ಕರ್ನಾಟಕ

karnataka

ETV Bharat / state

ಪೋಷಕರಿಂದ ಹಣ ಸಂಗ್ರಹ ಮಾಡುತ್ತಿರುವುದು ಸರ್ಕಾರದ ದಿವಾಳಿತನ ತೋರಿಸುತ್ತದೆ: ಹೆಚ್​ಡಿಕೆ - ಈಟಿವಿ ಭಾರತ ಕನ್ನಡ

ನನಗೆ ರಾಜ್ಯದ ಎಲ್ಲೆಡೆಯಿಂದ ಸ್ಫರ್ಧೆ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ನಾನು ಟೂರಿಂಗ್ ಟ್ಯಾಕಿಸ್ ಅಲ್ಲ ಅಂತ ಹೇಳಿದ್ದೇನೆ. ಈ ಬಾರಿ ರಾಮನಗರದಿಂದ ಮಾತ್ರ ಸ್ಪರ್ಧೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

Etv Bharath-d-kumaraswamy-talk-about-parents-donation-to-school
Etv Bharatಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

By

Published : Oct 22, 2022, 9:33 PM IST

Updated : Oct 22, 2022, 10:06 PM IST

ರಾಮನಗರ :ಪ್ರತಿನಿತ್ಯ ಚನ್ನಪಟ್ಟಣಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಸಿ.ಎಂ. ಇಬ್ರಾಹಿಂ ಜೊತೆ ಜೆಡಿಎಸ್​ ಅಧಿಕಾರಕ್ಕೆ ತರಲು ಹೊರಟಿದ್ದೇನೆ. ಸ್ವತಂತ್ರವಾದ ಪ್ರಾದೇಶಿಕ ಪಕ್ಷ ತರಲು ಪಣತೊಟ್ಟಿದ್ದೇವೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಜಿಲ್ಲೆ ಚನ್ನಪಟ್ಟಣದಲ್ಲಿ ಜೆಡಿಎಸ್ ಕಚೇರಿ ಉದ್ಘಾಟನೆ ಬಳಿಕ ಅವರು ಮಾತನಾಡುತ್ತಿದ್ದರು. ಜನರಿಗೆ ಸಣ್ಣಪುಟ್ಟ ಸಮಸ್ಯೆ ಆದಾಗ ವೈಯಕ್ತಿಕವಾಗಿ ರಕ್ಷಣೆ ಮಾಡುತ್ತೇವೆ. ರಾಜ್ಯದಲ್ಲಿ ಜನಪರ ಸರ್ಕಾರ ತರಲು ಕಾರ್ಯಕರ್ತರು ಸೂಚನೆ ಕೊಟ್ಟಿದ್ದಾರೆ. ನವೆಂಬರ್ 1ರಿಂದ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಆರಂಭವಾಗುತ್ತಿದೆ. ಈ ಕಾರ್ಯಕ್ರಮ ಮಾರ್ಚ್ 15ನೇ ತಾರೀಖಿನವರೆಗೂ ನಡೆಯುತ್ತದೆ ಎಂದು ಮಾಹಿತಿ ನೀಡಿದರು.

ಅಭಿವೃದ್ಧಿ ಕೆಲಸ ಮಾಡಿರುವ ಕಿರು ಹೊತ್ತಿಗೆಯನ್ನು ಪ್ರತಿ ಮನೆಗೆ ತಲುಪಿಸುತ್ತೇವೆ. ನಾನು ಕಲ್ಲು ಹಾಕಿಸಿಕೊಳ್ಳುವಂತಹ ಕೆಲಸ ಮಾಡಿಕೊಂಡಿಲ್ಲ. ಸಣ್ಣ ಸಣ್ಣ ಕೆಲಸಗಳಿಗೂ ಕಲ್ಲಿನ ಮೇಲೆ ನನ್ನ ಹೆಸರು ಹಾಕಿಸಿಕೊಳ್ಳುವವನಲ್ಲ. ಚನ್ನಪಟ್ಟಣ ಕ್ಷೇತ್ರವಷ್ಟೇ ಅಲ್ಲ, ರಾಜ್ಯದ ಜನರ ಹೃದಯದಲ್ಲಿ ಹೆಸರು ಇರಬೇಕು. ಅಂತಹ ಕೆಲಸ ಮಾಡುವ ಮನೋಭಾವನೆ ನನಗಿದೆ. ನನ್ನ ಕೆಲಸಗಳು ಯಾವುದೋ ಕಲ್ಲಿನ ಮೇಲೆ ಇರಬೇಕು ಅಂತ ಇಚ್ಛಿಸುವುದಿಲ್ಲ ಎಂದರು.

