ರಾಮನಗರ: ಚೆನ್ನಿಗಪ್ಪ ಅವರು ದೇವರ ಭಕ್ತರು. ಶಿವ, ಆಂಜನೇಯನ ಪರಮ ಭಕ್ತರು. ಶಿವನೇ ಶಿವರಾತ್ರಿ ಹಬ್ಬದ ದಿನ ತನ್ನ ಬಳಿ ಕರೆಸಿಕೊಂಡಿದ್ದಾನೇನೋ ಅನ್ನೋದು ನನ್ನ ಭಾವನೆ. ನನ್ನ ಜೀವನದಲ್ಲಿ ಅತ್ಯಂತ ದುಃಖದ ದಿನ ಇದಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಶಿವರಾತ್ರಿ ದಿನ ಶಿವನೇ ಚೆನ್ನಿಗಪ್ಪರನ್ನು ತನ್ನ ಹತ್ತಿರ ಕರೆಸಿಕೊಂಡಿದ್ದಾನೆ: ಕುಮಾರಸ್ವಾಮಿ - ರಾಮನಗರ ಸುದ್ದಿ
ಜೆಡಿಎಸ್ ಪಕ್ಷದ ಮುಖಂಡರಾಗಿದ್ದ ಚೆನ್ನಿಗಪ್ಪ ಅವರ ನಿಧನ ಕುರಿತು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಚೆನ್ನಿಗಪ್ಪರನ್ನು ಶಿವನೇ ಶಿವರಾತ್ರಿ ಹಬ್ಬದ ದಿನ ತನ್ನ ಬಳಿ ಕರೆಸಿಕೊಂಡಿದ್ದಾನೇನೋ ಅನ್ನೋದು ನನ್ನ ಭಾವನೆ ಹಾಗೂ ನನ್ನ ಜೀವನದಲ್ಲಿ ಅತ್ಯಂತ ದುಃಖದ ದಿನ ಇದಾಗಿದೆ ಎಂದರು.
ನಗರದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ಮುಖಂಡರಾಗಿದ್ದ ಚೆನ್ನಿಗಪ್ಪರ ಸಾವು ನನಗೆ ನೋವು ತಂದಿದೆ. ದೇವೇಗೌಡರ ಅತ್ಯಂತ ಆತ್ಮೀಯರಾಗಿ, ನನಗೆ ಹಿರಿಯರಾಗಿ, ಹಿತೈಷಿಗಳಾಗಿದ್ರು. ಕಳೆದ ಒಂದೂವರೆ ವರ್ಷದಿಂದ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ರು. ಅವರ ನಿಧನ ವೈಯಕ್ತಿಕವಾಗಿ ನಮ್ಮ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಚೆನ್ನಿಗಪ್ಪ ನಮ್ಮ ಕುಟುಂಬದ ಜೊತೆ ಆತ್ಮೀಯ ಬಾಂಧವ್ಯ ಹೊಂದಿದ್ರು. ನಮ್ಮೆಲ್ಲರ ಬಗ್ಗೆ ಅವರಲ್ಲಿದ್ದ ಪ್ರೀತಿ ವಿಶ್ವಾಸವನ್ನ ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದು ಎಂದರು.
ನಮ್ಮ ಒಡನಾಟದಲ್ಲಿದ್ದ ಕುಟುಂಬದ ಓರ್ವ ವ್ಯಕ್ತಿಯಾಗಿದ್ದ ಚೆನ್ನಿಗಪ್ಪ ಸುದೀರ್ಘ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಆರೋಗ್ಯವಾಗಿ ಬರಲೆಂದು ಕುಟುಂಬದವರು ಸಾಕಷ್ಟು ಶ್ರಮ ವಹಿಸಿದ್ದು ನನಗೆ ಗೊತ್ತಿದೆ. ಆ ಕುಟುಂಬಕ್ಕೆ ಆಗಿರುವ ನೋವು, ನಷ್ಟವನ್ನ ಆ ಭಗವಂತ ಸರಿಪಡಿಸುವ ಶಕ್ತಿ ನೀಡಲಿ. ಚೆನ್ನಿಗಪ್ಪರ ಆತ್ಮಕ್ಕೆ ಭಗವಂತ ಶಾಂತಿ ಕೊಡಲಿ. ಶಿವರಾತ್ರಿ ದಿನ ಮರಣ ಹೊಂದಿರುವಂತಹದ್ದು ಶಿವನ ಬಳಿಗೆ ಅವರು ತೆರಳಿದ್ದಾರೆಂಬುದು ನನ್ನ ಭಾವನೆ. ಅಂತ್ಯಸಂಸ್ಕಾರದಲ್ಲಿ ನಾನು ಭಾಗವಹಿಸುತ್ತೇನೆ ಎಂದರು.