ರಾಮನಗರ:ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಬಗ್ಗೆ ಯಾರು ದೂರು ನೀಡಿದ್ದಾರೆಂದು ನನಗೆ ಗೊತ್ತಿಲ್ಲ. ನಾನಂತೂ ಯಾರ ಬಗ್ಗೆಯೂ ದೂರು ನೀಡಿಲ್ಲ. ಯಾರು ದೂರು ಕೊಟ್ಟಿದ್ದಾರೊ ಅವರೇ ಸಮರ್ಥವಾಗಿ ಉತ್ತರ ಕೊಟ್ಟುಕೊಳ್ಳುತ್ತಾರೆ ಎಂದು ಹೇಳಿದರು.
ಜಿಲ್ಲೆಯ ಬಿಡದಿಯ ತೋಟದ ಮನೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂದ್ರ ಸರ್ಕಾರದಲ್ಲಿರುವ ಕೆಲವು ಸಂಸ್ಥೆಗಳು ಅರ್ಜಿಗಳು ಬಂದಾಗ ತನಿಖೆ ನಡೆಸಿಕೊಂಡು ಬಂದಿರುವುದು ಸಾಮಾನ್ಯ. ನಮ್ಮ ಮೇಲೆ ಅನೇಕ ಬಾರಿ ತನಿಖೆಗಳು ನಡೆದಿಲ್ಲವೇ, 25ರಿಂದ 30 ವರ್ಷದ ವರೆಗೆ ತನಿಖೆ ನಡೆದಿದೆ ಎಂದರು.