ಕರ್ನಾಟಕ

karnataka

ETV Bharat / state

ಅಂದು ಹೆಚ್​ಡಿಕೆ ಚನ್ನಪಟ್ಟಣದ ಕಡೆ ತಿರುಗಿ ನೋಡ್ಲಿಲ್ಲ, ಈಗ ಅಭಿವೃದ್ಧಿ ಬಗ್ಗೆ ಮಾತಾಡ್ತಾರೆ: ಸಿ.ಪಿ.ಯೋಗೇಶ್ವರ್ - ಹೆಚ್​​ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು 14 ತಿಂಗಳು ಸಿಎಂ ಆಗಿದ್ದರು. ಆಗ ಅವರ ಕೈಯಲ್ಲೇ ಎಲ್ಲವೂ ಇತ್ತು. ಆದ್ರೆ ಅವರು 14 ತಿಂಗಳು ಚನ್ನಪಟ್ಟಣದ ಕಡೆಗೆ ಅವರು ತಿರುಗಿ ನೋಡಲಿಲ್ಲ. ಈಗ ಕುಮಾರಸ್ವಾಮಿ ಅವರು ಅಭಿವೃದ್ಧಿ ಮಾಡ್ತೇನೆಂದು ಹೇಳ್ತಾರೆ ಎನ್ನುವ ಮೂಲಕ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೆಚ್​​ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್

By

Published : Mar 13, 2022, 9:34 PM IST

ರಾಮನಗರ:ಕುಮಾರಸ್ವಾಮಿ ಅವರು 14 ತಿಂಗಳು ಸಿಎಂ ಆಗಿದ್ದರು. ಅವರ ಕೈಯಲ್ಲೇ ಎಲ್ಲವೂ ಇತ್ತು, ಅಭಿವೃದ್ಧಿ ಮಾಡಬಹುದಿತ್ತು. ಆದರೆ 14 ತಿಂಗಳು ಚನ್ನಪಟ್ಟಣದ ಕಡೆಗೆ ಅವರು ತಿರುಗಿಯೂ ಕೂಡ ನೋಡಲಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹರಿಹಾಯ್ದರು.

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್

ರಾಮನಗರ ಜಿಲ್ಲೆ ಚನ್ನಪಟ್ಟಣದ ಭೈರಾಪಟ್ಟಣ ಗ್ರಾಮದಲ್ಲಿ ಮಾತನಾಡಿದ ಅವರು, ಈಗ ಕುಮಾರಸ್ವಾಮಿ ಅವರು ಅಭಿವೃದ್ಧಿ ಮಾಡ್ತೇನೆಂದು ಹೇಳ್ತಾರೆ. ನಾನು ಕಳೆದ ಬಾರಿ ಚನ್ನಪಟ್ಟಣದಲ್ಲಿ ಗೆದ್ದಿದ್ದರೆ ದೊಡ್ಡ ಅವಕಾಶ ಇರುತ್ತಿತ್ತು‌. ರಾಜಕೀಯವಾಗಿ ನನಗೆ ಬಹಳ ಶಕ್ತಿ ಇರುತ್ತಿತ್ತು. ಆದರೆ ಕುಮಾರಸ್ವಾಮಿ ಸಿಎಂ ಆಗ್ತಾರೆಂದು ಜನ ನನ್ನನ್ನ ತಿರಸ್ಕಾರ ಮಾಡಿದರು. ಆದರೆ ಈಗ ಪಂಚರಾಜ್ಯ ಚುನಾವಣೆ ಫಲಿತಾಂಶ ಬಂದಿದೆ. ಅದರಲ್ಲಿ ಯಾವ ರೀತಿ ಬಿಜೆಪಿ ಗೆದ್ದಿದೆ ಎಂದು ಎಲ್ಲರಿಗೂ ಗೊತ್ತಿದೆ ಎಂದರು.

ಇದನ್ನೂ ಓದಿ:ಡಿಸಿಸಿ ಬ್ಯಾಂಕ್ ಕಳ್ಳತನ ಕೇಸ್​.. ಬ್ಯಾಂಕ್​ನ ಸಿಬ್ಬಂದಿ ಸೇರಿ ಮೂವರು ಅರೆಸ್ಟ್​, 6 ಕೋಟಿ ಮೌಲ್ಯದ ಸ್ವತ್ತು ವಶ

ಕರ್ನಾಟಕದಲ್ಲಿಯೂ ಸಹ ಬಿಜೆಪಿ ಸರ್ಕಾರ ಬರಲಿದೆ. 2023 ಕ್ಕೆ ಕರ್ನಾಟಕದಲ್ಲಿಯೂ ಸಹ ಬಿಜೆಪಿ ಅಧಿಕಾರ ನಡೆಸಲಿದೆ. ಇದಕ್ಕೂ ಮುನ್ನ ಭೈರಾಪಟ್ಟಣ ಗ್ರಾಮದ 50 ಕ್ಕೂ ಹೆಚ್ಚು ಜನರು ಬಿಜೆಪಿ ಸೇರ್ಪಡೆಯಾಗಿದ್ದು, ಜೆಡಿಎಸ್ - ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡರು. ನಂತರ ಚನ್ನಪಟ್ಟಣದ ಯೋಗೇಶ್ವರ್ ನಿವಾಸದಿಂದ ಭೈರಾಪಟ್ಟಣ ಗ್ರಾಮದವರೆಗೆ ಬೈಕ್ ರ್ಯಾಲಿ ಕೂಡ ನಡೆಸಿದರು.

For All Latest Updates

TAGGED:

ABOUT THE AUTHOR

...view details