ಕರ್ನಾಟಕ

karnataka

ETV Bharat / state

ಕುಮಾರಸ್ವಾಮಿ ಹೃದಯ, ದಯವೇ ಧರ್ಮದ ಮೂಲವಯ್ಯ.. ಸಿ ಎಂ ಇಬ್ರಾಹಿಂ - ಸಾಬ್ರು ಹೇಳಿದ ಮಾತು ಯಾವತ್ತು ಸುಳ್ಳಾಗೋದಿಲ್ಲ

2022 ರ ಡಿಸೆಂಬರ್​ಗೆ ಚುನಾವಣೆ ಬರುತ್ತೆ- 2023 ಕ್ಕೆ ಕುಮಾರಸ್ವಾಮಿ ಸಿಎಂ ಆಗ್ತಾರೆ- ಸಿ ಎಂ ಇಬ್ರಾಹಿಂ ಭವಿಷ್ಯ

H D Kumaraswamy is the next Chief Minister said C  M  Ibrahim
ಸಿ ಎಂ ಇಬ್ರಾಹಿಂ

By

Published : Jul 20, 2022, 6:21 PM IST

ರಾಮನಗರ :1994 ರಲ್ಲಿ ದೇವೇಗೌಡರನ್ನು ರಾಮನಗರದಲ್ಲಿ ನಿಲ್ಲಿಸಿ ಗೆಲ್ಲಿಸುತ್ತಾರಾ ಎಂದು ಪ್ರಶ್ನೆ ಮಾಡಿದ್ದರು. ಆದರೆ ಅವರು ಗೆದ್ದು ಕೆಂಪುಕೋಟೆ ಮೇಲೆ ಬಾವುಟ ಹಾರಿಸಿದರು. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರ‌ ಹಿಡಿಯೋದು ಪಕ್ಕಾ. ಕುಮಾರಸ್ವಾಮಿ ಸಿಎಂ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು‌ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಭವಿಷ್ಯ ನುಡಿದಿದ್ದಾರೆ.

ಈಗ ದೇವೇಗೌಡರಿಗೆ 90 ವರ್ಷ ಆದರೂ ಅವರಿಗೆ ರಾಜ್ಯದ ಬಗ್ಗೆ ಚಿಂತೆ ಇದೆ. ಆದರೆ, ಕಾಂಗ್ರೆಸ್‌ನವರಿಗೆ ಸೋನಿಯಾಗಾಂಧಿ ಚಿಂತೆ, ಬಿಜೆಪಿ ಅವರಿಗೆ ಮೋದಿ ಚಿಂತೆ. ಜೆಡಿಎಸ್​ನವರಿಗೆ ರೈತರ ಹಾಗೂ ಕನ್ನಡ ನಾಡಿನ ಜನತೆಯ ಚಿಂತೆ. ಕುಮಾರಸ್ವಾಮಿ ಅವರ ಹೃದಯ ದಯವೇ ಧರ್ಮದ ಮೂಲವಯ್ಯ, ಧಯವಿಲ್ಲದ ಧರ್ಮ ಬೇರಾವುದಯ್ಯ ಎಂದು ಬಸವಣ್ಣನವರ ವಚನಗಳ ಮೂಲಕ ಇಬ್ರಾಹಿಂ ಹೇಳಿದರು.

ಸಾಬ್ರು ಹೇಳಿದ ಮಾತು ಯಾವತ್ತು ಸುಳ್ಳಾಗೋದಿಲ್ಲ

2022 ರ ಡಿಸೆಂಬರ್​ಗೆ ಚುನಾವಣೆ ಬರುತ್ತೆ, 2023 ಕ್ಕೆ ಕುಮಾರಸ್ವಾಮಿ ಸಿಎಂ ಆಗ್ತಾರೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ. ನಾನೇ ಡಿಕ್ಲೇರ್ ಮಾಡಿ ಹೋಗುತ್ತಿದ್ದೇನೆ. ಹಿಂದಿನ ಚಾಮುಂಡೇಶ್ವರಿ ಕರಗದಲ್ಲಿ ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮುಂದಿನ ಚಾಮುಂಡೇಶ್ವರಿ ಕರಗಕ್ಕೆ ಸಿಎಂ ಆಗಿ ಬಂದು ಉತ್ಸವ ಮಾಡುತ್ತಾರೆ. ಸಾಬ್ರು ಹೇಳಿದ ಮಾತು ಯಾವತ್ತು ಸುಳ್ಳಾಗೋದಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹಾಡಿ ಹೊಗಳಿದರು.

ಇದನ್ನೂ ಓದಿ :ಕೇಂದ್ರ ಸರ್ಕಾರದಿಂದ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ಹೆಚ್ಚಳ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ABOUT THE AUTHOR

...view details