ಕರ್ನಾಟಕ

karnataka

ETV Bharat / state

ಬರೀ ತೋರಿಕೆಗೆ ಜಿ ಟಿ ದೇವೇಗೌಡ್ರನ್ನ ಕೋರ್‌ ಕಮಿಟಿಗೆ ಸೇರಿಸಬೇಕಾ.. ಹೆಚ್ ಡಿ ಕುಮಾರಸ್ವಾಮಿ - ಜೆಡಿಎಸ್​​​ ಕೋರ್​ ಕಮೀಟಿಯಿಂದ ಜಿಟಿ ದೇವೇಗೌಡ ಹೊರಗೆ

ಹೊರಗಿನಿಂದ ಪಕ್ಷಕ್ಕೆ ಬರ್ತಾರೆ, ಹೋಗ್ತಾರೆ. ಇದು ಬರೀ ಜೆಡಿಎಸ್​​​​ ಪಕ್ಷದಲ್ಲಿ ಆಗುವ ಬದಲಾವಣೆ ಅಲ್ಲ. ಎಲ್ಲಾ ಪಕ್ಷಗಳಲ್ಲೂ ನಡೆಯುವ ಪ್ರಕ್ರಿಯೆ. ಇವತ್ತಿನ ರಾಜಕಾರಣದಲ್ಲಿ ಪಕ್ಷ ನಿಷ್ಠೆಯ ಬದಲು ತಮ್ಮ ವೈಯಕ್ತಿಕ ಬೆಳವಣಿಗೆಯ ಕಡೆ ಗಮನಹರಿಸುವುದು ಹೆಚ್ಚಾಗಿದೆ. ಸಾಮಾನ್ಯ ಕಾರ್ಯಕರ್ತರಿಗೆ ಇರುವಷ್ಟು ನಿಷ್ಠೆ ಮಹಾನಾಯಕರು ಅಂತಾ ಕರೆಸಿಕೊಳ್ಳುವವರಿಗೆ ಇರುವುದಿಲ್ಲ..

gt-devegowda-is-now-concerned-about-the-his-constituency
ಹೆಚ್ ಡಿ ಕುಮಾರಸ್ವಾಮಿ

By

Published : Jan 19, 2021, 5:40 PM IST

ರಾಮನಗರ :ಪಾಪ ಅವರಿಗೆ ಈಗ ಕ್ಷೇತ್ರದ ಬಗ್ಗೆ ಕಾಳಜಿ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಜಿ ಟಿ ದೇವೇಗೌಡರಿಗೆ ಟಾಂಗ್​​ ನೀಡಿದರು.

ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ದಿ ಕಡೆ ಗಮನ ಹರಿಸಬೇಕಿದೆ. ಪಕ್ಷ ಸಂಘಟನೆಗಾಗಿ ಕಾರ್ಯನಿರ್ವಹಿಸಲು ಕಾಲಾವಕಾಶ ಇಲ್ಲ ಅಂತಾ ಕಳೆದ ವಾರ ಜಿ ಟಿ ದೇವೇಗೌಡರೇ ಹೇಳಿದ್ದಾರೆ. ಹೀಗಿರುವಾಗ ಬರೀ ತೋರಿಕೆಗಾಗಿ ಅವರನ್ನ ಕೋರ್​ ಕಮಿಟಿಗೆ ಸೇರಿಸಿಕೊಳ್ಳಲು ಆಗುತ್ತಾ.. ಪಾಪ ಅವರಿಗೆ ಈಗ ಕ್ಷೇತ್ರದ ಬಗ್ಗೆ ಕಾಳಜಿ ಬಂದಿದೆ, ಹಾಗಾಗಿ ಜನರಿಗೆ ಗೊಂದಲ ಉಂಟಾಗುವಂತ ಹೇಳಿಕೆ ಕೊಡುವುದು ಬೇಡ ಎಂದರು.

