ಕರ್ನಾಟಕ

karnataka

ETV Bharat / state

'ಜನತಾ ಜಲಧಾರೆ ಗಂಗಾ ರಥಯಾತ್ರೆ' : ಪೂರ್ವಭಾವಿ ಸರಣಿ ಸಭೆ ನಡೆಸಿದ ಹೆಚ್​ಡಿಕೆ - ಜನತಾ ಜಲಧಾರೆ ಗಂಗಾ ರಥಯಾತ್ರೆ ನಡೆಸಿದ ಹೆಚ್​ಡಿಕೆ

ಜಲಧಾರೆ ಕಾರ್ಯಕ್ರಮವನ್ನು ಅತ್ಯಂತ ಭಕ್ತಿ ಶ್ರದ್ಧೆಗಳಿಂದ ಮಾಡಬೇಕು. ಜಲ ಸಂಗ್ರಹ, ಕಲಶ ಪೂಜೆ, ಮೆರವಣಿಗೆ, ಕಲಾ ತಂಡಗಳು, ಮಂಗಳ ವಾದ್ಯ ಇತ್ಯಾದಿಗಳ ರೂಪುರೇಷೆ ಹೇಗಿರಬೇಕು ಎನ್ನುವುದನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮನವರಿಕೆ ಮಾಡಿಕೊಟ್ಟರು.

h-d-kumaraswamy-conduct-janatha-jaladhare-ganga-rathayathre-meeting
ಜನತಾ ಜಲಧಾರೆ ಗಂಗಾ ರಥಯಾತ್ರೆ ನಡೆಸಿದ ಹೆಚ್​ಡಿಕೆ

By

Published : Mar 16, 2022, 7:20 PM IST

ರಾಮನಗರ: ರಾಜ್ಯದ ನೀರಾವರಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಜೆಡಿಎಸ್ ಕೈಗೊಳ್ಳಲಿರುವ 'ಜನತಾ ಜಲಧಾರೆ ಗಂಗಾ ರಥಯಾತ್ರೆ'ಯ ಪೂರ್ವಭಾವಿ ಸರಣಿ ಸಭೆಗಳನ್ನು ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ ಕುಮಾರಸ್ವಾಮಿ ಅವರು ಇಂದು ಕೂಡ ರಾಮನಗರ, ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಗಳ ಮುಖಂಡರೊಂದಿಗೆ ಚರ್ಚೆ ನಡೆಸಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಆಯಾ ಜಿಲ್ಲೆಗಳ ಪಕ್ಷದ ಅಧ್ಯಕ್ಷರು, ಶಾಸಕರು ಹಾಗೂ ಹಿರಿಯ ಮುಖಂಡರ ಜತೆ ಮಾತುಕತೆ ನಡೆಸಿದ ಮಾಜಿ ಮುಖ್ಯಮಂತ್ರಿಗಳು, ಕೆಲ ಪ್ರಮುಖ ಸಲಹೆ ಸೂಚನೆಗಳನ್ನು ನೀಡಿದರು.

ಕಾವೇರಿ ಜಲಾನಯನ ಪ್ರದೇಶಕ್ಕೆ ಸೇರಿರುವ ಈ ನಾಲ್ಕು ಜಿಲ್ಲೆಗಳಲ್ಲಿ ಜಲಧಾರೆ ಕಾರ್ಯಕ್ರಮವನ್ನು ಅತ್ಯಂತ ಉತ್ತಮ ರೀತಿಯಲ್ಲಿ ಕೈಗೊಳ್ಳಬೇಕು ಎಂದು ಅವರು ಮುಖಂಡರಿಗೆ ತಾಕೀತು ಮಾಡಿದರು.

ತಲಕಾವೇರಿ, ಹಾರಂಗಿ, ಚುಂಚನ ಕಟ್ಟೆ, ಲಕ್ಷ್ಮಣ ತೀರ್ಥ, ಕೃಷ್ಣರಾಜ ಸಾಗರ ಜಲಾಶಯ, ಶ್ರೀರಂಗಪಟ್ಟಣ ಸಂಗಮ, ಕೆ. ಆರ್ ಪೇಟೆಯ ಮಂದಗೆರೆ, ಶಿವನಸಮುದ್ರ, ಗಗನಚುಕ್ಕಿ, ಕಬಿನಿ ಜಲಾಶಯ, ನುಗು ಜಲಾಶಯ, ಗುಂಡಾಲ್ ಜಲಾಶಯ, ತಲಕಾಡು, ಕಪಿಲಾ ನದಿ ಮುಂತಾದ ಕಡೆಗಳಲ್ಲಿ ಪವಿತ್ರ ಜಲ ಸಂಗ್ರಹ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಮಾಹಿತಿ ನೀಡಿದರು.

