ಕರ್ನಾಟಕ

karnataka

ETV Bharat / state

ಕಸದಿಂದ ರಸ: ರಾಮನಗರದಲ್ಲಿ ಪ್ಲಾಸ್ಟಿಕ್‌ನಿಂದ ಇಂಧನ ಉತ್ಪಾದನೆ! - ರಾಮನಗರದಲ್ಲಿ ಪ್ಲಾಸ್ಟಿಕ್​ನಿಂದ ಇಂಧನ ತಯಾರಿ

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ದೊಡ್ಡಮರಳವಾಡಿ ಸಮೀಪದ ಭೀಮಸಂದ್ರದೊಡ್ಡಿಯಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳ ಮೂಲಕ ಪೆಟ್ರೋಲ್, ಡೀಸೆಲ್ ಉತ್ಪಾದಿಸುವ ಘಟಕ ಇತ್ತೀಚೆಗೆ ಆರಂಭಗೊಂಡಿದೆ.

uel preparing by plastic in Ramanagar
ಪ್ಲಾಸ್ಟಿಕ್​ನಿಂದ ಇಂಧನ

By

Published : Apr 23, 2021, 8:53 AM IST

Updated : Apr 23, 2021, 11:58 AM IST

ರಾಮನಗರ: ಕಸದ ತೊಟ್ಟಿ ಸೇರುತ್ತಿದ್ದ ಪ್ಲ್ಯಾಸ್ಟಿಕ್ ಕವರ್, ಬಾಟಲಿಗಳ ಮೂಲಕವೇ ಪೆಟ್ರೋಲ್, ಡೀಸೆಲ್ ಉತ್ಪಾದಿಸಲು ರಾಮನಗರ ಜಿಲ್ಲಾ ಪಂಚಾಯಿತಿ ಮುಂದಾಗಿದೆ. ಅದೂ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಎಂಬುದು ಮತ್ತೊಂದು ವಿಶೇಷ.

ರಾಮನಗರದಲ್ಲಿ ಪ್ಲಾಸ್ಟಿಕ್‌ನಿಂದ ಇಂಧನ ಉತ್ಪಾದನೆ!

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ದೊಡ್ಡಮರಳವಾಡಿ ಸಮೀಪದ ಭೀಮಸಂದ್ರದೊಡ್ಡಿಯಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳ ಮೂಲಕ ಪೆಟ್ರೋಲ್, ಡೀಸೆಲ್ ಉತ್ಪಾದಿಸುವ ಘಟಕ ಇತ್ತೀಚೆಗೆ ಆರಂಭಗೊಂಡಿದೆ. ಸಣ್ಣ ಕೈಗಾರಿಕೆಯಲ್ಲಿ ಶುರುವಾಗಿರುವ ಈ ಘಟಕ ಕೇವಲ 5 ಕಿಲೋ ವ್ಯಾಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಹಿಂದೆ ಗೋವಾ ರಾಜ್ಯದಲ್ಲಿಯು ಇದೇ ಮಾದರಿಯ ಕೈಗಾರಿಕೆಗಳು ಯಶಸ್ಸು ಕಂಡಿದ್ದವು.

ಇದನ್ನೇ ರಾಮನಗರ ಜಿಪಂ ಅಳವಡಿಸಿಕೊಳ್ಳಲು ಮುಂದಾಗಿದ್ದು, ಅಧಿಕಾರಿಗಳ ತಂಡ ಅಧ್ಯಯನ ನಡೆಸಿದೆ. ಭೀಮಸಂದ್ರದಲ್ಲಿನ ಖಾಸಗಿ ಕಾರ್ಖನೆಗೆ ಜಿಪಂ ಯೋಜನಾ ನಿರ್ದೇಶಕ ಶಿವಕುಮಾರ್ ನೇತೃತ್ವದ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.

ಪ್ಲಾಸ್ಟಿಕ್ ಮೂಲಕ ಪೆಟ್ರೋಲಿಯಂ ಉತ್ಪನ್ನಗಳನ್ನು ತಯಾರಿಸುವ ಸಂಬಂಧ ಚರ್ಚೆ ನಡೆಸಿದೆ. ಇದೇ ಮಾದರಿಯಲ್ಲಿ ಜಿಲ್ಲೆಯಲ್ಲಿನ 5 ಕಸ ವಿಲೇವಾರಿ ಘಟಕಗಳಲ್ಲಿ ಯಂತ್ರೋಪಕರಣಗಳನ್ನು ಅಳವಡಿಸಿ, ಪೆಟ್ರೋಲ್, ಡೀಸೆಲ್ ತಯಾರಿಸಲು ಸದ್ದಿಲ್ಲದೆ ಚಿಂತನೆ ನಡೆಸಿರುವುದು ವಿಶೇಷವಾಗಿದೆ.

ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿನ ಕಸ ವಿಲೇವಾರಿ ಘಟಕಗಳಲ್ಲಿ ಶೇಖರಣೆಯಾಗುವ ಪ್ಲಾಸ್ಟಿಕ್ ಮೂಲಕವೇ ಇಂಧನ ಉತ್ಪಾದನೆ ಮಾಡುವ ಮೂಲಕ ಸರ್ಕಾರದ ಮೇಲಿನ ಆರ್ಥಿಕ ಹೊರೆಯನ್ನು ಇಳಿಸಬಹುದಾಗಿದೆ.

Last Updated : Apr 23, 2021, 11:58 AM IST

For All Latest Updates

TAGGED:

ABOUT THE AUTHOR

...view details