ಕರ್ನಾಟಕ

karnataka

ETV Bharat / state

ಮತಾಂತರದ ವಿಧೇಯಕದ ಬಗ್ಗೆ ಚರ್ಚಿಸಲು ಕಾಂಗ್ರೆಸ್​​​ ನೈತಿಕತೆ ಉಳಿಸಿಕೊಂಡಿಲ್ಲ: ಹೆಚ್​ಡಿಕೆ ವಾಗ್ದಾಳಿ

ಬಿಡದಿ ಪುರಸಭಾ ಚುನಾವಣಾ ಪ್ರಚಾರ ಕಣಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್​​ಡಿ ಕುಮಾರಸ್ವಾಮಿ ಅವರು ಧುಮುಕಿದ್ದಾರೆ. ಈ ವೇಳೆ, ಕಾಂಗ್ರೆಸ್​ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

HD Kumaraswamy slams congress leaders
ಕಾಂಗ್ರೆಸ್​ ನಾಯಕರ ವಿರುದ್ಧ ಹೆಚ್​ಡಿಕೆ ವಾಗ್ದಾಳಿ

By

Published : Dec 23, 2021, 4:13 PM IST

ರಾಮನಗರ : ಬಿಡದಿ ಪುರಸಭಾ ಲೋಕಲ್ ಫೈಟ್ ರಂಗೇರಿದೆ. ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಅವರು ‌ಪ್ರಚಾರದ ಅಖಾಡಕ್ಕೆ ಇಳಿದಿದ್ದು, ಕಲ್ಲುಗೋಪಹಳ್ಳಿಯಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ಕಾಂಗ್ರೆಸ್​ ನಾಯಕರ ವಿರುದ್ಧ ಹೆಚ್​ಡಿಕೆ ವಾಗ್ದಾಳಿ

ಹೆಚ್​​ಡಿ ಕುಮಾರಸ್ವಾಮಿ ಅವರು ಆಗಮಿಸುತ್ತಿದ್ದಂತೆ ಜೆಸಿಬಿ ಮೂಲಕ ಹೂಮಳೆ ಸುರಿಸಿದ ಜೆಡಿಎಸ್ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ನಂತರ ರೋಡ್ ಶೋ ಮೂಲಕ ಹೆಚ್‌ಡಿಕೆ ಪುರಸಭೆ ವಾರ್ಡ್​ಗಳ ಜೆಡಿಎಸ್ ಅಭ್ಯರ್ಥಿಗಳ ಪರ ಮತಬೇಟೆ ಆರಂಭಿಸಿದರು. ಇಂದು ಸಂಜೆವರೆಗೆ 23 ವಾರ್ಡ್​ಗಳಲ್ಲಿ ಹೆಚ್​ಡಿಕೆ ಪ್ರಚಾರ ನಡೆಸಲಿದ್ದಾರೆ.

ಈ ವೇಳೆ, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಕ್ರೈಸ್ತ ಸಮುದಾಯದವರ ಜೊತೆ ಸಭೆ ಮಾಡಿ ವೀರಾವೇಷವಾಗಿ ಮಾತನಾಡಿದ ಕಾಂಗ್ರೆಸ್​ನವರಿಗೆ ಬೆಳಗಾವಿ ಅಧಿವೇಶನದಲ್ಲಿ ಮಂಗಳಾರತಿಯಾಗಿದೆ.

ಯಾವ ಮುಖ ಇಟ್ಟುಕೊಂಡು ಸಿದ್ದರಾಮಯ್ಯ, ಮತಾಂತರದ ಬಗ್ಗೆ ಮತನಾಡುತ್ತಾರೆ‌‌. ಅಧಿಕಾರ ಹಿಡಿದಿದ್ದೇವೆಂಬ ಭ್ರಮಲೋಕದಲ್ಲಿ ಕಾಂಗ್ರೆಸ್​ನವರು ತೇಲುತ್ತಿದ್ದಾರೆ. ಜನರೇ ಇಳಿಸುತ್ತಾರೆ. ಸ್ವಲ್ಪ ಕಾದು ನೋಡಿ ಎಲ್ಲದಕ್ಕೂ ಮುಂದಿನ ದಿನಗಳಲ್ಲಿ‌ ಉತ್ತರ ಸಿಗಲಿದೆ ಎಂದರು.

