ರಾಮನಗರ: ಮನೆಗೆ ಬೆಂಕಿ ಬಿದ್ದಾಗ ಅಡುಗೆ ಮಾಡಿಕೊಳ್ಳುತ್ತಾರೆ ಎಂದು ಸಚಿವ ಡಾ.ಅಶ್ವತ್ಥ್ನಾರಾಯಣ್ ಹೇಳಿಕೆ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಬಿಡದಿಯ ತಮ್ಮ ತೋಟದಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಚಿವರಾದವರು ತಲೆಯಲ್ಲಿ ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕು. ನಾಲಿಗೆ ಹೊರಳಿದ ಹಾಗೆಲ್ಲ ಮಾತನಾಡುವುದು ಸರಿಯಲ್ಲ ಎಂದರು. ಡಿ.ಕೆ.ಸಹೋದರರ ಜತೆ ಆಡಿದ ಆಟವನ್ನು ನನ್ನ ಹತ್ತಿರ ಆಡಿದರೆ ನಡೆಯಲ್ಲ. ಕುಮಾರಸ್ವಾಮಿ ಹತ್ತಿರ ಇದೆಲ್ಲ ಸಾಗುವುದಿಲ್ಲ. ದುಡ್ಡಿನ ಮದದಿಂದ ಅಶ್ವತ್ಥ್ ನಾರಾಯಣ್ ಹೀಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅಮಿತ್ ಶಾ ಭೇಟಿ ಬಗ್ಗೆ ಲೇವಡಿ:ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜ್ಯ ಭೇಟಿ ಬಗ್ಗೆ ಕುಟುಕಿದ ಅವರು, ಇನ್ನೊಂದಷ್ಟು ಹೆಣಗಳನ್ನು ಬೀಳಿಸಲು ಅವರು ರಾಜ್ಯಕ್ಕೆ ಬರುತ್ತಿರಬೇಕು. ಗುಜರಾತ್ನಲ್ಲಿನ ಹತ್ಯೆಗಳನ್ನೇ ಇಲ್ಲಿ ಮುಂದುವರೆಸಲು ಬರುತ್ತಿರಬಹುದು. ಚುನಾವಣೆ ಸಮಯದಲ್ಲಿ ನರಹತ್ಯೆ ನಡೆಸಿ, ರಾಜಕೀಯ ಮಾಡುವುದೇ ಬಿಜೆಪಿಯ ಹುಟ್ಟುಗುಣ ಎಂದರು.