ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ರಾಮನಗರ:ರೈತರೊಂದಿಗೆ ಕುಮಾರಸ್ವಾಮಿ ಎಂಬ ರೈತರ ಜೊತೆ ಸಂವಾದ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದರು. ರಾಜ್ಯದ 58 ತಾಲೂಕಿನ ರೈತರ ಜೊತೆಯಲ್ಲಿ ಸಂವಾದ ಮಾಡ್ತಿದ್ದೇನೆ. ಪ್ರತಿಯೊಂದು ತಾಲೂಕಿನಿಂದ 100 ರಿಂದ 300 ಜನ ರೈತರು ಭಾಗವಹಿಸುತ್ತಿದ್ದಾರೆ. ಒಟ್ಟು 15 ಸಾವಿರಕ್ಕೂ ಹೆಚ್ಚು ರೈತರ ಜೊತೆ ವರ್ಚುಯಲ್ ನಲ್ಲಿ ಭಾಗವಹಿಸುತ್ತಿದ್ದೇನೆ. ರೈತರ ಜೊತೆ ಯಾವ ರೀತಿಯ ಯೋಜನೆಗಳು ರೈತರಿಗೆ ಆರ್ಥಿಕ ಶಕ್ತಿ ತುಂಬಲು ಹಾಕಿಕೊಂಡಿದ್ದೇನೆ ಎಂಬ ಕುರಿತು ಚರ್ಚಿಸಿ ಅವರ ಸಮಸ್ಯೆಗಳನ್ನು ಆಲಿಸಲಾಗುವುದು ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ತಿಳಿಸಿದರು.
ರೈತರ ಜೊತೆ ಕುಮಾರಸ್ವಾಮಿ ಎಂಬ ಸಂವಾದ ಕಾರ್ಯಕ್ರಮ:ರಾಮನಗರ ತಾಲೂಕಿನ ಕೇತಿಗಾನಹಳ್ಳಿ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ರೈತರ ಜೊತೆ ಕುಮಾರಸ್ವಾಮಿ ಎಂಬ ಸಂವಾದ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು. ಪಂಚರತ್ನ ಯೋಜನೆಯ ಮುಖಾಂತರ ಜನರ ಬಳಿ ಹೋಗುತ್ತಿದ್ದೇನೆ. ಇದು ಪ್ರತಿ ಕುಟುಂಬದ ಬದುಕಿಗೆ ಕಾರ್ಯಕ್ರಮವಾಗಿದೆ, ಯಾರ ಮುಂದೆ ಕೈಚಾಚ ಬೇಕಾಗಿಲ್ಲ, ಸ್ವಾಭಿಮಾನದಿಂದ ಬದುಕಲು ಈ ಐದು ಕಾರ್ಯಕ್ರಮಗಳು ನಾಡಿನ ಪ್ರತಿ ವರ್ಗದ, ಜಾತಿಯ, ಪ್ರತಿ ಸಮಾಜದ ಕುಟುಂಬಗಳಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳಾಗಿವೆ ಎಂದರು.
ಯಾವುದೇ ರೀತಿಯ ಹಣದ ದುರ್ಬಳಕೆಯಾಗದ ರೀತಿಯಲ್ಲಿ ಯೋಜನೆ ರೂಪಿಸಲಾಗುತ್ತದೆ:ನಾಡಿನ ಪ್ರತಿ ವರ್ಗದ ಕುಟುಂಬಗಳಿಗೆ ಉಪಯೋಗವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಗಳ ಮೂಲಕ ಇಲಾಖೆಯಲ್ಲಿ ಪರ್ಸೆಂಟೇಜ್ ನಿಲ್ಲಿಸುವ ಕೆಲಸವಾಗಲಿದೆ. ಈ ಐದು ಕಾರ್ಯಕ್ರಮಗಳಿಗೆ ಪಂಚಾಯಿತಿ ಮಟ್ಟದಲ್ಲೇ ಪಾರದರ್ಶಕತೆಯನ್ನು ತಂದು, ಪಂಚಾಯಿತಿಗಳಲ್ಲೇ ಸಮೀತಿಗಳನ್ನು ರಚನೆ ಮಾಡಿ ಯಾವುದೇ ರೀತಿಯ ಹಣದ ದುರ್ಬಳಕೆಯಾಗದ ರೀತಿಯಲ್ಲಿ ಯೋಜನೆ ರೂಪಿಸಲಾಗುತ್ತದೆ ಎಂದರು.
