ರಾಮನಗರ:ಬಿಡದಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಪರಿಶೋಧನಾ ಸಮಿತಿಯ ತಂಡ ಮಂಗಳವಾರ ಈಗಲ್‌ಟನ್ ರೆಸಾರ್ಟ್‌ಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು.
ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಈ ಸಮಿತಿಯ ಅಧ್ಯಕ್ಷರಾಗಿದ್ದು, ಅವರ ಜೊತೆಗೆ ಮಾಜಿ ಸ್ಪೀಕರ್ ರಮೇಶ್‌ಕುಮಾರ್, ಎಂಎಲ್‌ಸಿ ಶರವಣ ಸೇರಿ ಹಲವರು ರೆಸಾರ್ಟ್‌ಗೆ ಆಗಮಿಸಿ ಸರ್ಕಾರಿ ಜಾಗದ ನಕಾಶೆಯನ್ನ ವೀಕ್ಷಣೆ ಮಾಡಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಹಾಗೂ ರಾಮನಗರ ತಹಶೀಲ್ದಾರ್ ನರಸಿಂಹಮೂರ್ತಿಯಿಂದ ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಹೆಚ್.ಕೆ.ಪಾಟೀಲ್ ರೆಸಾರ್ಟ್‌ನ 508 ಎಕರೆ ಭೂಮಿಯಲ್ಲಿ ಸರ್ಕಾರದ್ದು 208 ಎಕರೆ ಇದೆ. ಅದರಲ್ಲಿ ಈಗ 28 ಎಕರೆ ಭೂಮಿಯನ್ನ ಸರ್ಕಾರಕ್ಕೆ ಬಿಟ್ಟುಕೊಡಬೇಕಿದೆ. ಜೊತೆಗೆ 77 ಎಕರೆ ಭೂಮಿಗೆ ಕಿಮ್ಮತ್ತು ಕಟ್ಟಬೇಕಿದ್ದು, ಆದರೆ ಈವರೆಗೂ ಕಟ್ಟಿಲ್ಲವೆಂದು ಹೇಳಿದರು.