ಕರ್ನಾಟಕ

karnataka

ETV Bharat / state

ಯಾರೋ ಒಬ್ಬ ಮಂತ್ರಿಯ ರಾಜೀನಾಮೆಗೆ ಆಗ್ರಹಿಸಿ ಧರಣಿ ಮಾಡ್ತಿದ್ದಾರೆ : ಹೆಚ್​ಡಿಕೆ - ಸದನದಲ್ಲಿ ಕಾಂಗ್ರೆಸ್ ನಾಯಕರು ಧರಣಿ ಕುರಿತು ಹೆಚ್​ಡಿಕೆ ವಾಗ್ದಾಳಿ

ನಾನು ಯಾರ ಪರವಾಗಿಯೂ ಇಲ್ಲ. ಯಾರ ವಿರೋಧವಾಗಿಯೂ ಇಲ್ಲ. ಈಶ್ವರಪ್ಪ ಅವರ ಮಂತ್ರಿ ಸ್ಥಾನವನ್ನು ಅವರು ಯಾಕೆ ರಾಜೀನಾಮೆ ಕೇಳ್ತಿದ್ದಾರೆ. ರಾಷ್ಟ್ರ ಧ್ವಜದ ವಿಷಯದಲ್ಲಿ ಯಾವ ಆಂಗಲ್​​ನಲ್ಲಿ ಹೇಳಿದ್ರು. ಈ ದೇಶದಲ್ಲಿ ನಡೆಯುತ್ತಿರುವಂತಹ ಘಟನೆಗಳನ್ನು ನೋಡ್ತಿದ್ದೇವೆ..

h-d-kumaraswamy
ಹೆಚ್​ಡಿಕೆ

By

Published : Feb 18, 2022, 6:19 PM IST

ರಾಮನಗರ :ಯಾರೋ ಒಬ್ಬ ಮಂತ್ರಿಯ ರಾಜೀನಾಮೆಗೆ ಆಗ್ರಹಿಸಿ ಧರಣಿ ಮಾಡ್ತಿದ್ದಾರೆ. ಸದನದ ಸಮಯ ವ್ಯರ್ಥ ಮಾಡಿಕೊಂಡು ಧರಣಿ ಮಾಡ್ತಿದ್ದಾರೆ. ಸದನದಲ್ಲಿ ಚರ್ಚೆಯಾಗಬೇಕಾದ ಹಲವಾರು ವಿಷಯಗಳಿವೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಸದನದಲ್ಲಿ ಕಾಂಗ್ರೆಸ್ ನಾಯಕರು ನಡೆಸ್ತಿರುವ ಧರಣಿ ಹಿನ್ನೆಲೆಯಲ್ಲಿ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಮಾತನಾಡುತ್ತಾ,‌ ಒಂದು ಕಡೆ ಆನೆ ಕಾಟ ಮತ್ತೊಂದು ಕಡೆ ವಿದ್ಯುತ್ ಕೊರತೆ ಇದೆ. ಮಂಡ್ಯದಲ್ಲಿ ಭತ್ತ ಖರೀದಿ ಮಾಡಿ ದುಡ್ಡು ಕೊಟ್ಟಿಲ್ವಂತೆ. ಇವೆಲ್ಲಾ ವಿಷಯಗಳನ್ನು ಎಲ್ಲಿ ಚರ್ಚೆ ಮಾಡೋದು.‌

ನಾನು ಯಾರ ಪರವಾಗಿಯೂ ಇಲ್ಲ. ಯಾರ ವಿರೋಧವಾಗಿಯೂ ಇಲ್ಲ. ಈಶ್ವರಪ್ಪ ಅವರ ಮಂತ್ರಿ ಸ್ಥಾನವನ್ನು ಅವರು ಯಾಕೆ ರಾಜೀನಾಮೆ ಕೇಳ್ತಿದ್ದಾರೆ. ರಾಷ್ಟ್ರ ಧ್ವಜದ ವಿಷಯದಲ್ಲಿ ಯಾವ ಆ್ಯಂಗಲ್‌ನಲ್ಲಿ ಹೇಳಿದ್ರು. ಈ ದೇಶದಲ್ಲಿ ನಡೀತಿರುವಂತ ಘಟನೆಗಳನ್ನು ನೋಡ್ತಿದ್ದೇವೆ.