ಜಲಧಾರೆ ಕಾರ್ಯಕ್ರಮವನ್ನು ಅತ್ಯಂತ ಭಕ್ತಿ ಶ್ರದ್ಧೆಗಳಿಂದ ಮಾಡಬೇಕು. ಜಲ ಸಂಗ್ರಹ, ಕಲಶ ಪೂಜೆ, ಮೆರವಣಿಗೆ, ಕಲಾ ತಂಡಗಳು, ಮಂಗಳ ವಾದ್ಯ ಇತ್ಯಾದಿಗಳ ರೂಪುರೇಷೆ ಹೇಗಿರಬೇಕು ಎನ್ನುವುದನ್ನು ಮುಖಂಡರಿಗೆ ಅವರು ಮನವರಿಕೆ ಮಾಡಿಕೊಟ್ಟರು.

ಮನೆ ಮನೆಗೂ ಮಾಹಿತಿ ಮುಟ್ಟುವಂತೆ ಪ್ರಚಾರ ಮಾಡಬೇಕು..ಕಾವೇರಿ, ಕಪಿಲಾ, ಕಬಿನಿ ಸೇರಿದಂತೆ ಈ ಭಾಗದ ಪವಿತ್ರ ನದಿ ಜಲವನ್ನು ರಾಜ್ಯದ ಅಭಿವೃದ್ಧಿಗೆ ಹೇಗೆ ಬಳಸಿಕೊಳ್ಳಬೇಕು. ಅದಕ್ಕೆ ನಮ್ಮ ಮುಂದಿರುವ ಸವಾಲುಗಳು ಏನು? ಅವುಗಳನ್ನು ಬಗೆಹರಿಸಿಕೊಂಡು ಎಲ್ಲ ನೀರಾವರಿ ಯೋಜನೆಗಳನ್ನು ಕಾರ್ಯಗತ ಮಾಡುವುದು ಹೇಗೆ? ಎಂಬ ಹಲವಾರು ಅಂಶಗಳನ್ನು ಜನರ ಮನಸ್ಸಿಗೆ ನಾಟುವಂತೆ ತಿಳಿಸಬೇಕು. ಮನೆ ಮನೆಗೂ ಮಾಹಿತಿ ಮುಟ್ಟುವಂತೆ ಪ್ರಚಾರ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಮುಖಂಡರಿಗೆ ಸೂಚನೆ ನೀಡಿದರು.

ಕಾವೇರಿಕೊಳ್ಳದಲ್ಲಿ ಹೆಚ್. ಡಿ ದೇವೇಗೌಡರು 1962ರಿಂದ ನಡೆಸಿದ ಐತಿಹಾಸಿಕ ಹೋರಾಟ, ಕಾವೇರಿ ನೀರಿನ ಸದ್ಬಳಕೆ ಬಗ್ಗೆ ಅವರು ನಡೆಸಿದ ಸಂಘರ್ಷ, ಹಾರಂಗಿ, ಕಬಿನಿ, ಹೇಮಾವತಿ ಜಲಾಶಯಗಳ ಸಾಕಾರ, ತಾವು ರಾಜ್ಯದ ನೀರಾವರಿ ಸಚಿವರಾಗಿದ್ದ ವೇಳೆಯಲ್ಲೇ ಮೇಕೆದಾಟು ಯೋಜನೆ ಬಗ್ಗೆ ಕನಸು ಕಂಡು ಆ ಬಗ್ಗೆ ಹೆಜ್ಜೆ ಇರಿಸಿದ್ದು. ಇವೆಲ್ಲ ಅಂಶಗಳನ್ನು ಜನರಿಗೆ ಮನ ಮುಟ್ಟುವಂತೆ ಹೇಳಬೇಕು ಎಂದು ಕುಮಾರಸ್ವಾಮಿ ಅವರು ಖಡಕ್ಕಾಗಿ ಹೇಳಿದರು.

ಓದಿ:ರಾಮನಗರ: ಸಂಕಿಘಟ್ಟ ಗ್ರಾಮ ಪಂಚಾಯಿತಿ ಸರ್ಕಾರಿ ಪಬ್ಲಿಶ್‌ ಶಾಲೆ ಉದ್ಘಾಟನೆ

For All Latest Updates

TAGGED:

ABOUT THE AUTHOR

...view details