ಕರ್ನಾಟಕ

karnataka

ETV Bharat / state

ಜೆಡಿಎಸ್ 'ಜನತಾ ಜಲಧಾರೆ' ಗಂಗಾ ರಥಗಳಿಗೆ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರಿಂದ ಚಾಲನೆ

'ಜನತಾ ಜಲಧಾರೆ' 15 ಗಂಗಾ ರಥಗಳಿಗೆ ಇಂದು ಚಾಲನೆ ದೊರೆತಿದೆ. ಜೆಡಿಎಸ್​ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲಾ ನೀರಾವರಿ ಯೋಜನೆಗಳನ್ನು ಜಾರಿಗೆ ತರುವ ಭರವಸೆಯನ್ನು ಜನತೆಗೆ ನೀಡಿದೆ..

H.D.Devegowda inaugerated Janatha Jaladhare
ಜೆಡಿಎಸ್ 'ಜನತಾ ಜಲಧಾರೆ' ಗಂಗಾ ರಥಗಳಿಗೆ ಹೆಚ್​.ಡಿ.ದೇವೇಗೌಡ ಚಾಲನೆ

By

Published : Apr 12, 2022, 3:48 PM IST

ರಾಮನಗರ: ರಾಮನಗರದ ಶ್ರೀ ಚಾಮುಂಡೇಶ್ವರಿ, ದರ್ಗಾ ಸನ್ನಿಧಿಯಲ್ಲಿ ವಿಸೇಷ ಪೂಜೆ ಸಲ್ಲಿಸಿದ ನಂತರ 'ಜನತಾ ಜಲಧಾರೆ' ಅಭಿಯಾನದ 15 ಗಂಗಾ ರಥಗಳಿಗೆ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರು ಚಾಲನೆ ನೀಡಿದರು. ಇದೇ 16ರಂದು ಪ್ರಮುಖ ನದಿ ಕೇಂದ್ರದಿಂದ, ನದಿ, ಉಪನದಿ ಸೇರಿದಂತೆ 94 ಸ್ಥಳದಿಂದ ಜಲ ಸಂಗ್ರಹವಾಗಲಿದೆ. ಕಾವೇರಿ, ಕಬಿನಿ, ಹೇಮಾವತಿ, ಅಘನಾಶಿನಿ, ಮಹಾದಾಯಿ, ಮಲಪ್ರಭಾ, ಘಟಪ್ರಭಾ ಸೇರಿದಂತೆ ನದಿ, ಉಪನದಿಗಳಿಂದ ಇಂದು ಚಾಲನೆ ಪಡೆದಿರುವ 15 ಗಂಗಾ ರಥಗಳು ಜಲ ಸಂಗ್ರಹಣೆ ಮಾಡಲಿವೆ.

ಜೆಡಿಎಸ್ 'ಜನತಾ ಜಲಧಾರೆ' ಗಂಗಾ ರಥಗಳಿಗೆ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡರು ಚಾಲನೆ ನೀಡಿರುವುದು..

ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್​ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಹೆಚ್​.ಡಿ.ದೇವೇಗೌಡ ಅವರು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್​ ಅಧಿಕಾರಕ್ಕೆ ಬಂದರೆ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲು ಪಕ್ಷ ಕಟಿಬದ್ಧವಾಗಿದೆ. ಅದಕ್ಕೆ ಮುನ್ನೆಲೆಯಾಗಿ ಇಂದು ಜನತಾ ಜಲಧಾರೆ ರಥಗಳಿಗೆ ಚಾಲನೆ ನೀಡಲಾಗಿದೆ. 31 ಜಿಲ್ಲೆಗಳ 184 ತಾಲೂಕುಗಳಲ್ಲಿ ಜಲಧಾರೆ ರಥಗಳು ಸಂಚರಿಸಲಿವೆ. ಶಕ್ತಿ ಕೇಂದ್ರ ರಾಮನಗರದಿಂದ ವಿವಿಧೆಡೆ ಜಲಧಾರೆ ರಥಗಳು ಸಾಗಲಿವೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ, ಬಂಡೆಪ್ಪ ಖಾಶೆಂಪೂರ, ಶಾಸಕರಾದ ಅನಿತಾ ಕುಮಾರಸ್ವಾಮಿ, ಅನ್ನದಾನಿ, ಅಲ್ಪಸಂಖ್ಯಾತ ನಾಯಕ ಸಿ ಎಂ ಇಬ್ರಾಹಿಂ, ಜೆಡಿಎಸ್​ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ರಾಮನಗರ ಜೆಡಿಎಸ್​ ಜಿಲ್ಲಾಧ್ಯಕ್ಷ, ಮಾಗಡಿ ಶಾಸಕ ಎ.ಮಂಜುನಾಥ್ ಸೇರಿದಂತೆ ಹಲವು ಜೆಡಿಎಸ್​ ನಾಯಕರು ಭಾಗವಹಸಿದ್ದರು. ಸಮಾವೇಶದಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.

ಇದನ್ನೂ ಓದಿ:ಜೆಡಿಎಸ್ 'ಜನತಾ ಜಲಧಾರೆ': ಹೆಚ್​ಡಿಕೆ ಕರ್ಮಭೂಮಿಯಿಂದಲೇ 15 ಗಂಗಾ ರಥಗಳಿಗೆ ಇಂದು ಹಸಿರು ನಿಶಾನೆ

ABOUT THE AUTHOR

...view details