ಕರ್ನಾಟಕ

karnataka

ETV Bharat / state

ಹಣಕ್ಕಾಗಿ ಪೆಂಡಿಂಗ್​ ಇಟ್ಟಿರುವ ಅರ್ಜಿಗಳ ದಾಖಲೆ ನೀಡಿ: ಹೆಚ್​.ಡಿ.ಕುಮಾರಸ್ವಾಮಿ

ಚನ್ನಪಟ್ಟಣ ತಾಲೂಕು ಕಚೇರಿಯಲ್ಲಿ ನಡೆಯುತ್ತಿದೆ ಎನ್ನಲಾದ ಭ್ರಷ್ಟಾಚಾರ ವಿಚಾರಕ್ಕೆ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಗರಂ ಆದರು.

hd-kumaraswamy-statement-on-channapatna-taluk-office-corruption
ಕುಮಾರಸ್ವಾಮಿ

By

Published : Nov 6, 2021, 5:18 PM IST

ರಾಮನಗರ: ಚನ್ನಪಟ್ಟಣ ತಾಲೂಕು ಕಚೇರಿ ಭ್ರಷ್ಟಾಚಾರ ವಿಚಾರದಲ್ಲಿ ನಾನು ಗಂಭೀರವಾಗಿದ್ದೇನೆ. ದಾಖಲೆಗಳೊಂದಿಗೆ ಕಚೇರಿಗೆ ಬಂದಿರುವ ಅರ್ಜಿಗಳು ಎಷ್ಟು?. ಆ ಅರ್ಜಿಗಳಲ್ಲಿ ಎಷ್ಟು ಪೆಂಡಿಂಗ್ ಇವೆ ಎನ್ನುವ ಮಾಹಿತಿ ಬೇಕು ಎಂದು ಚನ್ನಪಟ್ಟಣದಲ್ಲಿ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.


ಚನ್ನಪಟ್ಟಣಕ್ಕೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ತಾಲೂಕು ಕಚೇರಿಯಲ್ಲಿ ಹಣಕ್ಕಾಗಿ ರೈತರ ಅರ್ಜಿಗಳನ್ನು ಎಷ್ಟು ಪೆಂಡಿಂಗ್ ಇಟ್ಟಿದ್ದಾರೆ ಎನ್ನುವ ದಾಖಲೆ ಕೊಡಲಿ. ನಾನು ಯಾರೋ ಒಬ್ಬರ ಹೇಳಿಕೆಗೆ ಉತ್ತರ ಕೊಡಲ್ಲ. ಕಾನೂನುಬಾಹಿರವಾಗಿ ಭೂಮಿ ಹೊಡೆಯುವವರಿಗೆ ನಾನು ಪ್ರೋತ್ಸಾಹ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಭ್ರಷ್ಟಾಚಾರ ಯಾರೇ ಮಾಡಲಿ, ಅದು ನನ್ನ ಪಕ್ಷದಲ್ಲಿಯೇ ಇರಲಿ, ಬೇರೆ ಪಕ್ಷದಲ್ಲಿಯೇ ಇರಲಿ ಪ್ರೋತ್ಸಾಹ ಕೊಡಲ್ಲ. ಅದರಲ್ಲೂ ಬಡವರ ಹೆಸರಿನಲ್ಲಿ ಭೂಮಿ ಹೊಡೆಯುವವರಿಗೆ ನಾನು ಎಂದಿಗೂ ಬೆಂಬಳ ನೀಡಲ್ಲ. ಬಡವರ ಕೆಲಸಕ್ಕಾಗಿ ಮಾತ್ರ ನಾನಿದ್ದೇನೆ ಎಂದು ಪರೋಕ್ಷವಾಗಿ ಸಿಪಿವೈ ವಿರುದ್ಧ ಮಾಜಿ ಸಿಎಂ ಹೆಚ್​ಡಿಕೆ ವಾಗ್ದಾಳಿ ನಡೆಸಿದರು.

ABOUT THE AUTHOR

...view details