ರಾಮನಗರ :ಪರಿಜ್ಞಾನವಿಲ್ಲದ ವ್ಯಕ್ತಿಯ ಬಗ್ಗೆ ನಾನು ಮಾತನಾಡುವುದಿಲ್ಲವೆಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರವಾಸೋದ್ಯಮ ಇಲಾಖೆ ಸಚಿವ ಸಿ ಪಿ ಯೋಗೇಶ್ವರ್ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ರಾಮನಗರದ ಡಿಹೆಚ್ಒ ಕಚೇರಿ ಬಳಿ ಕನ್ನಡ ಕೂಟ ನ್ಯೂಯಾರ್ಕ್ ಮತ್ತು ಅಮ್ಮಾ ಫೌಂಡೇಶನ್ ಸಹಯೋಗದೊಂದಿಗೆ ಸುಮಾರು 43 ಲಕ್ಷ ರೂ.ವೆಚ್ಚದ ಅಗತ್ಯ ವೈದ್ಯಕೀಯ ಉಪಕರಣ ವಿತರಿಸಿದ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಆ ವ್ಯಕ್ತಿಗೆ ಏನು ಮಾತನಾಡಬೇಕು ಎನ್ನುವ ಪರಿಜ್ಞಾನ ಇಲ್ಲ. ಅಂತವರ ಬಗ್ಗೆ ನಾನೇನು ಮಾತನಾಡಲಿ?. ನಾನು ಮಂಡ್ಯ ಮೈಶುಗರ್ ವಿಚಾರವಾಗಿ ಸಿಎಂ ಭೇಟಿ ಮಾಡಿದ್ದೆ. ಖಾಸಗಿಯವರಿಗೆ ಕೊಡ ಬೇಡಿ ಎಂದು ಮನವಿ ಮಾಡಲು ಹೋಗಿದ್ದೆ. ನಾನೇನು ನನ್ನ ಸ್ವಂತ ಕೆಲಸಕ್ಕೆ ಹೋಗಿದ್ನಾ? ಎಂದು ಯೋಗೇಶ್ವರ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.