ಕರ್ನಾಟಕ

karnataka

ETV Bharat / state

ಕಾಮಗಾರಿ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬೇಡಿ: ಅಧಿಕಾರಿಗಳಿಗೆ ಹೆಚ್​ಡಿಕೆ ತಾಕೀತು - He urged the authorities not to compromise on the quality of the work

ಪ್ರಗತಿಯಲ್ಲಿರುವ ಯೋಜನೆಗಳನ್ನು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದಂತೆ ಆದಷ್ಟು ಬೇಗ ಮುಗಿಸುವಂತೆ ಅಧಿಕಾರಿಗಳಿಗೆ ಮಾಜಿ ಸಿಎಂ ಕುಮಾರಸ್ವಾಮಿ ಸೂಚಿಸಿದರು.

not to compromise on the quality
ಕಾಮಗಾರಿ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬೇಡಿ: ಕುಮಾರ ಸ್ವಾಮಿ

By

Published : Feb 28, 2022, 9:41 PM IST

ರಾಮನಗರ: ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (KRDCL) ವತಿಯಿಂದ ಕೈಗೊಳ್ಳಲಾಗಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಡೆಸಿದರು.

ಎಲ್ಲಾ ಯೋಜನೆಗಳನ್ನು ಆದಷ್ಟು ಬೇಗ ಮುಗಿಸಬೇಕು ಎಂದು ಸೂಚನೆ ನೀಡಿದ ಅವರು, ಕಾಮಗಾರಿ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬೇಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಬೆಂಗಳೂರಿನ ನಿಗಮದ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಪ್ರಗತಿ ಪರಿಶೀಲನೆ ನಡೆಸಿದ ಯೋಜನೆಗಳ ಪ್ರಗತಿ ಕಾರ್ಯ ಕೈಗೊಳ್ಳುವಂತೆ ಹೇಳಿದರು.

ರಾಮನಗರ ಕ್ಷೇತ್ರದ ಭೈರಮಂಗಲ ಕ್ರಾಸ್- ಕಂಚುಗಾರನಹಳ್ಳಿ - ಹಾರೋಹಳ್ಳಿ - ತಟ್ಟೆಕೆರೆ, ಉರಗನದೊಡ್ಡಿ - ಜಿಗಣಿ ನಡುವಿನ 9.87 ಕಿ. ಮೀ. ಉದ್ದದ ದ್ವಿಪಥ ರಸ್ತೆ. ರಾಮನಗರ ತಾಲೂಕಿನ ಲಿಂಗೇಗೌಡನ ದೊಡ್ಡಿ ಬಳಿ ಅರ್ಕಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ, ಹಾರೋಹಳ್ಳಿಯಿಂದ ಮರಳವಾಡಿ, ಹುಣಸನಹಳ್ಳಿ, ಬನ್ನಿಮಕೊಡಲು, ಹಾಲನಾಥ, ಕೋಡಿಹಳ್ಳಿ, ಸಾತನೂರು, ಕಬ್ಬಾಳು, ಚನ್ನಪಟ್ಟಣ, ತಿಟ್ಟಮರನಹಳ್ಳಿ, ಬೇವೂರು ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 33 ಸೇರುವ ಸಂಪರ್ಕ ರಸ್ತೆ ಅಗಲೀಕರಣ ಬಗ್ಗೆ ಮಾಹಿತಿ ಪಡೆದರು.

ಚನ್ನಪಟ್ಟಣದಿಂದ ಬ್ರಾಹ್ಮಣಿಪುರ, ಕವನಪುರ, ಎಸ್ ಆರ್ ಎಸ್ ಬೆಟ್ಟ, ಅವ್ವೇರಹಳ್ಳಿ, ಕೈಲಾಂಚ, ನಾಗೋಹಳ್ಳಿ, ಹುಣಸನಹಳ್ಳಿ, ಉರಗನಹಳ್ಳಿ, ಬಿಡದಿ, ಗಾನಕಲ್ಲು ಮಾರ್ಗವಾಗಿ ನೆಲಮಂಗಲ ಸೇರುವ ರಸ್ತೆಯ ಅಲೀಕರಣ ಸೇರಿ ಬಿಡದಿಯಿಂದ ಹಾರೋಹಳ್ಳಿ, ಉರಗನ ದೊಡ್ಡಿ, ಆನೇಕಲ್, ಅತ್ತಿಬೆಲೆಯಿಂದ ರಾಷ್ಟ್ರೀಯ ಹೆದ್ದಾರಿ 4 ಅನ್ನು ಸೇರುವ ರಸ್ತೆಯ ಅಲೀಕರಣ ಹಾಗೂ ಕೆಂಗಲ್ ನಿಂದ ದಶವಾರ, ಮಾಕಳಿ ಮೂಲಕ ರಾಜ್ಯ ಹೆದ್ದಾರಿ 33 ಅನ್ನು ಸೇರುವ ರಸ್ತೆ ಅಗಲೀಕರಣ‌ ಬೇಗ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಹೆಚ್​ಡಿಕೆ ಆದೇಶಿಸಿದರು.

ಇದರ ಜೊತೆಗೆ ಚನ್ನಪಟ್ಟಣ ತಾಲೂಕಿನ ಚಿಕ್ಕಾಮಾಲೂರು- ಸೋಗಲ ಕೂಡುವ ರಸ್ತೆಯ ಬಳಿ ಕಣ್ವಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣವನ್ನ ಯೋಜನೆಗಳ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ನಿಗಮದ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ಕಾಲಮಿತಿಯಲ್ಲಿ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿದರು.

ಇದನ್ನೂ ಓದಿ:3ನೇ ಅಲೆಯಲ್ಲಿ ಕ್ಷೀಣಿಸುತ್ತಿದೆ ಸೋಂಕಿತರ ಸಂಖ್ಯೆ: 268 ಮಂದಿಗೆ ಸೋಂಕು, 14 ಮಂದಿ ಬಲಿ

For All Latest Updates

TAGGED:

ABOUT THE AUTHOR

...view details