ಪಾಪ ಜಿ. ಟಿ. ದೇವೇಗೌಡರಿಗೆ ಕ್ಷೇತ್ರದ ಬಗ್ಗೆ ಈಗ ಕಾಳಜಿ ಬಂದಿದೆ

ಯಾರು ಪಕ್ಷದ ಜಾವಾಬ್ದಾರಿ ತೆಗೆದುಕೊಳ್ಳೋಕೆ ತಯಾರಾಗಿದ್ದಾರೋ, ಯಾರು ಪಕ್ಷದ ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಾರೋ, ಅಂತಹ ನಿಷ್ಠಾವಂತ ಕಾರ್ಯಕರ್ತರಿಗೆ ಪಕ್ಷದ ಕೋರ್​ ಕಮಿಟಿಯಲ್ಲಿ ಸ್ಥಾನ ಕೊಡಲಾಗುತ್ತಿದೆ. ಇಲ್ಲಿ ವಯಸ್ಸಿನ ವಿಚಾರ ಬರಲ್ಲ, ಹೊರಟ್ಟಿಯವರಿಗೆ ವಯಸ್ಸಾಗಿಲ್ಲವೇ? ಅವರಿಗೆ ಕಮಿಟಿಯಲ್ಲಿ ಸ್ಥಾನ ಕೊಟ್ಟಿದ್ದೇವೆ ಎಂದು ಪಕ್ಷದ ಕೋರ್​ ಕಮಿಟಿಯಿಂದ ಜಿಟಿಡಿ ಹೊರಗಿಟ್ಟ ವಿಚಾರವಾಗಿ ಸ್ಪಷ್ಟಪಡಿಸಿದರು.

ಓದಿ-ಸಾಕ್ಷರತಾ ರಾಜ್ಯ ಕೇರಳದಲ್ಲಿ ವಿದ್ಯಾವಂತರಿಂದಲೇ ಹೆಚ್ಚಿನ ಅಪರಾಧ ಕೃತ್ಯ..

ಪಕ್ಷಕ್ಕೆ ಬರುತ್ತಿರುತ್ತಾರೆ, ಹೋಗುತ್ತಿರುತ್ತಾರೆ :ಹೊರಗಿನಿಂದ ಪಕ್ಷಕ್ಕೆ ಬರ್ತಾರೆ, ಹೋಗ್ತಾರೆ. ಇದು ಬರೀ ಜೆಡಿಎಸ್​​​​ ಪಕ್ಷದಲ್ಲಿ ಆಗುವ ಬದಲಾವಣೆ ಅಲ್ಲ. ಎಲ್ಲಾ ಪಕ್ಷಗಳಲ್ಲೂ ನಡೆಯುವ ಪ್ರಕ್ರಿಯೆ. ಇವತ್ತಿನ ರಾಜಕಾರಣದಲ್ಲಿ ಪಕ್ಷ ನಿಷ್ಠೆಯ ಬದಲು ತಮ್ಮ ವೈಯಕ್ತಿಕ ಬೆಳವಣಿಗೆಯ ಕಡೆ ಗಮನಹರಿಸುವುದು ಹೆಚ್ಚಾಗಿದೆ. ಸಾಮಾನ್ಯ ಕಾರ್ಯಕರ್ತರಿಗೆ ಇರುವಷ್ಟು ನಿಷ್ಠೆ ಮಹಾನಾಯಕರು ಅಂತಾ ಕರೆಸಿಕೊಳ್ಳುವವರಿಗೆ ಇರುವುದಿಲ್ಲ ಎಂದು ಹೇಳಿದರು.

ಸಿ ಪಿ ಯೋಗೇಶ್ವರ ವೈಕ್ತಿಕವಾಗಿ ನನ್ನ ಸ್ನೇಹಿತ :ಕುಮಾರಸ್ವಾಮಿಯವರು ನನ್ನ ಸ್ನೇಹಿತರು ಎಂಬ ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ಯೋಗೇಶ್ವರ್​​​ ವೈಕ್ತಿಕವಾಗಿ ನನಗೂ ಸ್ನೇಹಿತರು. ಆದರೆ, ಕಾರ್ಯಕರ್ತರ ಕುತ್ತಿಗೆ ಕೂಯ್ದು ಸ್ನೇಹ ಉಳಿಸಿಕೊಳ್ಳಲು ಆಗಲ್ಲ. ವೈಕ್ತಿಕ ಸ್ನೇಹ ಬೇರೆ, ರಾಜಕೀಯವೇ ಬೇರೆ. ಯಡಿಯೂರಪ್ಪನವರೂ ಸಹ ನನಗೆ ಸ್ನೇಹಿತರು. ಹಾಗಂತಾ, ಪಕ್ಷ ಮತ್ತು ಕಾರ್ಯಕರ್ತರ ನಿಷ್ಠೆಗೆ ಮೋಸ ಮಾಡಲು ಆಗುತ್ತಾ ಎಂದರು.

ABOUT THE AUTHOR

...view details