ಮತಾಂತರದ ವಿಧೇಯಕದ ಚರ್ಚೆ ಮಾಡುವುದಕ್ಕೆ ಕಾಂಗ್ರೆಸ್​ನವರು ನೈತಿಕತೆಯೇ ಉಳಿಸಿಕೊಂಡಿಲ್ಲ. ಬಿಜೆಪಿಯವರ ಕೈಗೆ ಅಸ್ತ್ರಗಳನ್ನು ಕೊಟ್ಟಿದ್ದು ಕಾಂಗ್ರೆಸ್‌ನವರೇ. ಈ ನಾಡಿಗೆ, ಸಮುದಾಯಕ್ಕೆ ರಕ್ಷಣೆ ಕೊಡುವಂತಹದ್ದನ್ನು ನಾನು ಈ ಮಹಾನ್ ನಾಯಕರಿಂದ ಕಲಿಯಬೇಕಿಲ್ಲ. ನಮ್ಮ ಕಾಲದಲ್ಲಿ ಗಲಭೆಗಳಿಗೆ ಅಶಾಂತಿಗಳಿಗೆ ನಾವು ಎಂದು ಬಿಟ್ಟುಕೊಟ್ಟಿಲ್ಲ.

ಜೆಡಿಎಸ್ ಪಕ್ಷದ ಶಕ್ತಿ ಏನು ಎಂಬುದನ್ನು 2023 ಕ್ಕೆ ಜನರೆ ತೋರಿಸುತ್ತಾರೆ. ಆಗ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇವತ್ತು ಬೆಳಗ್ಗೆ ಸಿದ್ದರಾಮಯ್ಯ ಅವರಿಗೆ ಮುಖಕ್ಕೆ ಮಂಗಳಾರತಿಯಾಗಿದೆ. ಇವರೇ ಸಹಿ ಹಾಕಿ ಹಾಳುಹಿಸಿದ್ದಾರೆ. ಯಾವ ಮುಖ ಇಟ್ಟುಕೊಂಡು ವಿಧಾನಸಭೆಯಲ್ಲಿ ಮಾತನಾಡುತ್ತಾರೆ. ಇಂದು ಇವರ ಬಣ್ಣ ಬಯಲಾಯಿತು. ಗೋ ಹತ್ಯೆ ಕಾಯ್ದೆಗೆ ವಿರುದ್ಧ ಕಾಂಗ್ರೆಸ್​​ನವರು ವಿಧಾನಪರಿಷತ್ತಿನಲ್ಲಿ ವಾಕ್​ ಔಟ್ ಮಾಡಿದ್ದರು. ಅವತ್ತು ವಿರೋಧವಾಗಿ ವೋಟ್​ ಹಾಕಲಿಲ್ಲ.

ಈಗ ನಮ್ಮ ಬಗ್ಗೆ ಮಾತನಾಡುತ್ತಾರೆ. ಬಿಜೆಪಿ ಹೊಡೆದಂತೆ ಮಾಡುತ್ತೀವಿ ಅಂತಾರೆ. ಕಾಂಗ್ರೆಸ್​ನವರು ಅತ್ತಂಗೆ ಮಾಡುತ್ತೇವೆ ಅಂತಾರೆ. ಬಿಜೆಪಿ ಮತ್ತು ಕಾಂಗ್ರೆಸ್​ ಒಂದೇ ನಾಣ್ಯದ ಎರಡು ಮುಖಗಳು ಎಂದು ವಾಗ್ದಾಳಿ ನಡೆಸಿದರು. ನಮ್ಮ ಪಕ್ಷದ ಶಾಸಕರು ವಿಧಾನಸಭೆಯಲ್ಲಿ ಮತಾಂತರ ಕಾಯ್ದೆಗೆ ವಿರೋಧವಾಗಿ ವೋಟ್​ ಹಾಕುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು. ​

ಇದನ್ನೂ ಓದಿ:ಮತಾಂತರ ನಿಷೇಧ ವಿಧೇಯಕ ಮೇಲಿನ ಚರ್ಚೆ: ಸಚಿವ ಮಾಧುಸ್ವಾಮಿ - ಸಿದ್ದರಾಮಯ್ಯ ಮಧ್ಯೆ ಸವಾಲು, ಪ್ರತಿ ಸವಾಲು

ABOUT THE AUTHOR

...view details