ಮುಂದಿನ ದಿನಗಳಲ್ಲಿ ಈ ದೇಶವನ್ನು ಹಿಂದೂ ರಾಷ್ಟ್ರ ಮಾಡ್ತೀವಿ ಅಂತಾರೆ. ಈಗಿನ ಪರಿಸ್ಥಿತಿಯಲ್ಲಿ ಅವರು ಸ್ವಲ್ಪ ಸ್ಪೀಡ್ ಆಗಿ ಇದ್ದಾರೆ. ಬಿಜೆಪಿಯ ಅಂಗ ಪಕ್ಷಗಳಿಗೆ ಜನರು ಮನ್ನಣೆ ನೀಡ್ತಿದ್ದಾರೆ.

ಆದರೆ, ಎಲ್ಲಾ ಟೈಮ್ ಇದೇ ರೀತಿ ಇರೋದಿಲ್ಲ. ಜನ ತಿರುಗಿ ಬಿದ್ದಾಗ ಇದೆಲ್ಲಾ ನಡಿಯೋದಿಲ್ಲ. ಅವರು ಆ ಒಂದು ಗುಂಗಿನಲ್ಲಿ ಕೇಸರಿ ಧ್ವಜ ಹಾರಿಸ್ತೀನಿ ಅಂತಾ ಹೇಳ್ತಿದ್ದಾರೆ. ಮುಂದೊಂದು ದಿನ ಯಾವನೊಬ್ಬ ಹಾರಿಸ್ತಾನೆ ಅಂತಾ ಹೇಳಿದ್ದಾರೆ. ಅದೆಲ್ಲಾ ನಡಿಯೋದಿಲ್ಲ.

ಆ ರೀತಿ ಹೇಳಿರೋದನ್ನ ಈ ಕಾಂಗ್ರೆಸ್​ನವರು ಧರಣಿ ಮಾಡ್ತಿರೋದು ಸರಿ ಇಲ್ಲ. ಇವತ್ತು ಅಹೋರಾತ್ರಿ ಧರಣಿ ಮಾಡಿ ಕೂತಿದ್ದಾರೆ. ಪ್ರತಿದಿನ ಸದನ ನಡೆಸುವ ಖರ್ಚು ಜನರ ತೆರಿಗೆ ದುಡ್ಡಿನಿಂದ. ಸುಗಮವಾಗಿ ಸದನ ನಡೆಸಬೇಕು, ಇಲ್ಲವಾದಲ್ಲಿ ಸದನವನ್ನು ಮುಂದೂಡಬೇಕು. ರಾಷ್ಟ್ರ ಧ್ವಜವನ್ನು ಯಾರು ಕೂಡ ಮುಟ್ಟೋಕೆ ಆಗೋದಿಲ್ಲ.

ಈ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಲಕ್ಷಾಂತರ ಜನರ ಬಲಿದಾನವಾಗಿದೆ. ನಮ್ಮದು ಪ್ರಜಾಪ್ರಭುತ್ವದ ರಾಷ್ಟ್ರವಿದು. ಯಾರು ಕೂಡ ರಾಷ್ಟ್ರ ಧ್ವಜವನ್ನು ಟಚ್ ಕೂಡ ಮಾಡೋಕೆ ಆಗೋದಿಲ್ಲ. ಏನು ಬೇಕಾದ್ರೂ ಮಾಡ್ತಿವಿ ಅನ್ನೋ ಬಿಜೆಪಿಯ ಉದ್ಘಟತನದ ಬಗ್ಗೆ ಹೇಳಿರೋದು ನಾನು.

