ಕರ್ನಾಟಕ

karnataka

ETV Bharat / state

ಸಿಡಿ ಪ್ರಕರಣ ಅಂತಿಮವಾಗಿ ಯಾರಿಗೆ ಸುತ್ತಿಕೊಳ್ಳಲಿದೆ ಗೊತ್ತಿಲ್ಲ;  ಹೆಚ್​ಡಿಕೆ - CD issue

ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ ವಿಚಾರವಾಗಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ರಾಜಕೀಯವಾಗಿ ನಮ್ಮ ಕುಟುಂಬದಲ್ಲಿ ಇಂತಹ ವಿಷಯಗಳ ಬಗ್ಗೆ ಯಾರೂ ಕೂಡ ದುರುಪಯೋಗ ಮಾಡಿಕೊಂಡು ರಾಜಕೀಯ ಮಾಡಿಲ್ಲ ಎಂದರು.

HD Kumaraswamy
ಕುಮಾರಸ್ವಾಮಿ

By

Published : Mar 15, 2021, 1:22 PM IST

ರಾಮನಗರ:ಸಿಡಿ ಪ್ರಕರಣದ ಹಿಂದಿರುವ ಮಹಾನ್ ನಾಯಕ ಯಾರು ಎಂದು ತಿಳಿಯಲು ನಾನು ಕುತೂಹಲದಿಂದ ಕಾಯ್ತಿದ್ದೀನಿ ಎಂದು ರಾಮನಗರದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಈ ಪ್ರಕರಣ ಸಾರ್ವಜನಿಕರ ನಗೆಪಾಟಲಿಗೆ ಗುರಿಯಾಗಿದ್ದು, ಯಾವುದೋ ಲಿಂಕ್ ತೆಗೆದುಕೊಂಡು ಧಾರಾವಾಹಿ ರೀತಿ ಎಳೆದಾಡುತ್ತಿದ್ದಾರೆ. ಅಂತಿಮವಾಗಿ ಯಾರಿಗೆ ಸುತ್ತಾಕಿಕೊಳ್ಳಲಿದೆ ಎಂಬುದನ್ನ ನಾನು ಕೂಡ ಕಾಯುತ್ತಿದ್ದೇನೆ.

ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ

ರಾಜಕೀಯವಾಗಿ ನಮ್ಮ ಕುಟುಂಬವು ಇಂಥ ವಿಷಯಗಳನ್ನು ದುರುಪಯೋಗ ಮಾಡಿಕೊಂಡು ರಾಜಕೀಯ ಮಾಡಿಲ್ಲ. ಇದು ಅವರ ವೈಯಕ್ತಿಕ ವಿಚಾರ. ಜನರ ಸಮಸ್ಯೆಗಳ ಬಗ್ಗೆಯೇ ನಮಗೆ ದೊಡ್ಡ ಸವಾಲುಗಳಿವೆ, ಅದರ ಬಗ್ಗೆ ಗಮನ ಕೊಡಬೇಕು. ಈ ರೀತಿಯ ಘಟನೆಗಳಿಂದ ವೈಯಕ್ತಿಕ ಲಾಭ ಪಡೆಯುವ ಸಣ್ಣತನಕ್ಕೆ ನಾವು ಇಳಿಯುವುದಿಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಯಾಕೆ ಇದರಲ್ಲಿ ತಮ್ಮನ್ನು ಎಳೆದುಕೊಳ್ಳುತ್ತಿದ್ದಾರೆ ಎಂಬುದು ನನಗೆ ಇಂದಿಗೂ ಕೂಡ ಗೊತ್ತಾಗುತ್ತಿಲ್ಲ. ಯಾರಾದರೂ ಹೇಳಿದ್ದಾರಾ, ಅವರೇ ಮಾಡಿದ್ದಾರಾ ಅಥವಾ ಜಾರಕಿಹೊಳಿ ಹೇಳಿದ್ರಾ ಅಥವಾ ಮಾಧ್ಯಮದವರು ಏನಾದ್ರು ಹೇಳಿದ್ರಾ..? ಯಾಕೆ ಅವರೇ ಊಹೆ ಮಾಡಿಕೊಂಡರು ಎಂಬುದು ಗೊತ್ತಿಲ್ಲ ಮಾಜಿ ಸಿಎಂ ಹೆಚ್​ಡಿಕೆ ತಿಳಿಸಿದರು.

ABOUT THE AUTHOR

...view details