ಕರ್ನಾಟಕ

karnataka

ETV Bharat / state

'ಜನ ಕೈಬಿಡಲ್ಲ ಎಂಬ ನಂಬಿಕೆ ಸದಾ ನನಗಿದೆ' - HD Kumaraswamy responding to the DK Shivakumar contest in ramanagara constituency

ಅವರೇ ಬೆಳೆಸಿದ ಮಗು ನಾನು, ಅವರೇ ಚಿವುಟುತ್ತಾರೆಯೇ?. ನನ್ನ ಜನಗಳ ಮೇಲೆ ವಿಶ್ವಾಸವಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

hd-kumaraswamy
ಹೆಚ್.ಡಿ.ಕುಮಾರಸ್ವಾಮಿ

By

Published : Jan 20, 2021, 8:34 PM IST

ರಾಮನಗರ: ಇಲ್ಲಿ ಯಾರು ಬೇಕಾದರೂ ಬಂದು ಸ್ಪರ್ಧೆ ಮಾಡಲಿ, ನನ್ನ ವಿರೋಧವಿಲ್ಲ. ವೈಯಕ್ತಿಕ ಸ್ನೇಹ ಬೇರೆ ರಾಜಕೀಯವೇ ಬೇರೆ ಎಂದು ರಾಮನಗರದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

2023ರ ಚುನಾವಣೆಯಲ್ಲಿ ಸ್ಪರ್ಧೆ ವಿಚಾರಕ್ಕೆ ಸಂಬಂದಪಟ್ಟಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಮನಗರದಲ್ಲಿ ಸ್ಪರ್ಧಿಸುತ್ತಾರೆಂಬ ಸುದ್ದಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಕುಟುಂಬ ಹಾಗೂ ನನ್ನನ್ನು ಬೆಳೆಸಿದವರು ನನ್ನ ಕೈಬಿಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಓದಿ:ನಾನು ಹಲ್ಲೆ ಮಾಡಿಲ್ಲ, ಅವರೇ ನನ್ನ ಸೀರೆ, ಕೂದಲು ಎಳೆದರು: ಶಾಸಕಿ ಸೌಮ್ಯಾ ರೆಡ್ಡಿ

ಅವರೇ ಬೆಳೆಸಿದ ಮಗು ನಾನು, ಅವರೇ ಚಿವುಟುತ್ತಾರೆಯೇ?. ನನ್ನ ಜನಗಳ ಮೇಲೆ ವಿಶ್ವಾಸವಿದೆ. ರಾಮನಗರ-ಚನ್ನಪಟ್ಟಣದ ಜನ ನನ್ನ ಕೈಬಿಡಲ್ಲ ಎಂದರು.

ABOUT THE AUTHOR

...view details