ಕಳೆದ 7-8 ವರ್ಷಗಳಿಂದ ಬಂದಂತಹ ಫಲಿತಾಂಶಗಳಿಂದ ಅವರಿಗೆ ದುರಂಹಕಾರ ನೆತ್ತಿಗೆ ಏರಿದೆ. ಬಿಜೆಪಿಯವರು ಮಾತಿನಲ್ಲಿ ಹೇಳಬಹುದು ಅಷ್ಟೇ.. ಅದು ಸುಲಭವಲ್ಲ. ಸ್ವಾತಂತ್ರ್ಯ ಬಂದ ನಂತರ ನಮ್ಮ ಹಿರಿಯರು ಸ್ಟ್ರಾಂಗ್ ಫೌಂಡೇಶನ್ ಹಾಕಿದ್ದಾರೆ. ಯಾವ ಶಕ್ತಿಗಳು ಬಂದ್ರೂ ಈ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಲುಗಾಡಿಸಲಾಗುವುದಿಲ್ಲ ಎಂದರು.

ಚನ್ನಪಟ್ಟಣದಲ್ಲಿ ಜೆಡಿಎಸ್ ಮುಖಂಡರ ಪಕ್ಷಾಂತರ ಹಿನ್ನೆಲೆಯಲ್ಲಿ ಸಿ ಪಿ ಯೋಗೇಶ್ವರ್ ಹೆಸರು ಬಳಸದೆ ಹೆಚ್‌ಡಿಕೆ ಟಾಂಗ್ ಕೊಟ್ಟಿದ್ದಾರೆ. ಸರ್ಕಾರ ಬೀಳಿಸಲು ದುಡ್ಡು ಕೊಟ್ಟು ಎಂಎಲ್​ಎಗಳನ್ನು ಕೊಂಡುಕೊಂಡಿದ್ರು.

ಇದೀಗ ಈ ಕ್ಷೇತ್ರದ ನಮ್ಮ ಜೆಡಿಎಸ್ ಮುಖಂಡರನ್ನು ದುಡ್ಡು ಕೊಟ್ಟು ಕೊಂಡುಕೊಳ್ಳೋಕೆ‌ ಮುಂದಾಗಿದ್ದಾರೆ. ಲೀಡರ್‌ಗಳನ್ನು ಖರೀದಿ ಮಾಡಬಹುದು. ಆದ್ರೆ, ಮತದಾರರನ್ನು ಖರೀದಿ ಮಾಡೋಕೆ ಆಗೋದಿಲ್ಲ. ಖರೀದಿಗೆ ಹೋಗುವ ನಾಯಕರ ಬಗ್ಗೆ ಜನ ತೀರ್ಮಾನ ತೆಗೆದುಕೊಳ್ತಾರೆ.

ನಮ್ಮ ಪಕ್ಷದ ಕೆಲ ಲೀಡರ್​ಗಳು ಸಾಲ ಮಾಡಿಕೊಂಡು ಇದ್ರಂತೆ. ಅವರಿಗೆ ಇದೀಗ ದುಡ್ಡು ಕೊಟ್ಟು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ತಿದ್ದಾರೆ. ನನ್ನ ಹತ್ತಿರ ಬರುವಂತವರು ಅತ್ಯಂತ ಸಂಕಷ್ಟಕ್ಕೆ ಒಳಗಾಗಿರುವ ಬಡವರಾಗಿದ್ದಾರೆ. ನಾನು ಶಾಸಕನಾಗಿ 3 ವರ್ಷದಲ್ಲಿ ಎಷ್ಟು ಕೆಲಸ ಮಾಡಿಸಿಕೊಂಡಿದ್ದಾರೆ ಪಟ್ಟಿ ಕೊಡ್ತೇನೆ. ಪಕ್ಷಾಂತರ ಕೇವಲ ಚನ್ನಪಟ್ಟಣ ಅಲ್ಲ. ಇಡೀ ರಾಜ್ಯದಲ್ಲೇ ನಡೀತಿದೆ. ನಾನು ಇದು ಯಾವುದಕ್ಕೂ ಎದೆ ಗುಂದುವುದಿಲ್ಲ ಎಂದರು.