ಪೋಷಕರಿಂದ ಹಣ ಸಂಗ್ರಹ ಮಾಡುತ್ತರುವುದು ಸರ್ಕಾರದ ದಿವಾಳಿತನ ತೋರಿಸುತ್ತದೆ

ನಾನು ಟೂರಿಂಗ್ ಟಾಕೀಸ್ ಅಲ್ಲ :ನಾನು ಈ ಬಾರಿ ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ. ನನಗೆ ರಾಜ್ಯದ ಎಲ್ಲೆಡೆಯಿಂದ ಸ್ಫರ್ಧೆ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ನಾನು ಟೂರಿಂಗ್ ಟ್ಯಾಕಿಸ್ ಅಲ್ಲ ಅಂತ ಹೇಳಿದ್ದೇನೆ. ಈ ಬಾರಿ ರಾಮನಗರದಿಂದ ಮಾತ್ರ ಸ್ಪರ್ಧೆ ಮಾಡುತ್ತೇನೆ ಎಂದು ತಮ್ಮ ಕ್ಷೇತ್ರದ ಬಗ್ಗೆ ಹೇಳಿದರು.

ನಿಖಿಲ್​ಗೆ 50 ರಿಂದ 60ಕ್ಷೇತ್ರದ ಜವಾಬ್ದಾರಿ :ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಜವಾಬ್ದಾರಿ ವಿಚಾರವಾಗಿ ಮಾತನಾಡಿದ ಅವರು, ಚನ್ನಪಟ್ಟಣ ಒಂದೇ ಅಲ್ಲ, ಹಳೇ ಕರ್ನಾಟಕ ಭಾಗದಲ್ಲಿ ಸಂಘನೆ ಮಾಡಲಿದ್ದಾರೆ. ಸುಮಾರು 50 ರಿಂದ 60 ಕ್ಷೇತ್ರಗಳಲ್ಲಿ ವೈಯಕ್ತಿಕವಾದ ಜವಾಬ್ದಾರಿ ಕೊಟ್ಟಿದ್ದೇವೆ ಎಂದರು.

ಸರ್ಕಾರಿ ಶಾಲೆಯಲ್ಲಿ ಪೋಷಕರಿಂದ 100ರೂ ವಸೂಲಿ ವಿಚಾರವಾಗಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗರಂ ಆದರು. ತಕ್ಷಣವೇ ಸರ್ಕಾರ ಈ ನಿರ್ಧಾರವನ್ನು ಹಿಂದೆ ತೆಗೆದುಕೊಳ್ಳಬೇಕು. ಪೋಷಕರ ಬಳಿ ಹಣ ವಸೂಲಿ ಮಾಡೋದು ಕೆಟ್ಟ ನಿರ್ಧಾರ. ಸರ್ಕಾರಿ ಶಾಲೆಗಳಲ್ಲಿ ಸರಿಯಾಗಿ ಮೂಲಭೂತ ಸೌಕರ್ಯಗಳಿಲ್ಲ. ಆದರೆ ಪೋಷಕರಿಂದ ಚಂದಾ ವಸೂಲಿ ಮಾಡೋದು ಸರ್ಕಾರದ ದಿವಾಳಿತನ ತೋರುತ್ತದೆ ಎಂದು ಹೇಳಿದರು.

ಯಾರಾನ್ನಾದರೂ ನಿಲ್ಲಿಸಲಿ :ಕಾಂಗ್ರೆಸ್​ನಿಂದ ಜಿ ಟಿ ದೇವೇಗೌಡ ವಿರುದ್ಧ ಪ್ರಬಲ ಒಕ್ಕಲಿಗ ಅಭ್ಯರ್ಥಿ ವಿಚಾರವಾಗಿ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಹೆಚ್​ಡಿಕೆ, ಅವರು ಯಾರನ್ನಾದರೂ ನಿಲ್ಲಿಸಲಿ. ಮೊದಲು ಅವರು ಅಭ್ಯರ್ಥಿಯನ್ನು ಆಯ್ಕೆ ಮಾಡಲಿ. ಚುನಾವಣೆ ಸಂದರ್ಭದಲ್ಲಿ ನೋಡಿಕೊಳ್ಳೋಣ ಎಂದರು.

ಇದನ್ನೂ ಓದಿ :40 ಹಾಲಿ ಶಾಸಕರಿಗೆ ಗೆಲುವು ಕಷ್ಟ.. ಹೇಗಿದೆ ಸೋಲು-ಗೆಲುವಿನ ಲೆಕ್ಕಾಚಾರ?

Last Updated : Oct 22, 2022, 10:06 PM IST

ABOUT THE AUTHOR

...view details