ರಾಮನಗರ: ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ನಿರ್ಲಕ್ಷ್ಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ವಿಚಾರವಾಗಿ ಬಿಡದಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ನಿನ್ನೆ ಒಂದು ಟ್ವೀಟ್ ಮಾಡಿದೆ. ಅದರಲ್ಲಿ 'ದೇವೇಗೌಡರನ್ನು ಆಹ್ವಾನ ಮಾಡಿದ್ದೆವು. ದೇವೇಗೌಡರಿಗೆ ಕುಟುಂಬ ಬಿಟ್ರೆ ಬೇರೆ ಏನಿಲ್ಲ ಅಂದಿದ್ದಾರೆ. ನಮ್ಮದು ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಅಂತೆಲ್ಲಾ ಮೋದಿ ಭಾಷಣ ಮಾಡಿದ್ದಾರೆ. ನಾಗರೀಕತೆ ಅನ್ನೋದು ನಿಮಗೆ ಹಾಗೂ ನಿಮ್ಮ ಪಕ್ಷಕ್ಕೆ ಇದೆಯಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ರಾತ್ರಿ 9:30ಕ್ಕೆ ಸಿಎಂ ಕರೆ ಮಾಡಿದ್ದಾರೆ: ಸಿಎಂ ಕಾರ್ಯಕ್ರಮದ ಹಿಂದಿನ ದಿನ ರಾತ್ರಿ 9:30ಕ್ಕೆ ದೂರವಾಣಿ ಕರೆ ಮಾಡಿದ್ದಾರೆ. ಮಧ್ಯರಾತ್ರಿ ರಾತ್ರಿ 12:45ರಲ್ಲಿ ಯಾರದ್ದೋ ಕೈಯಲ್ಲಿ ಪತ್ರ ಕೊಟ್ಟಿದ್ದಾರೆ. ಆ ಪತ್ರದಲ್ಲಿ ಮಾನ್ಯರೇ ಅಂತಾ ಇದೆ. ಕೆಳಗಡೆ ಮಾತ್ರ ದೇವೇಗೌಡರ ಹೆಸರು ಹಾಕಿದ್ದಾರೆ.
ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೆಚ್ಡಿಡಿ ನಿರ್ಲಕ್ಷ್ಯ ವಿಚಾರ: ಕುಮಾರಸ್ವಾಮಿ ಪ್ರತಿಕ್ರಿಯೆ ಕರ್ನಾಟಕದ ಅಸ್ಮಿತೆ ಅಂತ ಕನ್ನಡಿಗರನ್ನು ಗುಲಾಮರನ್ನಾಗಿ ಮಾಡಲು ಹೋಗಿದ್ದಾರೆ. ಪ್ರತಿನಿತ್ಯ ಹಿಂದಿ ಹೇರಿಕೆ ಮಾಡಲು ಬಿಜೆಪಿ ಹುನ್ನಾರ ನಡೆಸುತ್ತಿದೆ. ಅಂತದ್ರಲ್ಲಿ ಇವರು ಕರ್ನಾಟಕದ ಅಸ್ಮಿತೆ ಕಾಪಾಡುತ್ತಾರಾ?. ಇಂದು ರಾಜ್ಯ ನಾಯಕರು ಗುಲಾಮರ ರೀತಿಯಲ್ಲಿ ಮೋದಿ ಮುಂದೆ ಕೈಕಟ್ಟಿ ನಿಂತುಕೊಳ್ಳುತ್ತಾರೆ. ಇವರು ಕರ್ನಾಟಕದ ಅಸ್ಮಿತೆ ಕಾಪಾಡುತ್ತಾರಾ? ಎಂದು ಬಿಜೆಪಿ ನಾಯಕರ ವಿರುದ್ಧ ಹೆಚ್‍ಡಿಕೆ ಕಿಡಿಕಾರಿದ್ದಾರೆ.
ಇದನ್ನೂ ಓದಿ:ಮಾಡಿದ ತಪ್ಪನ್ನೇ ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುವುದು ಬಿಜೆಪಿಗೆ ಸಿದ್ಧಿಸಿರುವ ಕಲೆ: ಜೆಡಿಎಸ್ ವಾಗ್ದಾಳಿ
ಸಿಪಿವೈಗೆ ಟಾಂಗ್:ಮರಿ ಆನೆ, ಅಂಬಾರಿ ಆನೆ ಎಂದು ಹೇಳಿಕೊಂಡು ರಾಜಕಾರಣ ಮಾಡಲು ಹೊರಟಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ಗೆ ಟಾಂಗ್ ಕೊಟ್ಟ ಕುಮಾರಸ್ವಾಮಿ, ಇವರನ್ನ ಕೇಳಿ ನಾವು ಕ್ಷೇತ್ರಕ್ಕೆ ಬರಬೇಕಾ?, ಇವರನ್ನ ಕೇಳಿ ನಾವು ರಾಜಕೀಯ ಮಾಡಬೇಕಾ. ಇವರು ಎಲ್ಲೆಲ್ಲಿ ಬೇನಾಮಿ ಆಸ್ತಿ ಮಾಡಿಕೊಂಡಿದ್ದಾರೆ ಎಲ್ಲವೂ ಗೊತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಬರಲಿದ್ದು, ಇದಕ್ಕೆಲ್ಲ ತಕ್ಕ ಉತ್ತರ ಕೊಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ದೇವೆಗೌಡರಿಗೆ ಆಹ್ವಾನಿಸದಿದ್ದಕ್ಕೆ ಜೆಡಿಎಸ್ ಆಕ್ರೋಶ: ನಾಡಪ್ರಭು ಕೆಂಪೇಗೌಡರು ಬಿಜೆಪಿ ಆಸ್ತಿಯಲ್ಲಎಂದು ಗರಂ