ಚನ್ನಪಟ್ಟಣ ಏನು ಅಂತಾ ನನಗೆ ಗೊತ್ತಿದೆ. ಚನ್ನಪಟ್ಟಣ ಕ್ಷೇತ್ರದ ಜನತೆ ಬಗ್ಗೆ ನನಗೂ ಗೊತ್ತಿದೆ. ಈ ರಾಮನಗರ ಜಿಲ್ಲೆಗೆ ದೇವೆಗೌಡರ ಕುಟುಂಬದ ಬಾಂಧವ್ಯ‌ ಇಂದು ಇವತ್ತಿನದಲ್ಲ. ರಾಮನಗರ ಹಾಗೂ ಚನ್ನಪಟ್ಟಣ ಜನತೆ ನನ್ನನ್ನು ಹೃದಯದಲ್ಲಿ ಇಟ್ಟುಕೊಂಡಿದ್ದಾರೆ.

ಬಿಜೆಪಿಯ ನಳೀನ್ ಕುಮಾರ್ ಕಟೀಲ್ ಬದಲಾಗಿ ಅಮಿತ್ ಶಾ, ಜೆಪಿ ನಡ್ಡಾ ಬಂದು ನಮ್ಮ ಪಕ್ಷದ ಲೀಡರ್‌ಗಳನ್ನು ಕಾರ್ಯಕ್ರಮ ಮಾಡಿ ಸೇರಿಸಿಕೊಳ್ಳಲಿ. ಕಾರ್ಯಕರ್ತರು ಬಿಗಿಯಾಗಿದ್ದಾರೆ. ಮತದಾರರು ನನ್ನ ಜೊತೆ ಶಕ್ತಿಯುತವಾಗಿ ಇದ್ದಾರೆ. ಅವರೇ ಉತ್ತರ ಕೊಡುತ್ತಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪರೋಕ್ಷವಾಗಿ ಸಿಪಿವೈ ವಿರುದ್ಧ ವಾಗ್ಧಾಳಿ ನಡೆಸಿದರು.

ಇದಲ್ಲದೆ ಇನ್ನು 1 ವರ್ಷ ಸುಮ್ಮನಿರಿ. ನನ್ನನ್ನ ಇಳಿಸೋಕೆ ಆಗಲ್ಲ. ಮತ್ತೆ ಅಧಿಕಾರಕ್ಕೆ ಜೆಡಿಎಸ್ ಪಕ್ಷ ಬರಲಿದೆ. ಅಧಿಕಾರ ಇದ್ದರೆ ಅಭಿವೃದ್ಧಿ ಮಾಡಬಹುದು. ಅದಕ್ಕಾಗಿ ನಾವು ಯೋಜನೆ ರೂಪಿಸುತ್ತಿದ್ದೇವೆ. ಸುಮ್ಮನೇ ಕುಳಿತಿಲ್ಲ. ಈಗ ಕಳೆ ತೆಗೆಯಲು ಕರೆಸಿಕೊಳ್ತಿದ್ದಾರೆ. ಮುಂದೆ ನೋಡೋಣ ಎಂದು ಇದೇ ವೇಳೆ ಹೆಚ್​ಡಿಕೆ ತಿಳಿಸಿದ್ದಾರೆ.

ಓದಿ:ಗುತ್ತಿಗೆ ಆಧಾರದ ಮೇಲೆ ನೇಮಕಾತಿ : ಅರ್ಜಿ ಸಲ್ಲಿಸಲು ಕಿ.ಮೀ.ಗಟ್ಟಲೇ ಸಾಲಾಗಿ ನಿಂತ ಉದ್ಯೋಗಾಕಾಂಕ್ಷಿಗಳು

For All Latest Updates

TAGGED:

ABOUT THE AUTHOR

...view details