ಕಾಂಗ್ರೆಸ್ ನವರು 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇವೆ. ಮಹಿಳೆಯರಿಗೆ ತಿಂಗಳಿಗೆ 2000 ರೂ ನೀಡುತ್ತೇವೆ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ. ನಾನು ಅದರ ಬಗ್ಗೆ ಮಾತನಾಡೊಲ್ಲ. ದುಡಿಯುವವರ ಕೈ ಬಲಪಡಿಸುವ ಕೆಲಸ ಮಾಡಬೇಕು. ಚುನಾವಣೆ ಬಂದರೆ ಸೀರೆ, ಕುಕ್ಕರ್ ಹಂಚುತ್ತಾರೆ. ನಾಡಿನ ಜನರು ಯಾರಿಂದ ಏನು ಬೇಡಬಾರದು ಆ ನಿಟ್ಟಿನಲ್ಲಿ ನಾನು ಕೈಗೊಂಡಿರುವ ಕಾರ್ಯಕ್ರಮ ಮುಂದಿನ 5 ವರ್ಷ ಪ್ರಗತಿಯಲ್ಲಿರುತ್ತದೆ ಎಂದು ಹೇಳಿದರು.
ನಾನು ಕೈಗೊಂಡಿರುವ ಕಾರ್ಯಕ್ರಮಗಳಿಗೆ 2.5 ಲಕ್ಷ ಕೋಟಿ ಅಷ್ಟು ಹಣ ಬೇಕು:ರೈತರ ಆತ್ಮಹತ್ಯೆಗಳನ್ನು ನೋಡಿ ಸಾಲ ಮನ್ನಾ ಕಾರ್ಯಕ್ರಮ ಮಾಡಿದೆ. ನಾನು ಕೈಗೊಂಡಿರುವ ಕಾರ್ಯಕ್ರಮಗಳಿಗೆ 2.5 ಲಕ್ಷ ಕೋಟಿ ಅಷ್ಟು ಹಣ ಬೇಕು. ಅಷ್ಟು ಹಣವನ್ನು ಕ್ರೋಡಿಕರಿಸುವ ಕೆಲಸ ಮಾಡುತ್ತೇನೆ ನಮ್ಮ ರಾಜ್ಯ ಸಂಪತ್ತು ಭರಿತವಾಗಿದೆ ಎಂದರು. ಸ್ತೀಶಕ್ತಿ ಸ್ವಸಹಾಯ ಸಂಘಗಳು ಮನವಿ ಮಾಡಿದ್ದಾರೆ. ರೈತರ ಸಾಲಮನ್ನಾ ಮಾಡಿದ ಹಾಗೆ ನಮ್ಮ ಸಾಲ ಕೂಡ ಮನ್ನಾ ಮಾಡಿ ಎಂದು ಹೇಳಿದ್ದಾರೆ. ಅದರ ಬಗ್ಗೆ ಕೂಡ ಚರ್ಚೆ ಮಾಡಲಾಗುತ್ತಿದೆ. ಈ ವೇಳೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಡಿಸಿಸಿ ಬ್ಯಾಂಕ್ ನ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಲಂಚ, ವರ್ಗಾವಣೆ ಅಂತಹ ಕೆಲಸಗಳನ್ನು ಸ್ಯಾಂಟ್ರೋ ರವಿ ಮಾಡಿದ್ದಾನೆ:ಕುಮಾರಸ್ವಾಮಿ ಆರೋಪ ನಿಜ ಆದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂಬ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಲಂಚ, ವರ್ಗಾವಣೆ ಅಂತಹ ಕೆಲಸಗಳನ್ನು ಸ್ಯಾಂಟ್ರೋ ರವಿ ಮಾಡಿದ್ದಾನೆ. ಇಂತಹ ವ್ಯಕ್ತಿ 150 ಕ್ಕೂ ಹೆಚ್ಚು ಪೋಲಿಸ್ ಆಫೀಸರ್ ಗಳ ಬಳಿ ದುಡ್ಡು ಕಿತ್ತಿದ್ದಾನೆ. ಸ್ಯಾಂಟ್ರೋ ರವಿ ಏನೆಲ್ಲಾ ಮಾಡಿದ್ದಾನೆ ಎಂಬುದು ಅವರಿಗೆ ಗೊತ್ತಿಲ್ವ. ಅವರಿಗೆ ಗೊತ್ತಿಲ್ಲದೇ ಅವರ ಆಫೀಸ್ ನಲ್ಲಿ ಓಡಾಡಿದ್ದಾನ? ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದರು.
ಇದನ್ನೂ ಓದಿ:ನನ್ನ ಧ್ವನಿ ಎಂದು ಹೇಳಲ್ಲ, ವೈಯಕ್ತಿಕವಾಗಿ ಮಾತನಾಡಿರಬಹುದು: ವೈರಲ್ ಆಡಿಯೋ ಬಗ್ಗೆ ಯೋಗೇಶ್ವರ್ ಪ್ರತಿಕ್ರಿಯೆ