ಕರ್ನಾಟಕ

karnataka

ETV Bharat / state

ಕೆಲವು ಹಿಡನ್ ಅಜೆಂಡಾಗಳು ಕೆಲಸ ಮಾಡ್ತಿವೆ: ಹೆಚ್​ಡಿಕೆ ಗಂಭೀರ ಆರೋಪ - ಕೇಸರಿ ಶಾಲು-ಹಿಜಾಬ್ ಬಗ್ಗೆ ಹೆಚ್​ಡಿಕೆ ಹೇಳಿಕೆ

ಯಾರೊಬ್ಬರು ಇಂತಹ ಪ್ರಕರಣಗಳಿಗೆ ಸಹಕಾರ ನೀಡಬಾರದು. ನಮ್ಮ‌ ದೇಶ ಸರ್ವಜನಾಂಗದ ಶಾಂತಿಯ ತೋಟ. ಕಳೆದ 15 ದಿನಗಳಿಂದ ಈ ಘಟನೆ ಆರಂಭವಾಗಿದೆ. ಈಗಾಗಲೇ ಕಲ್ಲು ತೂರಾಟ ಕೂಡ ಆರಂಭ ಮಾಡ್ತಿದ್ದಾರೆ ಎಂದು ಮಾಜಿ ಸಿ ಎಂ ಹೆಚ್. ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

h-d-kumaraswamy
ಹೆಚ್. ಡಿ ಕುಮಾರಸ್ವಾಮಿ

By

Published : Feb 8, 2022, 7:29 PM IST

ರಾಮನಗರ: ಕೆಲವು ಹಿಡನ್ ಅಜೆಂಡಾಗಳು ಕೆಲಸ ಮಾಡ್ತಿವೆ. ಕೆಲವು ಸಂಘ -ಸಂಸ್ಥೆಗಳು ಅಶಾಂತಿ ಹುಟ್ಟುಹಾಕುವ ಕೆಲಸ ಮಾಡ್ತಿವೆ. ಕರಾವಳಿ ಪ್ರದೇಶಗಳಲ್ಲಿ‌ ಇಂತಹ ಪ್ರಕರಣಗಳು ಹೆಚ್ಚಾಗ್ತಿವೆ. ಈಗಾಗಲೇ ರಾಜ್ಯದ 12 ಕ್ಕೂ‌ ಹೆಚ್ಚು ಜಿಲ್ಲೆಗಳಿಗೆ ಹಿಜಾಬ್ ಪ್ರಕರಣ ಹಬ್ಬಿದೆ. ಇದನ್ನು ಪ್ರಾರಂಭಿಕ ಹಂತದಲ್ಲೇ ಸರ್ಕಾರ ಮೊಟಕುಗೊಳಿಸಬೇಕು ಎಂದು ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ರಾಮನಗರದ ಮಿನಿವಿಧಾನಸೌಧದಲ್ಲಿ ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಅವರು ಮಾತನಾಡುತ್ತಾ, ಸರ್ಕಾರಕ್ಕೂ ಸಹ ಅಭಿವೃದ್ಧಿ ಪೂರಕ ಕೆಲಸಗಳನ್ನು ಜನರ ಮುಂದಿಡಲು ಸಾಧ್ಯವಿಲ್ಲ. ಈಗಾಗಲೇ ದೇಶದಲ್ಲಿ ಅನೇಕ ಸಮಸ್ಯೆಗಳು ಇವೆ. ಜನರ ಭಾವನೆಗಳನ್ನು ಬೇರೆಡೆ ಡೈವರ್ಟ್ ಮಾಡಲು ಈ ರೀತಿ ವ್ಯವಸ್ಥೆ ನಡೀತಿದೆ. ಜನರು ಕೂಡ ಈ ಬಗ್ಗೆ ಗಮನಹರಿಸುತ್ತಿದ್ದಾರೆ ಎಂದರು.

ಯಾರೊಬ್ಬರು ಇಂತಹ ಪ್ರಕರಣಗಳಿಗೆ ಸಹಕಾರ ನೀಡಬಾರದು. ನಮ್ಮ‌ ದೇಶ ಸರ್ವಜನಾಂಗದ ಶಾಂತಿಯ ತೋಟ. ಕಳೆದ 15 ದಿನಗಳಿಂದ ಈ ಘಟನೆ ಆರಂಭವಾಗಿದೆ. ಈಗಾಗಲೇ ಕಲ್ಲು ತೂರಾಟ ಕೂಡ ಆರಂಭ ಮಾಡ್ತಿದ್ದಾರೆ. ಮಕ್ಕಳ ಭವಿಷ್ಯದ ಮೇಲೆ ಇಂತಹ ಘಟನೆಗಳು ಪ್ರಭಾವ ಬೀರ್ತಿವೆ.

ಕಳೆದ 2 ವರ್ಷಗಳಿಂದ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ಸಿಕ್ತಿಲ್ಲ. ಮುಂದಿನ ದಿನಗಳಲ್ಲಿ ಮಕ್ಕಳು ಪರೀಕ್ಷೆ ಎದುರಿಸಬೇಕಾಗುತ್ತದೆ. ಕೆಲವು ಅಮಾಯಕರನ್ನು ಬಳಸಿಕೊಂಡು ಈ ರೀತಿ ವಾತಾವರಣ ನಿರ್ಮಾಣ ಮಾಡ್ತಿದ್ದಾರೆ. ಇಂತಹ ಸಂಘಟನೆಗಳಿಗೆ ಯಾರೂ ಕೂಡ ಪ್ರೋತ್ಸಾಹ ನೀಡಬಾರದು ಎಂದು ಹೇಳಿದರು.

ರಾಜ್ಯದಲ್ಲಿ ಈಗಾಗಲೇ ಹಲವಾರು ಸಮಸ್ಯೆಗಳಿವೆ. ಸರ್ಕಾರ ಆದಷ್ಟು ಬೇಗ ಸಮಸ್ಯೆ ನಿವಾರಿಸಬೇಕು. ಇದಲ್ಲದೇ ಹೈಕೋರ್ಟ್​ನಲ್ಲಿ ಈ ಬಗ್ಗೆ ತೀರ್ಪು‌ ಇದೆ. ಕಾದು ನೋಡೊಣ ಏನು ತೀರ್ಪು ಬರುತ್ತೆ ಎಂದರು.

ಓದಿ:ಹಿಜಾಬ್ ವಿವಾದ: ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಹೈಕೋರ್ಟ್ ಸೂಚನೆ

For All Latest Updates

ABOUT THE AUTHOR

...view details