೆಡೆ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಜನರು ಪರದಾಡುವಂತಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮಳೆ ಹಾನಿ, ಎರಡು ತಿಂಗಳಲ್ಲಿ 70 ಜನ ಸಾವು: 2 ಹೆಚ್ಚುವರಿ ಎಸ್​​ಡಿಆರ್​ಎಫ್ ತಂಡ ರಚನೆಗೆ ಸಿಎಂ ಸೂಚನೆ

Last Updated : Aug 8, 2022, 7:36 AM IST

ABOUT THE AUTHOR

...view details