ಕರ್ನಾಟಕ

karnataka

ETV Bharat / state

ಕನಕಪುರದ ಮರಳೆಗವಿ ಬಳಿ ಕಾರು ಸ್ಫೋಟ ಪ್ರಕರಣ: ನಾಲ್ವರ ಬಂಧನ

ಮರಳೆಗವಿ ಮಠದ‌ ಬಳಿ ನಡೆದಿದ್ದ ಕಾರು ಸ್ಫೋಟ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಜಿಲೆಟಿನ್ ಕಡ್ಡಿಯಿದ್ದ ಹಿನ್ನೆಲೆಯಲ್ಲಿ ಕಾರು ಸ್ಫೋಟಗೊಂಡಿದೆ ಎಂದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದ್ದು, ನಾಲ್ವರನ್ನು ಬಂಧಿಸಲಾಗಿದೆ.

ನಾಲ್ವರ ಬಂಧನ
ನಾಲ್ವರ ಬಂಧನ

By

Published : Aug 20, 2021, 1:17 PM IST

ರಾಮನಗರ: ಕನಕಪುರದ ಮರಳೆಗವಿ ಮಠದ ಪಕ್ಕದ ರಸ್ತೆಯಲ್ಲಿ ಕಾರಿನಲ್ಲಿ ಜಿಲೆಟಿನ್ ಸ್ಫೋಟಗೊಂಡು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಇತ್ತೀಚೆಗೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮರಳೆಗವಿ ಮಠದ ಪಕ್ಕದಲ್ಲಿ ಕಾರು ಸ್ಫೋಟಗೊಂಡು ಚಾಲಕ ಮಹೇಶ್​ನ ದೇಹ ಛಿದ್ರ ಛಿದ್ರವಾಗಿತ್ತು. ಇದೀಗ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಕಾರು ಸ್ಫೋಟವಾಗಿರುವುದು ಜಿಲೆಟಿನ್ ಕಡ್ಡಿಗಳಿಂದಲೇ ಎಂದು ತನಿಖೆ ವೇಳೆ ಖಚಿತವಾಗಿದೆ.

ನಾಲ್ವರ ಬಂಧನದ ಕುರಿತು ಮಾಹಿತಿ ನೀಡಿದ ಎಸ್​ಪಿ ಎಸ್. ಗಿರೀಶ್

ಪ್ರಕಾಶ್ ರಾವ್, ಸುನೀಲ್ ರಾವ್, ಹರೀಶ್ ಹಾಗೂ ರಾಮಣ್ಣ ಬಂಧಿತರು. ಮೃತ ಮಹೇಶ್ ಕನಕಪುರದಲ್ಲಿ ಲೈಸನ್ಸ್ ಹೊಂದಿದ್ದವರ ಬಳಿ ದುಪ್ಪಟ್ಟು ಹಣ ನೀಡಿ ಒಂದು ಪ್ಯಾಕ್ ಜಿಲೆಟಿನ್ ಕಡ್ಡಿಗಳ ಬಾಕ್ಸ್ ಖರೀದಿ ಮಾಡಿದ್ದ. ಈ ಜಿಲೆಟಿನ್ ಕಡ್ಡಿಗಳನ್ನು ಕಾರಿನಲ್ಲಿ ಇರಿಸಿಕೊಂಡಿದ್ದ ವೇಳೆ ಕಾರು ಸ್ಫೋಟಗೊಂಡಿತ್ತು. ಆದ್ರೆ ಈ ಜಿಲೆಟಿನ್ ಕಡ್ಡಿ ಹೇಗೆ ಸ್ಫೋಟಗೊಂಡಿತ್ತು ಎಂಬುದು ಎಫ್.ಎಸ್.ಎಲ್ ವರದಿಯಿಂದ ಗೊತ್ತಾಗಬೇಕಿದೆ. ಕನಕಪುರ ಸೇರಿದಂತೆ ಜಿಲ್ಲೆಯಲ್ಲಿ ಸಾಕಷ್ಟು ಕಲ್ಲು ಗಣಿಗಳಿದ್ದು, ಅಕ್ರಮವಾಗಿ ಸ್ಪೋಟಕಗಳನ್ನ ಸಂಗ್ರಹಣೆ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.

ಕಾರು ಸ್ಫೋಟದ ಕುರಿತು ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಪೊಲೀಸರು, ಇದೀಗ ನಾಲ್ವರನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.

ABOUT THE AUTHOR

...view details