ರಾಮನಗರ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ಥವ್ಯಸ್ತವಾಗಿದೆ. ರಾಮನಗರ ಜಿಲ್ಲೆಯಲ್ಲಿ ತಡರಾತ್ರಿ ವರುಣನ ಅಬ್ಬರ ಜೋರಾಗಿಯೇ ಇತ್ತು. ವರುಣನ ಅಬ್ಬರದಿಂದ ಮನೆಗಳೆಲ್ಲ ಸ್ವಿಮಿಂಗ್‌ಫೂಲ್‌ಗಳಂತಾಗಿ, ತಮ್ಮ ಮನೆಗಳಲ್ಲಿ ತುಂಬಿರುವ ನೀರನ್ನ ಹೊರಹಾಕುವಲ್ಲಿ ಜನರು ಹೈರಾಣಾದರು.
ಭಾರೀ ಮಳೆಯಿಂದಾಗಿ ತತ್ತರಿಸಿದ ಜನರು.. ಬಡಾವಣೆಗಳೆಲ್ಲ ಸಂಪೂರ್ಣ ಜಲಾವೃತ - ಎಪಿಎಂಸಿ ಮಾರುಕಟ್ಟೆ
ಎಪಿಎಂಸಿ ಮಾರುಕಟ್ಟೆ ಪಕ್ಕದಲ್ಲಿರುವ 22 ನೇ ವಾರ್ಡ್ ಮಳೆ ನೀರಿನಿಂದ ತುಂಬಿತ್ತು. ಬೆಂಗಳೂರು-ಮೈಸೂರು ಹೆದ್ದಾರಿಯ ಪಕ್ಕದಲ್ಲೇ ಇರುವ ಈ ಬಡಾವಣೆಯಲ್ಲಿ ಎಪಿಎಂಸಿ ಮಾರುಕಟ್ಟೆಯಲ್ಲಿ ಕೂಲಿಮಾಡಿ ಬದುಕುವ ಜನರೇ ಇದ್ದಾರೆ. ತಮಗೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಚನ್ನಪಟ್ಟಣ ನಗರದ ಎಪಿಎಂಸಿ ಮಾರುಕಟ್ಟೆ ಪಕ್ಕದಲ್ಲಿರುವ 22ನೇ ವಾರ್ಡ್‌ನಲ್ಲಿ ಮಳೆ ನೀರಿನಿಂದ ತುಂಬಿತ್ತು. ಬೆಂಗಳೂರು-ಮೈಸೂರು ಹೆದ್ದಾರಿಯ ಪಕ್ಕದಲ್ಲೇ ಇರುವ ಈ ಬಡಾವಣೆಯಲ್ಲಿ ಎಪಿಎಂಸಿ ಮಾರುಕಟ್ಟೆಯಲ್ಲಿ ಕೂಲಿ ಮಾಡಿ ಬದುಕುವ ಜನರೇ ಇದ್ದಾರೆ. 18 ವರ್ಷದಿಂದ ಈ ಬಡಾವಣೆಯಲ್ಲಿ ಜನರು ವಾಸ ಮಾಡುತ್ತಿದ್ದು, ಇಲ್ಲಿ ಯಾವುದೇ ಮೂಲಸೌಕರ್ಯ ಇಲ್ಲ.
ಮಳೆ ಬಂದರೆ ಪಕ್ಕದ ಹನುಮಂತನಗರ, ಟಿಪ್ಪುನಗರ, ಮಕ್ಕಾನ್ ಬಡಾವಣೆ ಸೇರಿ ನಗರದಲ್ಲಿನ ದೊಡ್ಡಮೋರಿಗಳ ನೀರೆಲ್ಲ ಇಲ್ಲಿಗೆ ಬಂದು ಸೇರುತ್ತದೆ. ಈ ಬಗ್ಗೆ ಚನ್ನಪಟ್ಟಣ ನಗರಸಭೆಗೆ ಸಾಕಷ್ಟು ದೂರು ಕೊಟ್ಟರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.