ರಾಮನಗರ: ಇಂದು ನಿಧನರಾದ ಹಿರಿಯ ಮುಖಂಡರಾದ ಸಿಂ.ಲಿಂ.ನಾಗರಾಜ್ ಅವರ ಅಂತಿಮ ದರ್ಶನವನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪಡೆದರು. ಈ ವೇಳೆ ನಾಗರಾಜ್ ಜೊತೆ ತಮ್ಮ ಒಡನಾಟವನ್ನು ನೆನೆದು ಹೆಚ್‌ಡಿಡಿ ಕಂಬನಿ ಮಿಡಿದರು.
ಚನ್ನಪಟ್ಟಣ ತಾಲೂಕಿನ ಸಿಂಗರಾಜಿಪುರಕ್ಕೆ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಜೊತೆಗೆ ಹೆಚ್.ಡಿ.ದೇವೇಗೌಡರು ಭೇಟಿ ನೀಡಿ ಸಿಂಲಿಂ ಅಂತಿಮ ನಮನ ಸಲ್ಲಿಸಿದರು. ಸುದೀರ್ಘ 50 ವರ್ಷದ ಒಡನಾಟ ಹೊಂದಿದ್ದ ಸಿಂ.ಲಿಂ.ನಾಗರಾಜ್ ದೇವೇಗೌಡರ ಅತ್ಯಾಪ್ತರಾಗಿದ್ದರು. ಇಂದು ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದರು.
ಕಣ್ಣೀರಿಟ್ಟ ಮಾಜಿ ಪ್ರಧಾನಿ:ತನ್ನ ನೆಚ್ಚಿನ ಕಾರ್ಯಕರ್ತನಾದ ಸಿಂಲಿಂ ಸಾವಿಗೆ ಕಣ್ಣೀರಿಟ್ಟ ಮಾಜಿ ಪ್ರಧಾನಿ, ಮಾತನಾಡುತ್ತ ಗದ್ಗದಿತರಾದರು. ಇದು ನಿಜಕ್ಕೂ ದುರಂತ. ಮನೆಗೆ ಬರ್ತೀನಿ ಎಂದು ತಿಳಿಸಿದ್ದೆ. ಆದರೆ, ಇಂದು ಅಂತಿಮ ದರ್ಶನಕ್ಕೆ ಬಂದಿದ್ದೇನೆ. ಇದು ದುರಂತ ಎಂದು ದೇವೇಗೌಡರು ಕಣ್ಣೀರು ಹಾಕಿದರು.
ಕಣ್ಣು ದಾನ ಮಾಡಿದ ಸಿಂಲಿಂ :ಸಾವಿನಲ್ಲೂ ಸಾರ್ಥಕತೆ ಮೆರೆದ ಸಿಂಲಿಂ ನಾಗರಾಜ್. ತಮ್ಮ ಎರಡು ಕಣ್ಣುಗಳನ್ನು ದಾನ ಮಾಡಿದ್ದಾರೆ. ಬಿಡದಿ ಡಾ.ರಾಜ್ ಕುಮಾರ್ ನೇತ್ರ ಸಂಗ್ರಹಣದ ಮಂಜುನಾಥ್ ನೇತೃತ್ವದಲ್ಲಿ ಕಣ್ಣುಗಳನ್ನ ಸಂಗ್ರಹಿಸಲಾಯಿತು.
ಇದನ್ನೂ ಓದಿ:ದೇವೇಗೌಡರ ಒಡನಾಡಿ, ಹಿರಿಯ ಜೆಡಿಎಸ್ ಮುಖಂಡ ಸಿಂ ಲಿಂ ನಾಗರಾಜ್ ನಿಧನ